Site icon Vistara News

Fashion News: ಯಶಸ್ವಿಯಾದ ಮಾಯಾ-2023 ಪಿಇಎಸ್‌ ಅಂತರ್ ಕಾಲೇಜು ಫ್ಯಾಷನ್‌ ಶೋ

Fashion News

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಂದಕ್ಕಿಂತ ಒಂದು ಕಾಲೇಜಿನ ವಿದ್ಯಾರ್ಥಿಗಳ ಫ್ಯಾಷನ್‌ ಶೋ (Fashion News) ಆಕರ್ಷಕವಾಗಿತ್ತು. ನೋಡಲು ಮನಮೋಹಕವಾಗಿ ಕೆಲವರು ಹೆಜ್ಜೆ ಹಾಕಿದರೇ, ಮತ್ತೆ ಕೆಲವರು ವಾವ್‌! ಎನಿಸುವಂತಹ ಡಿಸೈನರ್‌ವೇರ್‌ಗಳನ್ನು ಧರಿಸಿ ಕ್ಯಾಟ್‌ ವಾಕ್‌ ಮಾಡಿದರು. ಮತ್ತೆ ಕೆಲವು ವಿದ್ಯಾರ್ಥಿಗಳು ಡಿಫರೆಂಟ್‌ ಲುಕ್‌ನಲ್ಲಿ ನೆರೆದಿದ್ದವರ ಗಮನ ಸೆಳೆದರು. ಎಲ್ಲರೂ ತಂತಮ್ಮ ಡಿಸೈನರ್‌ವೇರ್‌ನಲ್ಲಿ ನಡಿಗೆ ಹಾಕಿ ಜ್ಯೂರಿ ಟೀಮ್‌ನ ಮನ ಗೆದ್ದರು. ಅಂದಹಾಗೆ, ಉದ್ಯಾನನಗರಿಯ ಪಿಇಎಸ್‌ ಯೂನಿವರ್ಸಿಟಿಯ ಬ್ರಾಂಚ್‌ನ ವಾರ್ಷಿಕೋತ್ಸವದಂದು ಮಾಯಾ 2023 ಹೆಸರಿನಲ್ಲಿ ನಡೆದ ಅಂತರ ಕಾಲೇಜು ಫ್ಯಾಷನ್‌ ಶೋನ ಝಲಕ್‌ ಇದು. ಮಿಸೆಸ್‌ ಇಂಡಿಯಾ ಕರ್ನಾಟಕ 2016 ಶುಭಾ ಶ್ರೀರಾಮ್‌ ಹಾಗೂ ಸೂಪರ್‌ ಮಾಡೆಲ್‌ಹಾಗೂ ನಟ ಸಂತೋಷ್‌ ರೆಡ್ಡಿ ಜ್ಯೂರಿ ಟೀಮ್‌ನಲ್ಲಿದ್ದರು.

ಶುಭಾ ಶ್ರೀ ರಾಮ್ ಫ್ಯಾಷನ್‌ ಮಾತು

ಅಂತರ ಕಾಲೇಜು ಫ್ಯಾಷನ್‌ ಶೋನ ಜಡ್ಜ್‌ ಆಗಿ ಭಾಗವಹಿಸಿದ್ದ ಮಿಸೆಸ್‌ ಇಂಡಿಯಾ ಕರ್ನಾಟಕ ಶುಭಾ ಶ್ರೀ ರಾಮ್‌, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇದುವರೆಗೂ ನಾನು ಬಹಳಷ್ಟು ಕಾಲೇಜಿನ ಫ್ಯಾಷನ್‌ ಶೋಗಳಿಗೆ ಜಡ್ಜ್‌ ಆಗಿ ಹೋಗಿದ್ದೇನೆ. ಆದರೆ, ಈ ಬಾರಿ ಪಿಇಎಸ್‌ ಕಾಲೇಜಿನ ಬ್ರಾಂಚ್‌ನಲ್ಲಿ ನಡೆದ ಈ ಅಂತರ ಕಾಲೇಜಿನ ಮಧ್ಯೆ ನಡೆದ ಫ್ಯಾಷನ್‌ ಶೋ ನಿಜಕ್ಕೂ ಅದ್ಭುತವಾಗಿತ್ತು. ಫ್ಯಾಷನ್‌ ಕ್ಷೇತ್ರದಲ್ಲಿ ಇಂದಿನ ಜನರೇಷನ್‌ಗಿರುವ ಆಸಕ್ತಿ ಹಾಗೂ ಕ್ರಿಯೇಟಿವಿಟಿ ಕುರಿತಂತೆ ಕಣ್ಣಾರೆ ಕಂಡು ಸಂತಸವಾಯಿತು. ಎಲ್ಲದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿನ ಉತ್ಸಾಹ ಹಾಗೂ ಫ್ಯಾಷನ್‌ ಥೀಮ್‌ ವಿಷಯಗಳು , ಕಾಸ್ಟ್ಯೂಮ್ಸ್, ಆತ್ಮವಿಶ್ವಾಸದಿಂದ ರ‍್ಯಾಂಪ್‌ ವಾಕ್‌ ಮಾಡಿದ ಮಾಡೆಲ್‌ಗಳು ಸೇರಿದಂತೆ ಎಲ್ಲವನ್ನು ನೋಡಿ, ಮುಂದೊಮ್ಮೆ ಇವರೆಲ್ಲರೂ ಫ್ಯಾಷನ್‌ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸ ಉಂಟಾಯಿತು ಎಂದಿದ್ದಾರೆ.

“ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಕಾಲೇಜಿನ ಟೀಮ್‌ ತಮ್ಮದೇ ಆದ ಫ್ಯಾಷನ್‌ ಕ್ರಿಯೇಟಿವಿಟಿ ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ಪ್ರತಿ ವಿದ್ಯಾರ್ಥಿಗಳ ಪರಿಶ್ರಮ ಎದ್ದು ಕಾಣುತ್ತಿತ್ತು. ನಿಜಕ್ಕೂ ಇದೊಂದು ಅವಿಸ್ಮರಣಿಯ ಕ್ಷಣ” ಎಂದೆನಿಸಿತು ಎಂದು ಶುಭಾ ಶ್ರೀ ರಾಮ್‌ ಹಾಡಿ ಹೊಗಳಿದರು. ನಂತರ ಸೂಪರ್‌ ಮಾಡೆಲ್‌ ಸಂತೋಷ್‌ ರೆಡ್ಡಿ ಹಾಗೂ ಶುಭಾ ಶ್ರೀರಾಮ್‌, ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ರ‍್ಯಾಂಪ್‌ ವಾಕ್‌ ಮಾಡಿದರು.

ವಿಜೇತ ಕಾಲೇಜಿನ ಫ್ಯಾಷನ್‌ ಟೀಮ್‌

ಸುಮಾರು 10 ಕಾಲೇಜುಗಳ ತಂಡ ಈ ಶೋನಲ್ಲಿ ಪಾಲ್ಗೊಂಡಿದ್ದವು. ಅವುಗಳಲ್ಲಿ, ಪಿಇಎಸ್‌ ಕಾಲೇಜು ಹಾಗೂ ಆರ್‌. ಆರ್‌ ನಗರದ ಬ್ರಾಂಚ್‌ ಗಳು ಅತ್ಯಾಕರ್ಷಕ ಶೋ ನೀಡಿ, ವಿಜೇತರ ಪಟ್ಟಿ ಸೇರಿದವು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version