ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಷ್ಠಿತ ಬೆಂಗಳೂರು ಫ್ಯಾಷನ್ ವೀಕ್ ಮುಂಬರುವ ಆಗಸ್ಟ್ ತಿಂಗಳಲ್ಲಿ ಉದ್ಯಾನಗರಿಯಲ್ಲಿ ನಡೆಯಲಿದೆ. ಸುಮಾರು 4 ದಿನಗಳ ಕಾಲ ನಿರಂತರವಾಗಿ ನಡೆಯಲಿರುವ ಈ ಫ್ಯಾಷನ್ ವೀಕ್‌ನಲ್ಲಿ (Bangalore Fashion Week) ರಾಷ್ಟ್ರಾದ್ಯಾಂತ ಇರುವ ನಾನಾ ಡಿಸೈನರ್‌ಗಳು ಭಾಗವಹಿಸಿ, ತಮ್ಮ ಡಿಸೈನರ್‌ವೇರ್ ಹಾಗೂ ಕಲೆಕ್ಷನ್‌ಗಳನ್ನು ಅನಾವರಣಗೊಳಿಸಲಿದ್ದಾರೆ.
ಆಡಿಷನ್‌ನಲ್ಲಿ ಪಾಲ್ಗೊಂಡ ಮಾಡೆಲ್ಸ್
ಮುಂಬರುವ ಆಗಸ್ಟ್‌ನಲ್ಲಿ ನಡೆಯಲಿರುವ ಈ ಫ್ಯಾಷನ್ ವೀಕ್‌ಗೆ ಸನ್‌ರೈಸ್ ಯೂನಿಯನ್‌ನಲ್ಲಿ ಪ್ರೊಫೆಷನಲ್ ಮಾಡೆಲ್‌ಗಳ ಆಡಿಷನ್ ಹಮ್ಮಿಕೊಳ್ಳಲಾಗಿತ್ತು. ಈ ಆಡಿಷನ್‌ನಲ್ಲಿ ಸುಮಾರು 250 ಕ್ಕೂ ಹೆಚ್ಚು ಮಾಡೆಲ್‌ಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಜ್ಯೂರಿ ಟೀಮ್‌ನಲ್ಲಿ ನಟಿ ಶರಣ್ಯಾ ಶೆಟ್ಟಿ, ಮಾಡೆಲ್ ಸುಶ್ಮಿತಾ ಜೋಷಿ ಭಾಗವಹಿಸಿ, ಕೊನೆಗೆ ಹದಿನೈದು ಹುಡುಗಿಯರು ಹಾಗೂ ಹತ್ತು ಹುಡುಗರನ್ನು ಅಗಸ್ಟ್ 24 ರಿಂದ 27 ರವರೆಗೆ ನಲ್ಲಿ ನಡೆಯುವ ಫಿನಾಲೆ ಫ್ಯಾಷನ್ ವೀಕ್‌ನಲ್ಲಿ ರ್ಯಾಂಪ್ ವಾಕ್ ಮಾಡಲು ಆಯ್ಕೆ ಮಾಡಿದರು.
ರಾಜೇಶ್ ಶೆಟ್ಟಿ- ರಾಹುಲ್ ದೇವ್ ಶೆಟ್ಟಿ ಕೊರಿಯೋಗ್ರಾಫಿ
ಇವೆಂಟ್ ಪಾರ್ಟ್‌ನರ್ ಐ ಡ್ರೀಮ್ಸ್ ಹಾಗೂ ಫಿರೋಜ್ ಖಾನ್ ಅವರ ಆಯೋಜನೆಯಲ್ಲಿ ನಡೆಯುತ್ತಿರುವ ಈ ಫ್ಯಾಷನ್ ಶೋಗೆ ಸೆಲೆಬ್ರೆಟಿ ಶೋ ಡೈರೆಕ್ಟರ್, ಕೊರಿಯೋಗ್ರಾಫರ್ ರಾಜೇಶ್ ಶೆಟ್ಟಿ ಹಾಗೂ ರಾಹುಲ್ ದೇವ್ ಶೆಟ್ಟಿ ಕೊರಿಯೋಗ್ರಾಫಿ ಮಾಡುತ್ತಿದ್ದಾರೆ. ಆದಿತ್ಯಾ ಶ್ರೀ ವಾತ್ಸವ್ ಅವರ ಸಾಥ್ ಕಾರ್ಯಕ್ರಮಕ್ಕೆ ಇದೆ. ಆಡಿಷನ್‌ನಲ್ಲಿ ಇಲಿಯಾಸ್ ಅಖ್ತರ್ ಹಾಗೂ ತ್ಸುನೆಸಿಯಾ ರಿಪಬ್ಲಿಕ್ ಆಫ್ ಕಾನ್ಸುಲೇಟ್‌ನ ಶಬೀನಾ ಸುಲ್ತಾನ ಕೂಡ ಅತಿಥಿಯಾಗಿ ಆಗಮಿಸಿ, ಆಡಿಷನ್ ವೀಕ್ಷಿಸಿದರು.
ಖ್ಯಾತ ಬಾಲಿವುಡ್ ಡಿಸೈನರ್ ತರುಣ್ ತೆಹ್ಲಿಯಾನಿ ಆಗಮನ
ಮುಂಬರುವ ಆಗಸ್ಟ್‌ನಲ್ಲಿ ನಡೆಯಲಿರುವ ಬೆಂಗಳೂರು ಫ್ಯಾಷನ್ ವೀಕ್‌ನಲ್ಲಿ ಬಾಲಿವುಡ್‌ನ ಖ್ಯಾತ ಡಿಸೈನರ್ ತರುಣ್ ತೆಹ್ಲೆಯಾನಿಯವರು ತಸ್ವಾ ಅವರ ಸಹಯೋಗದೊಂದಿಗೆ ಎಕ್ಸ್‌ಕ್ಲೂಸಿವ್ ಮೆನ್ಸ್‌ವೇರ್‌ಗಳನ್ನು ರ್ಯಾಂಪ್ ಮೇಲೆ ಅನಾವರಣಗೊಳಿಸಲಿದ್ದಾರೆ. ಇವರೊಂದಿಗೆ ಇನ್ನಿತರೇ ಖ್ಯಾತ ಡಿಸೈನರ್‌ಗಳು ಕೂಡ ಪಾಲ್ಗೊಳ್ಳಲಿದ್ದು, ವುಮೆನ್‌ವೇರ್, ಮೆನ್ಸ್‌ವೇರ್ ಹಾಗೂ ಫೆಸ್ಟೀವ್ ಸೀಸನ್ ಕಲೆಕ್ಷನ್‌ಗಳನ್ನು ಪ್ರದರ್ಶನಗೊಳಿಸಲಿದ್ದಾರೆ. ಎಂದಿನಂತೆ, ಖ್ಯಾತ ಫ್ಯಾಷನ್ ಸೆಲೆಬ್ರೆಟಿಗಳು, ಮಾಡೆಲ್‌ಗಳು ಹಾಗೂ ತಾರೆಯರು ಫ್ಯಾಷನ್‌ವೀಕ್‌ನ ರಂಗು ಹೆಚ್ಚಿಸಲಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Pearl Hoop Ring Fashion: ಹೀಗಿರಲಿ ಆಕರ್ಷಕ ಪರ್ಲ್ ಹೂಪ್ ಇಯರಿಂಗ್ಸ್ ಮ್ಯಾಚಿಂಗ್