ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯಲ್ಲಿ (Wedding Jewellery Fashion) ಮದುಮಗಳ ಸೌಂದರ್ಯವನ್ನು ಹೆಚ್ಚಿಸುತ್ತಿರುವ ಸೊಂಟಪಟ್ಟಿ (ಕಮರ್‌ಬಾಂದ್)ಗಳು ಇದೀಗ ವೆಡ್ಡಿಂಗ್ ಜ್ಯುವೆಲರಿಗಳ ಟಾಪ್ ಲಿಸ್ಟ್‌ನಲ್ಲಿದ್ದು, ಮದುವೆಯಲ್ಲಿ ಬಳಸುವ ಮಸ್ಟ್ ಆಕ್ಸೆಸರೀಸ್‌ನಲ್ಲೊಂದಾಗಿವೆ.
“ರೇಷ್ಮೆ ಸೀರೆಯೊಂದಿಗೆ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣುವ ಇವು ಪ್ರತಿ ಮದುಮಗಳ ಚಾಯ್ಸ್‌ನಲ್ಲಿ ಸ್ಥಾನ ಪಡೆದಿವೆ. ಆಯಾ ರೇಷ್ಮೆ ಸೀರೆಗೆ ಹೊಂದುವಂತಹ ನಾನಾ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಹಾಗಾಗಿ ಇಂದು ಬ್ರೈಡಲ್ ಜ್ಯುವೆಲರಿಯ ಮಸ್ಟ್ ಆಕ್ಸೆಸರೀಸ್‌ನಲ್ಲೊಂದಾಗಿವೆ. ಗ್ರ್ಯಾಂಡ್ ಲುಕ್ ನೀಡುವ ಇವು ಇದೀಗ ಮದುವೆಯ ಆಭರಣಗಳ ಟಾಪ್ ಲಿಸ್ಟ್‌ನಲ್ಲಿವೆ” ಎನ್ನುತ್ತಾರೆ ಜ್ಯುವೆಲರಿ ಸ್ಟೈಲಿಸ್ಟ್ ರೀಟಾ.
ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ?
ಆಂಟಿಕ್, ಟೆಂಪಲ್ ಡಿಸೈನ್ಸ್, ಕ್ರಿಸ್ಟಲ್, ಜರ್ಕೋನ್, ಕುಂದನ್ ಸೇರಿದಂತೆ ನಾನಾ ಬಗೆಯ ವೆಡ್ಡಿಂಗ್ ಜ್ಯುವೆಲರಿಗಳ ಸೆಟ್‌ನೊಂದಿಗೆ ಆಗಮಿಸಿದ್ದು ಒಂದಕ್ಕಿಂತ ಒಂದು ಬೆಸ್ಟ್ ಡಿಸೈನ್‌ಗಳು ಕಾಲಿಟ್ಟಿವೆ. ಸಾದಾ ಬೆಲ್ಟ್ ಸೊಂಟಪಟ್ಟಿ ಕೂಡ ಚಾಲ್ತಿಯಲ್ಲಿದೆ. ಇತರೇ ಜ್ಯುವೆಲರಿ ಸೆಟ್‌ನೊಂದಿಗೆ ಧರಿಸುವುದರಿಂದ ಆಯಾ ವಿನ್ಯಾಸದವನ್ನೇ ಮ್ಯಾಚ್ ಮಾಡುವುದು ಕಾಮನ್ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಿಯಾ.
ರೇಷ್ಮೆ ಸೀರೆಗೆ ಕಮರ್‌ಬಾಂದ್ ಇರಲಿ
ಇಂದು ಮದುವೆ ಮನೆಗಳಲ್ಲಿ ಕೇವಲ ಮದುಮಗಳು ಮಾತ್ರವಲ್ಲ, ಆಕೆಯ ಸ್ನೇಹಿತೆಯರು ಹಾಗೂ ಅಕ್ಕ-ತಂಗಿಯರು ಮತ್ತು ಕುಟುಂಬ ವರ್ಗದವರು ಕೂಡ ಕಮರ್‌ಬಾಂದ್ ಧರಿಸುವುದು ಕಾಮನ್ ಆಗಿದೆ. ಇದಕ್ಕೆ ಕಾರಣ ಗ್ರ್ಯಾಂಡ್ ಲುಕ್. ಇನ್ನು ಸೀರೆಯೊಂದಿಗೆ ಧರಿಸುವ ಕಮರ್‌ಬಾಂದ್‌ಗಳು ಬೇರೇ, ಗಾಗ್ರ, ಲೆಹೆಂಗಾದೊಂದಿಗೆ ಧರಿಸುವ ಕಮರ್‌ಬಾಂದ್‌ಗಳು ಬೇರೇ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾಗಿ ಇವನ್ನು ಧರಿಸುವಾಗ ಮೊದಲೇ ಟ್ರಯಲ್ ನೋಡಿ ಮ್ಯಾಚ್ ಮಾಡಬೇಕು ಎಂದು ಸಲಹೆ ನೀಡುತ್ತಾರೆ.
ಸೊಂಟಪಟ್ಟಿಗೆ ಒಂದೈದು ಟಿಪ್ಸ್
- ಮದುವೆಯಲ್ಲಿ ಸೊಂಟಪಟ್ಟಿ ಧರಿಸುವಾಗ ಆದಷ್ಟೂ ಬಂಗಾರ ವರ್ಣದ್ದಾಗಿರಲಿ.
- ಇಂಡೋ-ವೆಸ್ಟರ್ನ್ ಎಥ್ನಿಕ್ ಔಟ್ಫಿಟ್ ಆದಲ್ಲಿ ಇತರೇ ಡಿಸೈನ್ನದ್ದು ಮ್ಯಾಚ್ ಆಗುತ್ತದೆ.
- ಪ್ಲಸ್ ಸೈಝ್ನವರು ಧರಿಸುವಾಗ ಆದಷ್ಟೂ ಲೂಸಾಗಿ ಹಾಕಿಕೊಳ್ಳಿ.
- ಸೊಂಟಪಟ್ಟಿ ಬೆಲ್ಟ್ ಆದಲ್ಲಿ ಸೊಂಟದಿಂದ ಮೇಲೇ ಸೊಂಟಪಟ್ಟಿ ಧರಿಸುವ ಫ್ಯಾಷನ್ ಇದೀಗ ಟ್ರೆಂಡಿಯಾಗಿದೆ.
- ಬಂಗಾರ ವರ್ಣದ ಸೊಂಟಪಟ್ಟಿ ಸಾದಾ ಇರುವ ಬೆಲ್ಟ್ ಟ್ರೆಂಡ್ನಲ್ಲಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸಮ್ಮರ್ ಫಂಕಿ ಲುಕ್‌ಗಾಗಿ ಮಿರರ್ಡ್ ಸನ್‌ಗ್ಲಾಸ್