Site icon Vistara News

Bangalore Fashion Week: ಬೆಂಗಳೂರು ಫ್ಯಾಷನ್‌ ವೀಕ್‌ನಲ್ಲಿ ಡಿಸೈನರ್‌ಗಳ ಸಂಗಮ!

Bangalore Fashion Week

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಉದ್ಯಾನನಗರಿಯಲ್ಲಿ ಎರಡು ದಿನಗಳ ಕಾಲ ನಡೆದ ಪ್ರತಿಷ್ಠಿತ ಬೆಂಗಳೂರು ಫ್ಯಾಷನ್ ವೀಕ್‌ನಲ್ಲಿ (Bangalore Fashion Week) ಡಿಸೈನರ್‌ಗಳು ಹಾಗೂ ಮಾಡೆಲ್‌ಗಳ ಸಂಗಮವೇ ಆಗಿತ್ತು. ಇವರೊಂದಿಗೆ ಸ್ಥಳೀಯ ಫ್ಯಾಷನ್‌ ಕ್ಷೇತ್ರದ ಸೆಲೆಬ್ರೆಟಿಗಳು ಹಾಗೂ ತಾರೆಯರು ಈ ಶೋನಲ್ಲಿ ಭಾಗವಹಿಸಿ, ಫ್ಯಾಷನ್‌ ವೀಕ್‌ನ ಕಳೆಯನ್ನು ಮತ್ತಷ್ಟು ಹೆಚ್ಚಿಸಿದರು. ಮೊದಲ ದಿನವೇ ರಂಗು ರಂಗಾಗಿ ಆರಂಭಗೊಂಡ ಫ್ಯಾಷನ್‌ ವೀಕ್‌ನಲ್ಲಿ ಡಿಸೈನರ್‌ಗಳು ತಂತಮ್ಮ ಎಕ್ಸ್‌ಕ್ಲ್ಯೂಸಿವ್‌ ಡಿಸೈನರ್‌ವೇರ್‌ಗಳನ್ನು ಅನಾವರಣಗೊಳಿಸಿದರು. ರ‍್ಯಾಂಪ್‌ ಮೇಲೆ ಎಕ್ಸ್‌ಕ್ಲ್ಯೂಸಿವ್‌ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ಹೆಜ್ಜೆ ಹಾಕುತ್ತಿದ್ದರೇ, ಸ್ವರ್ಗದಿಂದ ಇಳಿದು ಬಂದ ಎಂಜೆಲ್‌ಗಳಂತೆ ಕಾಣಿಸುತ್ತಿದ್ದರು. ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾದರು.

ರ‍್ಯಾಂಪ್‌ನಲ್ಲಿ ರಾಜೇಶ್‌ ಶೆಟ್ಟಿ ಕಮಾಲ್‌

ಬೆಂಗಳೂರು ಫ್ಯಾಷನ್‌ ವೀಕ್‌ನ ಎರಡು ದಿನದ ರ‍್ಯಾಂಪ್‌ನ ಕೊರಿಯಾಗ್ರಾಫಿಯನ್ನು ಸೆಲೆಬ್ರೆಟಿ ಡಿಸೈನರ್‌, ಶೋ ಡೈರೆಕ್ಟರ್‌ ರಾಜೇಶ್‌ ಶೆಟ್ಟಿ ವಹಿಸಿಕೊಂಡಿದ್ದರು. ಮಾಡೆಲ್‌ಗಳ ಆಕರ್ಷಕ ಕ್ಯಾಟ್‌ವಾಕ್‌ಗೆ ಕಾರಣಕರ್ತರಾಗಿದ್ದರು. ಆದಿತ್ಯಾ ಶ್ರೀ ವಾತ್ಸವ್‌ ಅವರ ಸಾಥ್‌ ಕಾರ್ಯಕ್ರಮಕ್ಕಿತ್ತು.

ಸೆಲೆಬ್ರೆಟಿ ಡಿಸೈನರ್‌ ತರುಣ್‌ ತೆಹ್ಲಾಯಾನಿ

ಖ್ಯಾತ ಸೆಲೆಬ್ರೆಟಿ ಡಿಸೈನರ್‌ ತರುಣ್‌ ತೆಹ್ಲಾಯಾನಿಯವರು ಬೆಂಗಳೂರು ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸುವುದರೊಂದಿಗೆ ಟ್ರೆಡಿಷನ್‌ ಹಾಗೂ ಮಾಡರ್ನ್ ಕ್ಲಾತಿಂಗ್‌ನೊಂದಿಗೆ ಅನಾವರಣಗೊಂಡಿರುವ ತಸ್ವಾಬ್ರಾಂಡನ್ನು ರ‍್ಯಾಂಪ್‌ ಮೇಲೆ ಲಾಂಚ್‌ ಮಾಡಿದರು. ಭಾರತೀಯ ಸಂಸ್ಕೃತಿ ಹಾಗೂ ಇಲ್ಲಿನ ನೇಚರ್‌ ಸ್ಪೂರ್ತಿಯಾಗಿರಿಸಿಕೊಂಡು ಬಿಡುಗಡೆಮಾಡಲಾದ ಫ್ಯಾಷನ್‌ವೇರ್‌ಗಳ ಕುರಿತು ಹರ್ಷ ವ್ಯಕ್ತಪಡಿಸಿದರು. ಬೆಂಗಳೂರು ಫ್ಯಾಷನ್‌ ಲೋಕದಲ್ಲಿ ಮುನ್ನೆಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕೆಲವೇ ದಿನಗಳಲ್ಲಿ ಮುಂಬಯಿಯಂತೆ ಉದ್ಯಾನನಗರಿಯೂ ಕೂಡ ಫ್ಯಾಷನ್‌ ಕ್ಷೇತ್ರದಲ್ಲಿ ದಾಪುಗಾಲು ಹಾಕಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ಸುಮಾರು 50 ಮಾಡೆಲ್‌ಗಳು ಫ್ಯಾಷನ್‌ ವೀಕ್‌ನಲ್ಲಿ ರ‍್ಯಾಂಪ್‌ ವಾಕ್‌ ಮಾಡಿದ್ದು, ನಟಿ ನಮ್ರತಾ ಗೌಡ, ಯಶಸ್ವಿನಿ, ಸೋನಾಲ್‌ ಚೌಹಾನ್‌ ಹಾಗೂ ಚೈತ್ರಾವಾಸುದೇವನ್‌ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion News: ರ‍್ಯಾಂಪ್‌ ಮೇಲೆ ರಾಷ್ಟ್ರ ಪ್ರೇಮ ಸಾರಿದ ಮಹಿಳೆಯರ ಫ್ಯಾಷನ್ ಶೋ

Exit mobile version