ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಅತ್ಯವಶ್ಯ. ಅದ್ಯಾಕೆ? ಎಂದು ಯೋಚಿಸುತ್ತಿದ್ದೀರಾ! ಹಬ್ಬದ ಸಂಭ್ರಮಕ್ಕಾಗಿ ಪ್ರತಿದಿನ ಹಚ್ಚಿದ ಗ್ರ್ಯಾಂಡ್ ಓವರ್ ಮೇಕಪ್, ಒಂದರ ಮೇಲೊಂದು ಸವಿದ ಸಿಹಿ ತಿಂಡಿ ಹಾಗೂ ಜಂಕ್ ಪದಾರ್ಥ ಸೇವನೆ ಎಲ್ಲವೂ ತ್ವಚೆಯನ್ನು ಡಲ್ ಆಗಿಸಬಹುದು. ಕೆಲವರಿಗೆ ಇದರಿಂದ ಮೊಡವೆ ಹಾಗೂ ಜಿಡ್ಡಿನಿಂದ ಚರ್ಮದ ಸಮಸ್ಯೆ ಎದುರಾಗಬಹುದು. ಇವೆಲ್ಲವನ್ನು ನಿಭಾಯಿಸಲು ಫೆಸ್ಟಿವ್ ಸೀಸನ್ ಮುಗಿದ ನಂತರ ಮುಖದ ಆರೈಕೆಯತ್ತ ಗಮನ ನೀಡುವುದು ಉತ್ತಮ. ಇದರಿಂದ ನಾನಾ ಸ್ಕಿನ್ ಸಮಸ್ಯೆಗಳಿಂದ ದೂರಾಗಿ, ಎಂದಿನಂತೆ ನವೋಲ್ಲಾಸದಿಂದ ಕಾಣುವ ತ್ವಚೆಯನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ. ಇದಕ್ಕೆ ಪೂರಕ ಎಂಬಂತೆ ಅವರು 5 ಸಿಂಪಲ್ ಸಲಹೆ ನೀಡಿದ್ದು, ಪಾಲಿಸಿ ನೋಡಿ ಎಂದಿದ್ದಾರೆ.
ಮೊದಲು ಮೇಕಪ್‌ಗೆ ಬ್ರೇಕ್ ನೀಡಿ
ಪ್ರತಿದಿನ ಮೇಕಪ್ ಹಚ್ಚಿದ ಮುಖಕ್ಕೆ ಕೊಂಚ ಬ್ರೇಕ್ ಹಾಕಿ. ಮಾಯಿಶ್ಚರೈಸ್ ಮಾಡಿ. ಮುಖದ ತ್ವಚೆಗೆ ಉಸಿರಾಡಲು ಅವಕಾಶ ನೀಡಿ. ಬೇಕಿದ್ದಲ್ಲಿ ರಿಜುನುವೇಟ್ ಆಗಲು ಸಹಾಯ ಮಾಡುವ ಹೈಡ್ರೋ ಫೇಶಿಯಲ್ ಮಾಡಿಸಿ.
ಕ್ಲೆನ್ಸಿಂಗ್- ಟೋನಿಂಗ್-ಮಾಯಿಶ್ಚರೈಸಿಂಗ್
ಪ್ರತಿದಿನ ಕ್ಲೆನ್ಸಿಂಗ್-ಟೋನಿಂಗ್ ಹಾಗೂ ಮಾಯಿಶ್ಚರೈಸಿಂಗ್ ಮಾಡಿ. ಇದು ತ್ವಚೆಯನ್ನು ರಿಲ್ಯಾಕ್ಸ್ ಮಾಡುವುದರೊಂದಿಗೆ ಸ್ಕಿನ್ ಆರೋಗ್ಯ ಸುಧಾರಿಸುತ್ತದೆ.
ಕಣ್ತುಂಬ ನಿದ್ರೆ ಮಾಡಿ
ಹಬ್ಬದ ಗಡಿಬಿಡಿಯಲ್ಲಿ ಸಾಕಷ್ಟು ಜನ ನಿದ್ರೆ ಕಡಿಮೆ ಮಾಡುತ್ತಾರೆ. ಇದು ಮುಖದ ಮೇಲೆ ಎದ್ದು ಕಾಣದಂತೆ ಮಾಡಲು ಮೇಕಪ್ ಹಚ್ಚುತ್ತಾರೆ. ಆದರೆ. ಇದು ತಾತ್ಕಲಿಕ ಪರಿಹಾರ. ನ್ಯಾಚುರಲ್ ಆಗಿ ತ್ವಚೆ ಚೆನ್ನಾಗಿ ಕಾಣಲು ಕನಿಷ್ಠ 7-8 ಗಂಟೆಯಾದರೂ ಕಣ್ತುಂಬ ನಿದ್ರೆ ಮಾಡುವುದು ಅಗತ್ಯ. ಮಲಗಿದಾಗ ತ್ವಚೆಯ ರಿಜುನುವೆಟ್‌ಗೆ ಅಗತ್ಯವಿರುವ ಕೊಲಾಜೆನ್ ಉತ್ಪತ್ತಿಯಾಗುತ್ತದೆ.
ಶೀಟ್ ಮಾಸ್ಕ್ ಉಪಯೋಗಿಸಿ
ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ತ್ವಚೆಯ ಫ್ರೆಂಡ್ಲಿ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವ, ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವ ಶೀಟ್ ಮಾಸ್ಕ್ ಆಯ್ಕೆ ಮಾಡಿ ಬಳಸಿ. ಇದು ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ.
ಸ್ಕ್ರಬ್ ಬಳಸಿ
ಸ್ಕ್ರಬ್ ಬಳಕೆಯಿಂದ ಚರ್ಮದ ಮೇಲಿನ ಡೆಡ್ ಸ್ಕಿನ್ ಹೋಗುತ್ತದೆ. ಜೊತೆಗೆ ರಕ್ತ ಸಂಚಾರ ಸುಗಮವಾಗುತ್ತದೆ. ಹೋಮ್ ಮೇಡ್ ಸ್ಕ್ರಬ್ ಉತ್ತಮ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್ ಸ್ಟೈಲಿಂಗ್‌ಗೆ ಸಾಥ್ ನೀಡುವ ಎಥ್ನಿಕ್‌ವೇರ್ಸ್