Site icon Vistara News

Star Lehenga Fashion: ನಟಿ ಮೌನಿ ರಾಯ್ ಗ್ರ್ಯಾಂಡ್ ಕೇಸರಿ ಲೆಹೆಂಗಾ ಜಾದೂ

Star Lehenga Fashion

ಶೀಲಾ ಸಿ.ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಮೌನಿ ರಾಯ್ ಕೇಸರಿ ಲೆಹೆಂಗಾ (Star Lehenga Fashion) ಜಾದೂ ಮಾಡಿದೆ. ಡ್ಯಾನ್ಸ್ ವೊಂದರಲ್ಲಿ ಮೌನಿ ಧರಿಸಿರುವ ಭಾರಿ ವಿನ್ಯಾಸದ ಗ್ರ್ಯಾಂಡ್ ರಾಜಸ್ಥಾನಿ ಶೈಲಿಯ ಈ ಕೇಸರಿ ಲೆಹೆಂಗಾ ಸದ್ಯ ಲೆಹೆಂಗಾ ಪ್ರಿಯರ ಕಣ್ಣರಳಿಸಿದೆ. ಅಷ್ಟು ಮಾತ್ರವಲ್ಲದೇ, ಈ ಔಟ್ ಫಿಟ್ ನೊಂದಿಗೆ ಆಕೆ ಧರಿಸಿರುವ ಟ್ರೆಡಿಷನಲ್ ಜ್ಯುವೆಲರಿಗಳು ಸಹ ಗ್ರ್ಯಾಂಡ್ ಲುಕ್ ನೀಡಿವೆ. ಮುಂಬರುವ ವೆಡ್ಡಿಂಗ್ ಸೀಸನ್‌ಗೆ ಟ್ರೆಂಡಿಯಾಗುವ ಎಲ್ಲಾ ಮುನ್ಸೂಚನೆಗಳನ್ನು ಇದು ನೀಡಿದೆ.

ಬಾಲಿವುಡ್ ಲೆಹೆಂಗಾಗಳಿವು

“ನಟಿ ಮೌನಿ ರಾಯ್ ಧರಿಸಿರುವ ಕೇಸರಿ ಲೆಹೆಂಗಾ ಈಗಾಗಲೇ ಎಲ್ಲರನ್ನು ಸೆಳೆದಿರುವುದು ತಿಳಿದ ವಿಚಾರ. ಹೆವಿ ವಿನ್ಯಾಸವಿರುವ ಈ ಗ್ರ್ಯಾಂಡ್ ಲೆಹೆಂಗಾ ಪಕ್ಕಾ ನಾರ್ತ್ಇಂಡಿಯನ್ ಲುಕ್ ನೀಡಿದೆ. ಟ್ರೆಡಿಷನಲ್ ಶೈಲಿಯಲ್ಲಿರುವ ಈ ಲೆಹೆಂಗಾ-ಚೋಲಿ ಹಾಗೂ ದುಪಟ್ಟಾ ಪಕ್ಕಾ ರಾಜಸ್ಥಾನಿ ಲುಕ್ ನೀಡಿದೆ. ಇತ್ತೀಚೆಗೆ ಬಗೆಬಗೆಯ ಲೆಹೆಂಗಾ ಧರಿಸುವುದು ಫ್ಯಾಷನ್ ಆಗಿದೆ. ಅದರಲ್ಲೂ ಬಾಲಿವುಡ್ ಸಿನಿಮಾಗಳಲ್ಲಿ ಬಳಕೆಯಾಗುವ ರಾಜಸ್ಥಾನಿ ಲೆಹೆಂಗಾಗಳು ಅತಿ ಬೇಗ ಫ್ಯಾಷನ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಧರಿಸುವ ರೀತಿ ಹಾಗೂ ಶೈಲಿಗಳು ಬದಲಾಗುತ್ತವೆ ಅಷ್ಟೇ! “ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಶೈಲಿಯ ಲೆಹೆಂಗಾಗಳು ವೆಡ್ಡಿಂಗ್ ಸೀಸನ್‌ನಲ್ಲಿ, ಸಂಗೀತ್‌ ನಂತಹ ಡಾನ್ಸ್ ಪ್ರೋಗ್ರಾಂಗಳಲ್ಲಿ ಬಳಕೆಯಾಗುತ್ತವೆ ಎನ್ನುತ್ತಾರೆ.

ವೆಡ್ಡಿಂಗ್ ಸೀಸನ್ ಲೆಹೆಂಗಾ

ನಟಿ ಮೌನಿರಾಯ್ ಧರಿಸಿರುವ ಈ ಅತ್ಯಾಕರ್ಷಕ ಲೆಹೆಂಗಾ ಈ ಸೀಸನ್ ನಲ್ಲಿ ಆಗಮಿಸುವ ಮದುವೆಗಳಿಗೆ, ಅದರಲ್ಲೂ ಸಂಗೀತ್ ನಂತಹ ಡಾನ್ಸ್ ಕಾರ್ಯಕ್ರಮಗಳಿಗೆ ಪಕ್ಕಾ ಹೇಳಿ ಮಾಡಿಸಿದಂತಿವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಫರ್ಟ್ ಜೀನತ್.

ಮೌನಿರಾಯ್ ಲೆಹೆಂಗಾ ಸ್ಟೈಲಿಂಗ್

ಹಾಗಾದಲ್ಲಿ, ನೀವು ಮೌನಿರಾಯ್‌ರಂತೆ ಕಾಣಿಸಲು ಮಾಡಬೇಕಾದ್ದಿಷ್ಟೇ! ಆದಷ್ಟೂ ಬ್ರೈಟ್ ಶೇಡ್ಸ್ ಲೆಹೆಂಗಾ ಚೂಸ್ ಮಾಡಬೇಕು. ಇನ್ನು ಹೆವಿ ಲುಕ್ ನೀಡುವ ಗ್ರ್ಯಾಂಡ್ ಡಿಸೈನ್ ಹೊಂದಿರಬೇಕು. ಟ್ರೆಡಿಷನಲ್ ಮಾಂಗ್ ಟೀಕಾ, ಕಡ, ಬಳೆಗಳು, ಬಾಜುಬಂದ್, ಜೋಧಾ ಶೈಲಿಯ ಬಿಗ್ ಚೋಕರ್ ಲೆಹೆಂಗಾದೊಂದಿಗೆ ಧರಿಸಬೇಕು. ಕುಂದನ್ ಬಿಗ್ ಫಿಂಗರ್ ರಿಂಗ್‌ಗಳನ್ನು ಧರಿಸಿದಾಗ ರಾಣಿಯಂತೆ ಬಿಂಬಿಸುತ್ತವೆ. ಇನ್ನು, ಈ ಔಟ್ ಫಿಟ್ ನ ಗ್ಲಾಮರ್ ಹೆಚ್ಚಿಸುವ ಗೋಲ್ಡನ್ ಕಮರ್‌ಬಾಂದ್ ನಡುವಿನ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂದು ಸ್ಟೈಲಿಂಗ್ ಟಿಪ್ಸ್ ನೀಡುತ್ತಾರೆ ಜೀನತ್.

ಮೇಕಪ್ ಹೀಗಿರಲಿ

ಕಾಡಿಗೆ ಹಚ್ಚಿದ ಕಣ್ಣು, ಲೈಟಾಗಿ ಮಸ್ಕರಾ, ಐ ಲೈನರ್ ಹಚ್ಚಿದರೇ ಸಾಕು. ತುಟಿಗೆ ಔಟ್ ಫಿಟ್ ಗೆ ಹೊಂದುವ ಲಿಪ್ ಸ್ಟಿಕ್, ಹಣೆಗೊಂದು ಬಿಂದಿ. ಇವಷ್ಟೇ ಸಾಕು! ಇಡೀ ಲೆಹೆಂಗಾ ಜೊತೆ ಹೊಂದುತ್ತವೆ. ಆಕರ್ಷಕವಾಗಿ ಬಿಂಬಿಸುತ್ತವೆ.
ಈ ಶೈಲಿಯ ಗ್ರ್ಯಾಂಡ್ ಲೆಹೆಂಗಾಗಳು, ವೆಡ್ಡಿಂಗ್ ಸೀಸನ್‌ ಕಳೆ ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನನೂ ಓದಿ: Star Sequins Suit Fashion: ಹೈ ಫ್ಯಾಷನ್‌ ಪ್ರಿಯ ಪುರುಷರನ್ನು ಸೆಳೆದ ನಟ ಮಾಧವನ್‌ ಸಿಕ್ವೀನ್ಸ್ ಸೂಟ್‌

Exit mobile version