ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ ಮಾಧವನ್ ಮೊದಲ ಬಾರಿ ಸಿಕ್ವೀನ್ಸ್ ಸೂಟ್‌ನಲ್ಲಿ ಕಾಣಿಸಿಕೊಂಡು, ಮೆನ್ಸ್ ಶಿಮ್ಮರ್ ಸೂಟ್ ಫ್ಯಾಷನ್ ಟ್ರೆಂಡ್‌ಗೆ ಸೈ ಎಂದಿದ್ದಾರೆ. ಸಾಮಾನ್ಯವಾಗಿ ಕಾರ್ಪೋರೇಟ್ ಕ್ಷೇತ್ರದ ಯುವಕರಿಂದಿಡಿದು ಎಲ್ಲಾ ವಯಸ್ಸಿನ ಪುರುಷರು ಧರಿಸುವ ಡಿಸೆಂಟ್ ಸೂಟ್ (Star sequins Suit Fashion) ಲುಕ್ ಇದೀಗ ಸೈಡಿಗೆ ಸರಿದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ, ನಟ ಮಾಧವನ್ ಅವರು ಜಗಮಗಿಸುವ ಪಾರ್ಟಿವೇರ್ ಸಿಕ್ವೀನ್ಸ್ ಸೂಟ್ ಧರಿಸಿ, ಮೆನ್ಸ್ ಫಾರ್ಮಲ್ ಸೂಟ್ ಫ್ಯಾಷನ್‌ನಲ್ಲಿ ಹೊಸ ಬದಲಾವಣೆ ತಂದಿದ್ದಾರೆ.
ಹೈ ಫ್ಯಾಷನ್‌ನಲ್ಲಿ ಸಿಕ್ವೀನ್ಸ್ ಸೂಟ್
“ಪುರುಷರು ಧರಿಸುವ ಸೂಟ್ ಎಂದಾಕ್ಷಣಾ ಹೀಗೆಯೇ ಇರಬೇಕು ಎಂಬ ಅಘೋಷಿತ ಫ್ಯಾಷನ್ ರೂಲ್ಸ್ ಮೆನ್ಸ್ ಫ್ಯಾಷನ್ ಲೋಕದಲ್ಲಿದೆ. ಫಾರ್ಮಲ್ ಲುಕ್‌ನ ಸೂಟ್‌ಗಳು ನಮ್ಮ ಭಾರತೀಯರಲ್ಲಿ ಡಿಸೆಂಟ್ ಲುಕ್ ಮಾತ್ರವಲ್ಲ, ಪ್ರತಿಷ್ಠೆಯ ಧ್ಯೋತಕವಾಗಿದೆ. ಶ್ರೀಮಂತರಿಗೆ ಸಿಮೀತವಾಗಿದ್ದ ಈ ಡ್ರೆಸ್‌ಕೋಡ್ ಇತ್ತೀಚೆಗೆ ಕಾರ್ಪೋರೇಟ್ ಕ್ಷೇತ್ರದ ಉದ್ಯೋಗಸ್ಥರನ್ನು ಸೆಳೆದಿರುವುದು ಮಾತ್ರವಲ್ಲ, ಎಲ್ಲಾ ವರ್ಗದವರನ್ನು ಆಕರ್ಷಿಸಿದೆ. ಇನ್ನು ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಮೆನ್ಸ್ ಫ್ಯಾಷನ್ ಲೋಕದ ಡಿಸೈನರ್‌ಗಳು ವೆಸ್ಟರ್ನ್ ಮೆನ್ಸ್ ಫ್ಯಾಷನ್‌ನಲ್ಲಿದ್ದ ಸಿಕ್ವೀನ್ಸ್ ಸೂಟ್‌ಗಳನ್ನು ಕೊಂಚ ರೂಪ ಬದಲಿಸಿ ಇಲ್ಲಿಯೂ ಪರಿಚಯಿಸಿದ್ದಾರೆ. ಅದು ಇದೀಗ ಪಾರ್ಟಿವೇರ್ ಹಾಗೂ ಹೈ ಫ್ಯಾಷನ್‌ನಲ್ಲಿ ಸೇರಿಸಿದ್ದಾರೆ. ಸದ್ಯಕ್ಕೆ ಸ್ಟಾರ್‌ಗಳು ಹಾಗೂ ಫ್ಯಾಷನ್ ಸೆಲೆಬ್ರೆಟಿಗಳ ವಾರ್ಡ್ರೋಬ್‌ಗೆ ಸೇರಿದೆ. ಮುಂದೊಮ್ಮೆ ಸಾಮಾನ್ಯ ಪುರುಷರ ವಾಡ್ರೋಬ್‌ಗೂ ಸೇರಿದರೂ ಅಚ್ಚರಿಯೇನಿಲ್ಲ!” ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜಾನ್ ಡಿಸೋಜಾ.
ಸ್ಟಾರ್ ನಟರ ಸಿಕ್ವೀನ್ಸ್ ಸೂಟ್ ಲವ್
ಜಗಮಗಿಸುವ ಸಿಕ್ವೀನ್ಸ್ ಸೀರೆ ಟ್ರೆಂಡ್ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಸಿಕ್ವೀನ್ಸ್ ಸೂಟ್ ಇನ್ನೂ ಅಷ್ಟೊಂದು ಕಾಮನ್ ಆಗಿಲ್ಲ! ಇತ್ತೀಚೆಗೆ ಹಾಲಿವುಡ್ ಸ್ಟಾರ್ ನಟರು ಧರಿಸುವುದು ಆರಂಭವಾದ ನಂತರ ಟ್ರೆಂಡ್ ಸೆಟ್ ಆಗಲಾರಂಭಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟ್ ರಾಜ್. ಅವರ ಪ್ರಕಾರ, ಜಗಮಗಿಸುವ ಸಿಕ್ವೀನ್ಸ್ ವಿನ್ಯಾಸದ ಸೂಟ್‌ಗಳು ಇದೀಗ ಬಾಲಿವುಡ್‌ಗರನ್ನು ಸೆಳೆಯತೊಡಗಿದೆ. ಸೂಟ್‌ನ ಶರ್ಟ್, ಬೋ ಹಾಗೂ ಪ್ಯಾಂಟ್ ಹೊರತುಪಡಿಸಿ ಬ್ಲೇಝರ್ ಅಥವಾ ಕೋಟ್ ಮಾತ್ರ ಸಿಕ್ವೀನ್ಸ್ ವಿನ್ಯಾಸ ಹೊಂದಿರುತ್ತವೆ. ಸದ್ಯಕ್ಕೆ ಬ್ಲಾಕ್ ಶೇಡ್‌ನವು ಟ್ರೆಂಡ್‌ನಲ್ಲಿವೆ. ಇವು ಹಾಲಿವುಡ್ ನಟರ ಪಾರ್ಟಿವೇರ್ ಕಾಕ್‌ಟೈಲ್ ಸೂಟ್‌ನ ಟಾಪ್ ಲಿಸ್ಟ್ ನಲ್ಲಿವೆ ಎನ್ನುತ್ತಾರೆ.
ಒಟ್ಟಿನಲ್ಲಿ, ನಟ ಮಾಧವನ್ ಅವರು ಧರಿಸಿರುವ ಡಿಸೈನರ್ ರಾಧಿಕಾ ಮೆಹ್ರಾ ಅವರ ಈ ಸೂಟ್ ಸದ್ಯ ಹೈ ಫ್ಯಾಷನ್ ಪ್ರಿಯ ಪುರುಷರನ್ನು ಸೆಳೆದಿದೆ ಎಂದರೇ ಅತಿಶಯೋಕ್ತಿಯಾಗದು!
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಏನಿದು ನಟಿ ಶ್ರೀಲೀಲಾ ಧರಿಸಿ ಮಿಂಚಿದ ಆಕರ್ಷಕ ಕಟ್ ವರ್ಕ್ ಸೀರೆ?