ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರ್ಷದ ಕೊನೆಯ (Year Ender 2023) ಫ್ಯಾಷನ್ ಟ್ರೆಂಡ್‌ನಲ್ಲಿ ಇದೀಗ ಬೆಚ್ಚಗಿಡುವ ಸ್ವೆಟರ್ ಡ್ರೆಸ್‌ಗಳು ಲಗ್ಗೆ ಇಟ್ಟಿವೆ. ವೈವಿಧ್ಯಮಯ ಶೇಡ್‌ಗಳಲ್ಲಿ ಹಾಗೂ ವಿನ್ಯಾಸದಲ್ಲಿ ಎಂಟ್ರಿ ನೀಡಿರುವ ಇವು ಸಂಜೆ ಪಾರ್ಟಿ ಹಾಗೂ ಔಟಿಂಗ್‌ಗೆ ಸಾಥ್ ನೀಡುತ್ತಿವೆ.
ಚಳಿಗಾಲಕ್ಕೆ ಸ್ವೆಟರ್ ಡ್ರೆಸ್
“ಚಳಿಗಾಲ ಬಂತೆಂದರೇ ಸ್ವೆಟರ್, ಸ್ಕಾರ್ಫ್, ಟೋಪಿ, ಶಾಲು ಹೀಗೆ ಎಲ್ಲವೂ ವಾರ್ಡ್‌ರೋಬ್‌ನಿಂದ ಹೊರಬರುತ್ತವೆ. ಹೊಸ ವಿನ್ಯಾಸದಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳಿಗೆ ಸಾಥ್ ನೀಡುವ ನಾನಾ ಬಗೆಯ ಸ್ವೆಟರ್ ಡ್ರೆಸ್‌ಗಳೂ ಯುವತಿಯರ ಮನಗೆದ್ದಿವೆ. ಸ್ವೆಟರ್ ಡ್ರೆಸ್‌ಗಳು ವಿಂಟರ್ ಸೀಸನ್‌ನಲ್ಲಿ ಹಾಟ್ ಕೇಕ್‌ಗಳಂತೆ ಬಿಕರಿಯಾಗುತ್ತವೆ. ನೋಡಲು ಡ್ರೆಸ್‌ಗಳಂತೆ ಕಾಣುವ ಇವು ಮೈಯನ್ನು ಬೆಚ್ಚಗಿಡುತ್ತವೆ. ಜತೆಗೆ ಕಂಫರ್ಟಬಲ್ ಫೀಲ್ ನೀಡುತ್ತವೆ. ವುಲ್ಲನ್‌ದಾದ್ದಲ್ಲಿ ಹೆಚ್ಚು ಬೆಚ್ಚಗಿಡುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇವನ್ನು ಧರಿಸುವ ಮುನ್ನ ಇನ್ನರ್ ಸ್ಲಿವ್‌ಲೆಸ್ ಟಾಪ್ ಧರಿಸುವುದು ಉತ್ತಮ. ಯಾಕೆಂದರೆ, ಸೆಕೆಯಾದಲ್ಲಿ ತೆಗೆದಿಡಬಹುದು. ಕೆಲವು ಸ್ವೆಟರ್ ಡ್ರೆಸ್‌ಗಳು ನೋಡಲು ಸೇಮ್ ಸಾಮಾನ್ಯ ಔಟ್‌ಫಿಟ್‌ನಂತೆಯೇ ಕಾಣುತ್ತವೆ. ಇವುಗಳನ್ನು ಬೇಕಾದಲ್ಲಿ ಪ್ಯಾಂಟ್ ಜೊತೆಗೂ ಧರಿಸಬಹುದು ಎನ್ನುತ್ತಾರೆ.
ವೈವಿಧ್ಯಮಯ ಸ್ವೆಟರ್ ಡ್ರೆಸ್‌ಗಳು
ಟರ್ಟಲ್ ನೆಕ್, ಸ್ವಿಂಗ್ ನೆಕ್‌ಲೈನ್, ತ್ರೀ ಫೋರ್ತ್, ಬಲೂನ್ ಸ್ಲೀವ್, ಕೋಲ್ಡ್ ಶೋಲ್ಡರ್ ಸ್ವೆಟರ್ ಡ್ರೆಸ್‌ಗಳು ಎಷ್ಟು ಟ್ರೆಂಡಿಯಾಗಿದ್ದಾವೆಂದರೇ, ಇಂದು ಎಲ್ಲಾ ವಯಸ್ಸಿನ ಮಹಿಳೆಯರು ಧರಿಸತೊಡಗಿದ್ದಾರೆ. ಸ್ವೆಟರ್ ಡ್ರೆಸ್‌ಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು ಎನ್ನುವ ಮಾಡೆಲ್ ದೀಪ್ತಿ ಪ್ರಕಾರ, ಇದೀಗ ನಮ್ಮಲ್ಲೂ ಇವುಗಳನ್ನು ಯುವತಿಯರು ಇಷ್ಟಪಡತೊಡಗಿದ್ದಾರೆ. ಹಾಗಾಗಿ ಇಲ್ಲಿನ ಲೋಕಲ್ ಬ್ರಾಂಡ್‌ಗಳು ಇಂತಹ ವಿನ್ಯಾಸವನ್ನು ಸಿದ್ಧಪಡಿಸತೊಡಗಿವೆ ಎನ್ನುತ್ತಾರೆ.
ಸ್ವೆಟರ್ ಡ್ರೆಸ್ ನಿರ್ವಹಣೆ
ಸ್ವೆಟರ್ ಡ್ರೆಸ್ ಯಾವುದೇ ವಿನ್ಯಾಸ ಇರಲಿ, ಅವುಗಳ ನಿರ್ವಹಣೆ ಬಗ್ಗೆ ಗಮನ ನೀಡುವುದು ಅಗತ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಹೆಚ್ಚು ಒಗೆಯಕೂಡದು. ಆದಷ್ಟೂ ಕೈಗಳಲ್ಲೆ ಉಜ್ಜಿ , ತೊಳೆದು ಹಿಂಡದೆ ಬಿಸಿಲಲ್ಲಿ ಉಲ್ಟಾ ಮಾಡಿ ಒಣಗಿ ಹಾಕಬೇಕು. ಇಲ್ಲವಾದಲ್ಲಿಇವು ಬೇಗ ಮಾಸಬಹುದು ಅಥವಾ ಹಳತರಂತೆ ಕಾಣಬಹುದು. ಡ್ರೈ ವಾಶ್ ಬೆಸ್ಟ್ ಅಪ್ಷನ್.
ಸ್ವೆಟರ್ ಡ್ರೆಸ್ ಪ್ರಿಯರಿಗಾಗಿ ಟಿಪ್ಸ್
- ತೀರಾ ಚಳಿಯಿರುವ ಸ್ಥಳದಲ್ಲಿ ಧರಿಸಬಹುದು.
- ರಾತ್ರಿ ಪಾರ್ಟಿಗಳಿಗೆ ಹೇಳಿ ಮಾಡಿಸಿದ ಡ್ರೆಸ್ಕೋಡ್.
- ಟಿನೇಜ್ ಹುಡುಗಿಯರು ಫ್ರಾಕ್ನಂತವನ್ನು ಧರಿಸಬಹುದು.
- ಬೇಕಿದ್ದಲ್ಲಿ ಕೇಪ್ರೀಸ್ ಹಾಗೂ ಪ್ಯಾಂಟ್ ಮಿಕ್ಸ್ ಮ್ಯಾಚ್ ಕೂಡ ಮಾಡಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Fashion: ವಿಂಟರ್ ಫ್ಯಾಷನ್‌ಗೆ ಮರಳಿದ ಆಕರ್ಷಕ ವುಲ್ಲನ್ ಪೊಂಚೊ