ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರಿಟಿಗಳ ಏರ್‌ಪೋರ್ಟ್ ಲುಕ್ ಇದೀಗ ಸಾಮಾನ್ಯರ ಫ್ಯಾಷನ್ ಲಿಸ್ಟ್‌ಗೂ ಸೇರಿದೆ. ಹೌದು. ಸೆಲೆಬ್ರಿಟಿಗಳಿಗೆ ಸಿಮೀತವಾಗಿದ್ದ ಈ ಲುಕ್ ಇದೀಗ ಜನಸಾಮಾನ್ಯರನ್ನು ತಲುಪಿವೆ. ಆಯಾ ಸೀಸನ್‌ಗೆ ತಕ್ಕಂತೆ ಟ್ರೆಂಡ್‌ಗಳು ಬದಲಾದಂತೆ, ಏರ್‌ಪೋರ್ಟ್ ಲುಕ್‌ಗೆ ಸಾಥ್ ನೀಡುವ ಫ್ಯಾಷನ್ ಕೂಡ ಚಾಲ್ತಿಗೆ ಬಂದಿದೆ.
ಏನಿದು ಏರ್‌ಪೋರ್ಟ್ ಲುಕ್
ವಿಮಾನದಲ್ಲಿ ಪ್ರಯಾಣಿಸುವಾಗ ಫ್ಯಾಷೆನಬಲ್ ಹಾಗೂ ಸ್ಟೈಲಿಶ್ ಆಗಿ ಕಾಣಿಸುವುದನ್ನು ಏರ್‌ಪೋರ್ಟ್ ಲುಕ್ ಎನ್ನಲಾಗುತ್ತದೆ. ಪ್ರಯಾಣಿಸುವಾಗ ಧರಿಸುವ ಆಯಾ ಸೀಸನ್‌ನ ಟ್ರೆಂಡಿ ಟ್ರಾವೆಲ್ ಔಟ್‌ಫಿಟ್ ಹಾಗೂ ಸ್ಟೈಲಿಶ್ ಲುಕ್ ಇದರಲ್ಲಿ ಸೇರಿರುತ್ತದೆ. ಇದು ವ್ಯಕ್ತಿಯ ಘನತೆಗೆ ತಕ್ಕಂತಿರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ದಿಯಾ.
ಏರ್‌ಪೋರ್ಟ್ ಲುಕ್ ಹುಟ್ಟು ಹಾಕಿದ ಸೆಲೆಬ್ರಿಟಿಗಳು
ಅಂದಹಾಗೆ, ಸ್ಟೈಲಿಶ್ ಆಗಿ ಕಾಣುವ ಏರ್‌ಪೋರ್ಟ್ ಲುಕ್ ಹುಟ್ಟುಹಾಕಿದ್ದೇ ಸೆಲೆಬ್ರಿಟಿಗಳು. ಮೂಲತಃ ಹಾಲಿವುಡ್ ಸೆಲೆಬ್ರಿಟಿಗಳು ಏರ್‌ಪೋರ್ಟ್ ಲುಕ್ ಹುಟ್ಟುಹಾಕಲು ಕಾರಣಕರ್ತರು. ವಿಮಾನದಲ್ಲಿ ಪ್ರಯಾಣಿಸುವಾಗ ತಮ್ಮ ಡ್ರೆಸ್‌ಕೋಡ್ ಬಗ್ಗೆ ತೀರಾ ಗಮನವಹಿಸುತ್ತಿದ್ದರು. ಯಾಕೆಂದರೇ, ವಿಮಾನದಿಂದ ಇಳಿದ ತಕ್ಷಣ ಮೀಡಿಯಾ ಅಥವಾ ಪ್ಯಾಪರಾಜಿಗಳಿಗೆ ಫೋಟೋಗೆ ಪೋಸ್ ನೀಡಬೇಕಾಗಿರುತ್ತಿತ್ತು. ಹಾಗಾಗಿ ತಮ್ಮ ಏರ್‌ಪೋರ್ಟ್ ಲುಕ್ ಅನ್ನು ಪಾಲಿಸುವುದು ಅಗತ್ಯವಾಗಿತ್ತು. ಇದೀಗ ಬಾಲಿವುಡ್‌ನಲ್ಲೂ ಈ ಲುಕ್ ತೀರಾ ಸಾಮಾನ್ಯವಾಗಿದೆ. ಆಗಾಗ್ಗೆ ವಿಮಾನದಲ್ಲಿ ಪ್ರಯಾಣಿಸುವ ತಾರೆಯರು ಏರ್‌ಪೋರ್ಟ್‌ನಲ್ಲೂ ತಮ್ಮ ಲುಕ್ನ ಬಗ್ಗೆ ಅತೀವ ಕಾಳಜಿವಹಿಸಲಾರಂಭಿಸಿದ್ದಾರೆ. ಪ್ಯಾಪರಾಜಿಗಳು ತೆಗೆದ ಫೋಟೋ ಹಾಗೂ ವಿಡಿಯೋದಲ್ಲಿ ಕಾಣಿಸಿಕೊಳ್ಳುವುದರಿಂದ, ತಮ್ಮ ಇಮೇಜಿಗೆ ಧಕ್ಕೆಯಾಗಬಹುದೆಂಬ ಕಾರಣದಿಂದಲೇ ಟ್ರೆಂಡನ್ನು ಫಾಲೋ ಮಾಡುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.
ಸೆಲೆಬ್ರಿಟಿಗಳಿಂದ ಪ್ರೇರಣೆಗೊಂಡ ಸಾಮಾನ್ಯರು
ಮೊದಲೆಲ್ಲಾ ಏರ್‌ಪೋರ್ಟ್ ವಿಮಾನ ಪ್ರಯಾಣ ಎಂದಾಕ್ಷಣಾ ಜರ್ನಿಯಲ್ಲವಾ ! ಎಂದು ಮನಸ್ಸಿಗೆ ಬಂದಹಾಗೆ, ರೆಡಿಯಾಗಿ ಹೋಗುವ ಅಭ್ಯಾಸವಿತ್ತು. ಆದರೆ, ಈಗ ಹಾಗಿಲ್ಲ! ಬಹುತೇಕ ಯುವಕ-ಯುವತಿಯರು ಏರ್‌ಪೋರ್ಟ್ ಲುಕ್ ಫಾಲೋ ಮಾಡುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಸೋಷಿಯಲ್ ಮೀಡಿಯಾ. ಇನ್‌ಸ್ಟಂಟ್ ಫೋಟೋ ಹಾಗೂ ವಿಡಿಯೋ ಅಪ್‌ಲೋಡ್ ಮಾಡುವ ಅಭ್ಯಾಸ ಏರ್‌ಪೋರ್ಟ್ ಲುಕ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್ ನಕುಲ್.
ಹೀಗಿರಲಿ ಏರ್‌ಪೋರ್ಟ್ ಲುಕ್
ಚಳಿಗಾಲಕ್ಕೆ ಲೇಯರ್ ಲುಕ್ ಅಳವಡಿಸಿಕೊಳ್ಳಿ.
ಎಥ್ನಿಕ್ ಲುಕ್ ಆವಾಯ್ಡ್ ಮಾಡಿ.
ಕಂಫರ್ಟಬಲ್ ಸ್ಟೈಲಿಶ್ ಉಡುಪಿನ ಆಯ್ಕೆ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Stars Fashion | ನೈಕಾ ಬ್ಯೂಟಿ ಅವಾರ್ಡ್‌ನಲ್ಲಿ ಬಾಲಿವುಡ್ ತಾರೆಯರು ಹೇಗೆಲ್ಲ ಮಿನುಗಿದರು!