Site icon Vistara News

Winter Sweater Fashion: ಓವರ್‌ಸೈಜ್ ಬಟನ್‌ ಉಲ್ಲನ್‌ ಸ್ವೆಟರ್‌ನ ಜಾದೂ!

Winter Sweater Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಓವರ್‌ಸೈಜ್‌ ಮಲ್ಟಿ ಕಲರ್‌ನ ಉಲ್ಲನ್‌ ಸ್ವೆಟರ್‌ಗಳು (Winter Sweater Fashion) ಈ ವಿಂಟರ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಚಳಿಗಾಲದಲ್ಲಿ ಫಿಟ್ಟೆಡ್‌ ಉಲ್ಲನ್‌ ಸ್ವೆಟರ್‌ಗಳಿಗಿಂತ ಓವರ್‌ಸೈಜ್‌ನ ಲೂಸಾಗಿರುವ ಈ ಮಲ್ಟಿ ಕಲರ್‌ ಸ್ವೆಟರ್‌ಗಳು ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಹಿಳೆಯರನ್ನು ಸೆಳೆದಿವೆ. ನಾನಾ ಮಲ್ಟಿ ಕಲರ್‌ಗಳಲ್ಲಿ ಬಿಡುಗಡೆಗೊಂಡಿರುವ ಇವು ಬೆಚ್ಚನೆಯ ಲೇಯರ್‌ ಲುಕ್‌ಗೆ ಸಾಥ್‌ ನೀಡುತ್ತಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಓವರ್‌ಸೈಜ್ ಉಲ್ಲನ್‌ ಸ್ವೆಟರ್ಸ್

ಲೂಸಾಗಿರುವ ಫಿಟ್ಟಿಂಗ್‌ ಇಲ್ಲದ ದೊಗಲೆ ಉಲ್ಲನ್‌ ಸ್ವೆಟರ್ಸ್‌ಗಳಿವು. ನೋಡಲು ಫಿಟ್‌ ಆಗಿ ಕಾಣಿಸದಿದ್ದರೂ ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಇವು ಉಲ್ಲನ್‌ ಫ್ಯಾಬ್ರಿಕ್‌ನದ್ದಾಗಿರುವುದರಿಂದ ಬೆಚ್ಚಗಿಡುತ್ತವೆ. ಧರಿಸಿದ ಉಡುಪುಗಳ ಮೇಲೆ ಧರಿಸಿದಾಗ ಇವು ಲೇಯರ್‌ ಲುಕ್‌ ನೀಡುತ್ತವೆ. ನಿಟ್ಟೆಡ್‌ ಉಲ್ಲನ್‌ದ್ದಾಗಿರುವುದರಿಂದ ಕೊಂಚ ಲೂಸಾಗಿದ್ದಲ್ಲಿ ಧರಿಸಿದ ಉಡುಪು ಕಂಫರ್ಟಬಲ್‌ ಎಂದೆನಿಸುವುದು. ಇಲ್ಲವಾದಲ್ಲಿ ಧರಿಸಿದಾಗ ಟೈಟ್‌ ಎಂದೆನಿಸಬಹುದು. ಹಾಗಾಗಿ ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಓವರ್‌ಸೈಜ್‌ನಲ್ಲಿ ಇವುಗಳನ್ನು ಮಾಡಲಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀನತ್‌. ಅವರ ಪ್ರಕಾರ, ಕೆಲವು ಹ್ಯಾಂಡ್‌ಮೇಡ್‌ ಆಗಿರುತ್ತವೆ. ಆದರೆ, ಬೆಲೆ ದುಬಾರಿ. ಇನ್ನು ಮೆಷಿನ್‌ನಿಂದ ಸಿದ್ಧವಾದವು ಕೈಗೆಟಕುವ ದರದಲ್ಲಿ ನಾನಾ ಬ್ರಾಂಡ್‌ಗಳಲ್ಲಿ ದೊರೆಯುತ್ತವೆ.

ಮಲ್ಟಿ ಕಲರ್‌ ಟ್ರೆಂಡ್‌

ಮೊದಲೆಲ್ಲಾ ಮಾನೋಕ್ರೋಮ್‌ ಶೇಡ್‌ಗಳಲ್ಲಿ ದೊರೆಯುತ್ತಿದ್ದ ಉಲ್ಲನ್ ಸ್ವೆಟರ್‌ಗಳು ಹೆಚ್ಚೆಂದರೇ ಎರಡು ಮೂರು ಕಾಂಟ್ರಸ್ಟ್‌ ಶೇಡ್‌ಗಳಲ್ಲಿ ದೊರೆಯುತ್ತಿದ್ದವು. ಇದೀಗ ಹಾಗಿಲ್ಲ, ಜನರೇಷನ್‌ನ ಅಭಿಲಾಷೆಗೆ ತಕ್ಕಂತೆ ನಾನಾ ಮಲ್ಟಿ ಶೇಡ್‌ಗಳಲ್ಲಿ ಅದರಲ್ಲೂ ವೈಬ್ರೆಂಟ್‌ ಶೇಡ್‌ಗಳಲ್ಲಿ ಸಿಗುತ್ತಿವೆ. ಇನ್ನು ಆನ್‌ಲೈನ್‌ನಲ್ಲಂತೂ ಸಖತ್‌ ಆಪ್ಷನ್ಸ್‌ ಲಭ್ಯ.

ಓವರ್‌ಸೈಜ್‌ ಸ್ವೆಟರ್‌ ಮಿಕ್ಸ್‌ ಮ್ಯಾಚ್‌ ಹೀಗೆ ಮಾಡಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Cape Dress Fashion: ಚಳಿಗಾಲದ ಫ್ಯಾಷನ್‌ಗೆ ಬಂತು ಆಕರ್ಷಕ ಕೇಪ್ ಡ್ರೆಸ್

Exit mobile version