Site icon Vistara News

Barbie Fashion: ಎಲ್ಲೆಲ್ಲೂ ಬಾರ್ಬಿ ಫ್ಯಾಷನ್‌ ಹವಾ!

Barbie Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜಗತ್ತಿನಾದ್ಯಂತ ಬಾರ್ಬಿ ಫ್ಯಾಷನ್‌ (Barbie Fashion) ಹವಾ ಆರಂಭಗೊಂಡಿದೆ. ಹೌದು. ಬಾರ್ಬಿಯಂತೆ ಡ್ರೆಸ್‌ ಮಾಡಿಕೊಳ್ಳುವುದು, ಮೇಕಪ್ ಮಾಡಿಕೊಳ್ಳುವುದು, ಸ್ಟೈಲಿಂಗ್‌ ಹಾಗೂ ಪಿಂಕ್‌ ಶೇಡ್‌ನ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವುದು ಟ್ರೆಂಡಿಯಾಗಿದೆ. ಈ ಸ್ಟೈಲಿಂಗ್‌ ಕೇವಲ ಟೀನೇಜ್‌ ಮಕ್ಕಳಿಗೆ ಹಾಗೂ ಯುವತಿಯರಿಗೆ ಹೊರತಾಗಿಲ್ಲ! ವಯಸ್ಸಿನ ಭೇದ ಭಾವವಿಲ್ಲದೇ, ಬಾರ್ಬಿ ಪ್ರಿಯ ಮಧ್ಯ ವಯಸ್ಕ ಸ್ತ್ರೀಯರನ್ನೂ ಕೂಡ ಆವರಿಸಿಕೊಂಡಿದೆ.

ಹಾಗೆಂದು ಎಲ್ಲರೂ ಕಂಪ್ಲೀಟ್‌ ಬಾರ್ಬಿಯಂತೆ ಕಾಣುತ್ತಿದ್ದಾರೆಂದಲ್ಲ! ಬಾರ್ಬಿಯ ಫೇವರೇಟ್‌ ಗುಲಾಬಿ ವರ್ಣದ ಥೀಮ್‌ ಇರುವಂತಹ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವುದು, ಸ್ಟೈಲಿಂಗ್‌ ಮಾಡುವುದು ಸೇರಿದೆ. ಇನ್ನು ಭಾರತದಲ್ಲೂ ವಿದೇಶಿ ಹಾಗೂ ದೇಸಿ ಎರಡನ್ನು ಅನುಕರಿಸುವುದು ಕಂಡು ಬರುತ್ತಿದೆ. ಕೆಲವರು ಪಿಂಕ್‌ ಔಟ್‌ಫಿಟ್‌ಗಳಲ್ಲಿ ತಮ್ಮನ್ನು ದೇಸಿ ಬಾರ್ಬಿ ಎಂದು ಟ್ಯಾಗ್‌ ಲೈನ್‌ ಹಾಕಿಕೊಳ್ಳುವುದು ಸಾಮಾನ್ಯವಾಗತೊಡಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

ಟ್ರೆಂಡಿಯಾಯ್ತು ಬಾರ್ಬಿ ಲುಕ್‌ ಹವಾ

ಇದಕ್ಕೆಲ್ಲಾ ಕಾರಣ, ಬಾರ್ಬಿ ಸಿನಿಮಾ ರಿಲೀಸ್‌ ಆಗಿರುವುದು. ಅಂದಹಾಗೆ, ಬಾರ್ಬಿ ಡಾಲ್‌ ಬಹುತೇಕ ಹೆಣ್ಣುಮಕ್ಕಳ ಬಾಲ್ಯದ ಸಂಗಾತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಪ್ರತಿ ಹೆಣ್ಣು ಮಕ್ಕಳು ಕೂಡ ಅದರೊಂದಿಗೆ ಮಾನಸಿಕವಾಗಿ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಸದಾ ಕಾರ್ಟೂನ್‌ ಹಾಗೂ ಡಾಲ್‌ ಕ್ಯಾರೆಕ್ಟರ್‌ನಲ್ಲಿ ನೋಡುತ್ತಿದ್ದ ಬಾರ್ಬಿ, ಇದೀಗ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಮಾನಿನಿಯರಿಗೆ ಖುಷಿ ತಂದಿದೆ. ಇದಕ್ಕೆ ಪೂರಕ ಎಂಬಂತೆ, ಎಲ್ಲೆಡೆ ಇದೀಗ ಬಾರ್ಬಿ ಫ್ಯಾಷನ್‌ ಹವಾ ಆರಂಭವಾಗಿದೆ ಎನ್ನುತ್ತಾರೆ ಬಾರ್ಬಿ ಫ್ಯಾಷನ್‌ ಪ್ರಿಯೆ ಹಾಗೂ ಸ್ಟೈಲಿಸ್ಟ್ ಬಿಂದು.

ಬಾರ್ಬಿ ಪಿಂಕ್‌ ಡ್ರೆಸ್‌

ಬಾರ್ಬಿಗೆ ಪಿಂಕ್‌ ಡ್ರೆಸ್‌ ಎಂದರೆ ಫೇವರೇಟ್‌. ಅದರಂತೆ ಸಿನಿಮಾ ನೋಡಲು ಹೋಗುವವರು ಕೂಡ ಪಿಂಕ್‌ ಔಟ್‌ಫಿಟ್‌ ಧರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ, ಅನೇಕ ಪಿಂಕ್‌ ಔಟ್‌ಫಿಟ್‌ ಧರಿಸಿದ ಬಾರ್ಬಿ ರೀಲ್ಸ್‌ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ನಲ್ಲಿದೆ.

ಬಾರ್ಬಿ ಡಾಲ್‌ನಂತೆ ಕಾಣುವ ಮೇಕಪ್‌

ಅಷ್ಟೇ ಏಕೆ! ಬಾರ್ಬಿ ಡಾಲ್‌ನಂತೆ ಕಾಣುವ ತಿಳಿಯಾದ ಗುಲಾಬಿ ಕೆನ್ನೆಯ ಮೇಕಪ್‌. ಗುಲಾಬಿ ಲಿಪ್‌ಸ್ಟಿಕ್‌, ಗುಲಾಬಿ ಐ ಲೈನರ್‌ ಹೀಗೆ ಇಡೀ ಮೇಕಪ್‌ ತಿಳಿ ಗುಲಾಬಿಯ ಶೇಡ್‌ನಲ್ಲಿ ಮಿಂದೆದ್ದಂತೆ ಕಾಣುತ್ತದೆ.

ಬಾರ್ಬಿ ಹೇರ್‌ಸ್ಟೈಲ್‌

ಬಾರ್ಬಿಯ ಪೋನಿಟೇಲ್‌ ಅಥವಾ ಫ್ರೀ ಹೇರ್‌ಸ್ಟೈಲ್‌ಗಳು ಇದೀಗ ಟ್ರೆಂಡಿಯಾಗಿವೆ. ಬಾರ್ಬಿಯ ಸ್ಟ್ರೇಟ್‌ಹೇರ್‌ ಅಥವಾ ವೆವ್ವಿ ಹೇರ್‌ಸ್ಟೈಲ್‌ಗಳು ಕೂಡ ಹುಡುಗಿಯರನ್ನು ಸಮ್ಮೋಹನಗೊಳಿಸಿವೆ.

ಬಾರ್ಬಿ ಸ್ಟೈಲಿಂಗ್‌

ಬಾರ್ಬಿ ಔಟ್‌ಫಿಟ್‌, ಮೇಕಪ್‌, ಹೇರ್‌ಸ್ಟೈಲ್‌ ಮಾತ್ರವಲ್ಲ,ಇದಕ್ಕೆ ಡಾಲ್‌ನ ಸ್ಟೈಲಿಂಗ್‌ ಕೂಡ ಸಾಥ್‌ ನೀಡುತ್ತಿದೆ. ನೋಡಲು ಆಕರ್ಷಕವಾಗಿ ಯಂಗ್‌ ಡಾಲ್‌ನಂತೆ ಕಾಣುವ ಈ ಥೀಮ್‌ ಸದ್ಯಕ್ಕೆ ರೀಲ್ಸ್‌ನಲ್ಲಿ ಸಾಕಷ್ಟು ಟ್ರೆಂಡಿಯಾಗಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Joggers Co-Ord Set Fashion: ಜಾಗರ್ಸ್‌ಗಳಿಗೂ ಬಂತು ಮಾನೋಕ್ರೋಮ್‌ ಕೋ-ಆರ್ಡ್ ಸೆಟ್ಸ್

Exit mobile version