ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ರೋಮ್ ಶಿಮ್ಮರ್ ಐ ಮೇಕಪ್ (Winter Eye Makeup) ವಿಂಟರ್ ಸೀಸನ್ ಪಾರ್ಟಿ ಪ್ರಿಯರನ್ನು ಸೆಳೆದಿದೆ. ಗ್ಲಾಮರಸ್ ಮಾನಿನಿಯರನ್ನು ಆಕರ್ಷಿಸಿದೆ. ಹೌದು. ಈ ಬಾರಿಯ ವಿಂಟರ್ ಸೀಸನ್‌ನಲ್ಲಿ ಹಚ್ಚಿದರೇ ಮಿನುಗುವ ಕಣ್ಮನ ಸೆಳೆಯುವ ಶಿಮ್ಮರ್ ಕ್ರೋಮ್ ಐ ಮೇಕಪ್ ಫ್ಯಾಷನ್ ಟ್ರೆಂಡಿಯಾಗಿದೆ. ಹುಡುಗಿಯರು ಮಾತ್ರವಲ್ಲ, ಪಾರ್ಟಿ ಪ್ರಿಯ ಯುವತಿಯರು, ಕಾರ್ಪೋರೇಟ್ ಮಾನಿನಿಯರು ಈ ಮೇಕಪ್‌ನಲ್ಲಿ ನೋಡುಗರನ್ನು ಸೆಳೆಯುತ್ತಿದ್ದಾರೆ. ಈ ಐ ಮೇಕಪ್ ಯಾವ ಬಗೆಯ ಸಂಚಲನ ಮೂಡಿಸಿದೆಯೆಂದರೇ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಇವ್ ಪಾರ್ಟಿಗಳು ಮುಗಿದರೂ ಕೂಡ ಸಾಮಾನ್ಯ ಬರ್ತ್ ಡೇ ಪಾರ್ಟಿ, ಆಫೀಸ್ ಪಾರ್ಟಿ, ಹಾಲಿಡೇ ಪಾರ್ಟಿ, ಕಾರ್ಪೋರೇಟ್ ವೆಕೆಷನ್ ಪಾರ್ಟಿಗಳಲ್ಲಿ ಮಾನಿನಿಯರನ್ನು ಇಂದಿಗೂ ಆವರಿಸಿಕೊಂಡಿದೆ ಎನ್ನುತ್ತಾರೆ ಸೌಂದರ್ಯ ತಜ್ಞರು.
ಐ ಮೇಕಪ್ ಜಾದೂ
ಅಂದಹಾಗೆ, ಐ ಮೇಕಪ್‌ಗೆ ನಾವುಗಳು ಕೇವಲ ಸೌಂದರ್ಯ ತಜ್ಞರನ್ನೇ ಆಶ್ರಯಿಸಬೇಕಾಗಿಲ್ಲ! ಖುದ್ದು ನಾವುಗಳೇ ಮೇಕಪ್ ಮಾಡಿಕೊಳ್ಳಬಹುದು. ಅದಕ್ಕಾಗಿ ಒಂದಿಷ್ಟು ಕಲಾತ್ಮಕ ಮನಸ್ಸಿರಬೇಕು ಎನ್ನುತ್ತಾರೆ ಐ ಮೇಕಪ್ ಸ್ಪೆಷಲಿಸ್ಟ್ ದಿಶಾ. ಅವರ ಪ್ರಕಾರ, ಒಂದಿಷ್ಟು ಕ್ರೋಮ್ ಐ ಮೇಕಪ್ ಶೇಡ್‌ಗಳಿದ್ದಲ್ಲಿ, ಬ್ಯೂಟಿ ಬ್ಲಾಗ್‌ಗಳಲ್ಲಿ ಹಾಗೂ ಯೂ ಟ್ಯೂಬ್ ಮೇಕಪ್ ಟ್ಯೂಟೋರಿಯಲ್ ವಿಡಿಯೋ ಕ್ಲಿಪ್‌ಗಳಲ್ಲಿ ತೋರಿಸುವ ಪಾಠಗಳಿಂದಲೇ ಮೇಕಪ್ ಕಲಿಯಬಹುದು. ಆ ಮಟ್ಟಿಗೆ ಇವು ಹಚ್ಚಲು ಸುಲಭವಾಗಿರುತ್ತವೆ. ಅಲ್ಲದೇ ಕ್ರೋಮ್ ಮೇಕಪ್‌ನ ಒಂದು ಶೇಡನ್ನು ಲೇಪಿಸಿದರಾಯಿತು. ಇಡೀ ಕಣ್ಣಿನ ಅಂದವವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.
ಜಗಮಗಿಸುವ ಐ ಮೇಕಪ್
ಸದ್ಯ ಗೋಲ್ಡ್, ಸಿಲ್ವರ್ ಅತಿ ಹೆಚ್ಚು ಟ್ರೆಂಡಿಯಾಗಿದೆ. ಇನ್ನು ಉಡುಪುಗಳ ಮ್ಯಾಚಿಂಗ್‌ಗೆ ತಕ್ಕಂತೆಯೂ ಕಲರ್ ಚೂಸ್ ಮಾಡಬಹುದು. ಮೊದಲಿಗೆ ಕಣ್ಣಿನ ಮೇಲೆ ನಿಮಗೆ ಅಗತ್ಯವಿರುವ ಷ್ಟು ಡಾರ್ಕ್ ಅಥವಾ ಲೈಟಾಗಿ ಬ್ರಶ್ ಮೂಲಕ ಐ ಶ್ಯಾಡೋ ಹಚ್ಚಿ. ಬೇಕಿದ್ದಲ್ಲಿ ತೆಳುವಾದ ಲೈನರ್ ಎಳೆಯಿರಿ. ಮಸ್ಕರಾ ಕೂಡ ಹಚ್ಚಿ. ಇಷ್ಟೇ! ಇನ್ನುಳಿದಂತೆ ಹಚ್ಚಿದ ಮಿನುಗುವ ಕ್ರೋಮ್ ಶೇಡ್ಸ್ ಕಣ್ಣನ್ನು ಆಕರ್ಷಕವಾಗಿಸುತ್ತದೆ ಎನ್ನುತ್ತಾರೆ.
ಐ ಮೇಕಪ್ ಕಿಟ್ ಆಯ್ಕೆ
- ಬ್ರಾಂಡೆಡ್ ಐ ಮೇಕಪ್ ಶೇಡ್ಸ್ ಬಳಸಿ.
- ಕಣ್ಣಿನ ಒಳಗೆ ಹೋಗದಂತೆ ಮೇಕಪ್ ಮಾಡಿ.
- ಮಲಗುವ ಮುನ್ನ ತೆಗೆದು ನಂತರ ಮಲಗಿ.
- ಲೇಪಿಸಿದ ನಂತರ ಕಣ್ಣನ್ನು ಉಜ್ಜಬೇಡಿ.
- (ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Fashion: ಚಳಿಗಾಲದಲ್ಲಿ ಟಿನೇಜ್ ಹುಡುಗಿಯರನ್ನು ಆಕರ್ಷಿಸಿದ 3 ಶೈಲಿಯ ಲೇಯರ್ ಲುಕ್