Site icon Vistara News

Artificial Hair Streaks: ಫಂಕಿ ಹೇರ್‌ಸ್ಟೈಲ್‌ಗೆ ಬಂತು ಆರ್ಟಿಫಿಶೀಯಲ್‌ ಕಲರ್‌ ಸ್ಟ್ರೀಕ್ಸ್

Artificial Hair Streaks

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕೂದಲಿಗೆ ಫಂಕಿ ಲುಕ್‌ ನೀಡುವ, ಹೈಲೈಟ್ಸ್ ಮಾಡಿದಂತೆ ಕಾಣುವ ಆರ್ಟಿಫಿಶಿಯಲ್‌ ಕಲರ್‌ ಹೇರ್‌ ಸ್ಟ್ರೀಕ್ಸ್ (Artificial Hair Streaks), ಇದೀಗ ಬ್ಯೂಟಿ ಲೋಕಕ್ಕೆ ಎಂಟ್ರಿ ನೀಡಿವೆ. ಯಾವುದೇ ಜಂಜಾಟವಿಲ್ಲದಂತೆ ಬಳಸಬಹುದಾದ ಈ ಕೃತಕ ಹೇರ್‌ ಸ್ಟ್ರೀಕ್ಸ್‌ನ ಕ್ಲಿಪ್‌ಗಳು ಕೈಗೆಟಕುವ ದರದಲ್ಲಿ ದೊರೆಯುತ್ತಿದ್ದು, ಸಾಮಾನ್ಯ ಹುಡುಗಿಯರ ಕೂದಲನ್ನು ಅಲಂಕರಿಸುತ್ತಿವೆ.

ಏನಿದು ಹೇರ್‌ ಸ್ಟ್ರೀಕ್ಸ್‌ ಅಥವಾ ಹೇರ್‌ ಸ್ಟ್ರಿಪ್ಸ್ ?

ಕೂದಲಿಗೆ ಯಾವುದೇ ಬಣ್ಣ ಹಾಕದೆಯೇ, ಕೃತಕ ಕೂದಲಿನ ಸ್ಟ್ರಿಪ್‌ ಅಥವಾ ಕ್ಲಿಪ್‌ನಂತೆ ಧರಿಸಿ, ಫಂಕಿ ಲುಕ್‌ ನೀಡಬಹುದಾದ ಕಾನ್ಸೆಪ್ಟ್‌ ಇದು. ಧರಿಸಿದಾಗ ಸ್ಟ್ರೀಕ್ಸ್‌ ಅಥವಾ ಹೈಲೈಟ್‌ ಮಾಡಿದಂತೆ ಕಾಣುವ ಈ ಆರ್ಟಿಫಿಶಿಯಲ್‌ ಸ್ಟ್ರೀಕ್ಸ್ ಇದೀಗ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ದೊರೆಯುತ್ತಿದೆ. ಪಿಂಕ್‌, ಪಿಸ್ತಾ, ಗ್ರೀನ್‌, ಪರ್ಪಲ್‌, ಲೈಟ್‌ ಯೆಲ್ಲೋ, ಗೋಲ್ಡ್‌ ಸೇರಿದಂತೆ ನಾನಾ ವರ್ಣಗಳಲ್ಲಿ ದೊರೆಯುವ ಇವು ಸಿಂಗಲ್‌ ಹಾಗೂ ಸೆಟ್‌ ಇರುವಂತಹ ಪಾಕೆಟ್‌ಗಳಲ್ಲಿ ಲಭ್ಯ. ಇನ್ನು ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವುದರಿಂದ ಸಾಮಾನ್ಯ ಹುಡುಗಿಯರು ಬಳಕೆ ಮಾಡಲು ಕಾರಣವಾಗಿದೆ.

ಧರಿಸುವುದು ಹೇಗೆ?

ಮೊದಲಿಗೆ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಬೇಕು. ಇಲ್ಲವಾದಲ್ಲಿ ಜಿಡ್ಡಾದಂತೆ ಕಾಣಬಹುದು. ಸ್ಟ್ರೇಟ್‌ ಹೇರ್‌ ಆಗಿದ್ದಲ್ಲಿ ಮ್ಯಾಚ್‌ ಆಗುತ್ತದೆ. ಕರ್ಲಿ ಹೇರ್‌ ಆದಲ್ಲಿ ಕರ್ಲಿ ಇರುವ ಹೇರ್‌ ಸ್ಟ್ರಿಪ್‌ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಕೂದಲಿನ ಲೆಂಥ್‌ಗೆ ತಕ್ಕಂತೆ ಈ ಹೇರ್‌ ಸ್ಟ್ರೀಪ್‌ ಕ್ಲಿಪ್‌ ಅನ್ನು ಆಯ್ಕೆ ಮಾಡಿ. ಉದ್ದವಾಗಿದ್ದಲ್ಲಿ ಕಟ್‌ ಕೂಡ ಮಾಡಿಕೊಳ್ಳಬಹುದು. ಕೂದಲನ್ನು ಪಾರ್ಟಿಶಿಯನ್‌ ಮಾಡಿದ ನಂತರ ಕೆಳಭಾಗದಲ್ಲಿ ಈ ಕ್ಲಿಪ್‌ ಹಾಕಿ. ಕೆಲವೊಂದು ಹೇರ್‌ಪಿನ್‌ನಂತಿರುತ್ತವೆ. ಕಾಣದ ರೀತಿಯಲ್ಲಿ ಒಳಗಿನಿಂದ ಪ್ರೆಸ್‌ ಮಾಡಿ ಹಾಕಬಹುದು. ನಂತರ ಮೇಲ್ಭಾಗದ ಕೂದಲನ್ನು ಅದರ ಮೇಲೆ ಹರಡಿ. ಆಗ ನೈಜವಾದ ಕೂದಲಿನ ನಡುವೆ ಸೆಟ್‌ ಆಗುವುದು. ಫಂಕಿ ಲುಕ್‌ ನೀಡುವುದು ಎಂದು ಸಲಹೆ ನೀಡುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು.

ಆರ್ಟಿಫಿಶಿಯಲ್‌ ಕಲರ್‌ ಹೇರ್‌ ಸ್ಟ್ರೀಕ್ಸ್‌ ಕ್ಲಿಪ್‌ ಆಯ್ಕೆ ಹೀಗೆ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Joggers Co-Ord Set Fashion: ಜಾಗರ್ಸ್‌ಗಳಿಗೂ ಬಂತು ಮಾನೋಕ್ರೋಮ್‌ ಕೋ-ಆರ್ಡ್ ಸೆಟ್ಸ್

Exit mobile version