ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಾರ್ಡ್ರೋಬ್‌ನಲ್ಲಿರುವ ನಿಮ್ಮ ಔಟ್‌ಫಿಟ್‌ಗಳನ್ನು (Wardrobe reshuffle) ಆಗಾಗ್ಗೆ ವಿಂಗಡಿಸಿ. ಇದರಿಂದ ನೀವು ಉಡುಪುಗಳನ್ನು ಮರು ಬಳಕೆ ಮಾಡಲು ಹಾಗೂ ಮಿಕ್ಸ್ ಮ್ಯಾಚ್ ಮಾಡಿ ಧರಿಸಲು ಸುಲಭವಾಗುತ್ತದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪಟ್ರ್ಸ್.
ಹೌದು. ಹೊಸ ವರ್ಷದ ಮೊದಲ ತಿಂಗಳಲ್ಲಿ,ನಿಮ್ಮ ಡಿಸೈನರ್‌ವೇರ್ಸ್ ತುಂಬಿರುವ ವಾರ್ಡ್ರೋಬನ್ನು ಒಮ್ಮೆ ರಿಶಫಲ್ (Wardrobe reshuffle) ಮಾಡಿ. ಈ ಸೀಸನ್‌ಗೆ ತಕ್ಕಂತೆ ಔಟ್‌ಫಿಟ್‌ಗಳನ್ನು ವಿಂಗಡಿಸುವ ಕೆಲಸ ಮಾಡಿ. ಅಷ್ಟಾದರೇ ಸಾಲದು, ಪದೇ ಪದೇ ಡ್ರೆಸ್ ಖರೀದಿಗೆ ಹಣ ವ್ಯಯಿಸುವ ಬದಲು, ಇರುವ ಉಡುಪುಗಳಿಗೆ ಒಂದಿಷ್ಟು ಹೊಸ ಲುಕ್ ನೀಡಿ , ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದು ಎನ್ನುವ ಸ್ಟೈಲಿಸ್ಟ್ ರೀಟಾ ಹಾಗೂ ರಜತ್ ಈ ಕುರಿತಂತೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಡಿಸೈನ್‌ಗೆ ತಕ್ಕಂತೆ ವಿಂಗಡಣೆ ಮಾಡಿ
ಎಲ್ಲಾ ಬಗೆಯ ಉಡುಪುಗಳನ್ನು ಒಂದೇ ಕಡೆ ಮಡಿಸಿಡಬೇಡಿ. ಬದಲಿಗೆ ಕೆಟಗರಿ ಮಾಡಿ. ಒಂದು ಕಡೆ ವೆಸ್ಟರ್ನ್‌ವೇರ್ಸ್, ಎಥ್ನಿಕ್‌ವೇರ್ಸ್ ಎಂದು ಪ್ರತ್ಯೇಕಿಸಿ. ಆಗ ಬಳಸಲು ಸುಲಭವಾಗುತ್ತದೆ.
ಡೈಲಿವೇರ್ ಪ್ರತ್ಯೇಕವಾಗಿಡಿ
ಡಿಸೈನರ್‌ವೇರ್ಸ್ ಇರಿಸುವ ಜಾಗದಲ್ಲಿ ಡೈಲಿವೇರ್ ಉಡುಪುಗಳನ್ನು ಇರಿಸಲೇಕೂಡದು. ಅದಕ್ಕಾಗಿ ವಾರ್ಡ್ರೋಬ್‌ನಿಂದಾಚೆ ಪ್ರತ್ಯೇಕವಾಗಿ ಜಾಗ ಮೀಸಲಿಡಿ. ಪ್ರತಿದಿನ ತೆಗೆಯುವುದು ಇರಿಸುವುದರಿಂದ ಉಡುಪುಗಳು ಸುಕ್ಕಾಗಬಹುದು.
ಸೀರೆಗಳಿಗಾಗಿ ಪ್ರತ್ಯೇಕ ಸ್ಥಳ
ವಾರ್ಡ್ರೋಬ್‌ನಲ್ಲಿ ಸೀರೆಗಳನ್ನು ಪ್ರತ್ಯೇಕವಾಗಿರಿಸಿ. ಕ್ಯಾಶುವಲ್ ಹಾಗೂ ಎಥ್ನಿಕ್ ಔಟ್‌ಫಿಟ್‌ಗಳೊಂದಿಗೆ ಇವನ್ನು ಇರಿಸಬೇಡಿ. ಇದಕ್ಕೆಂದು ವಾರ್ಡ್ರೋಬ್‌ನಲ್ಲಿ ಜಾಗ ಮೀಸಲಿರಿಸಿ. ಅಪರೂಪಕ್ಕೆ ಸೀರೆ ಉಡುವುದಾದಲ್ಲಿ ವಾರ್ಡ್ರೋಬ್‌ನ ಎತ್ತರದ ಜಾಗ ಅಥವಾ ತೀರಾ ಕೆಳಗಿನ ಶೆಲ್ಫ್‌ಗಳಲ್ಲೂ ಇರಿಸಬಹುದು.
ಪುರುಷರ ಹಾಗೂ ಮಹಿಳೆಯರ ಔಟ್‌ಫಿಟ್ಸ್
ಒಂದೇ ವಾರ್ಡ್ರೋಬ್‌ನಲ್ಲಿ ಮನೆಯಲ್ಲಿನ ಮಹಿಳೆಯರ ಪುರುಷರ ಔಟ್‌ಫಿಟ್‌ಗಳನ್ನು ಇರಿಸುವುದಾದಲ್ಲಿ ಆದಷ್ಟೂ ಪ್ರತ್ಯೇಕವಾದ ಶೆಲ್ಫ್‌ಗಳಲ್ಲಿಡುವುದು ಉತ್ತಮ.
ವಾರ್ಡ್ರೋಬ್ ಕಪಾಟಿನಲ್ಲಿಡಿ
ಇನ್ನರ್‌ವೇರ್‌ಗಳು ಎಷ್ಟೇ ದುಬಾರಿಯಾದರೂ ಸರಿಯೇ ಅವನ್ನು ವಾರ್ಡ್ರೋಬ್‌ನಲ್ಲಿ ಬೇಕಾಬಿಟ್ಟಿ ನೇತಾಡಿಸುವುದು ತರವಲ್ಲ! ಹಾಗಾಗಿ ಅವುಗಳನ್ನು ಕಪಾಟಿನಲ್ಲಿಡುವ ವ್ಯವಸ್ಥೆ ಮಾಡಿ. ಇತರರು ವಾರ್ಡ್ರೋಬ್ ತೆಗೆದರೂ ನೋಡಲು ಮುಜುಗರವಾಗದು.
ಆಕ್ಸೆಸರೀಸ್ ಸ್ಥಾನ
ಬಂಗಾರದ ಆಕ್ಸೆಸರೀಸ್‌ಗಳಾದಲ್ಲಿ ಮಾತ್ರ ವಾರ್ಡ್ರೋಬ್‌ನಲ್ಲಿ ಸ್ಥಾನ ನೀಡಿ. ಜಂಕ್ ಜ್ಯುವೆಲರಿಗಳನ್ನು ಡ್ರೆಸ್ಸಿಂಗ್ ಟೇಬಲ್ ಹಾಗೂ ಕಪಾಟಿಗೆ ವರ್ಗಾಯಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sankranti Fashion: ಸಂಕ್ರಾಂತಿ ಹಬ್ಬದ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್ ಔಟ್‌ಫಿಟ್ಸ್