ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಬಾರ್ಬಿ ಹೇರ್‌ಸ್ಟೈಲ್ಸ್ ಹುಡುಗಿಯರನ್ನು ಸಮ್ಮೋಹನಗೊಳಿಸಿವೆ. ಹೌದು. ಬಾರ್ಬಿ ಫ್ಯಾಷನ್‌ಗೆ ಸಾಥ್ ನೀಡುವ ಈ ಹೇರ್‌ಸ್ಟೈಲ್‌ಗಳು (Barbie Hairstyle Trending) ಸದ್ಯ ಟ್ರೆಂಡಿಯಾಗಿವೆ. ಸಿನಿಮಾ ರಿಲೀಸ್ ಆಗಿ ಸಾಕಷ್ಟು ದಿನಗಳು ಕಳೆದರೂ, ಮಕ್ಕಳು ಮಾತ್ರವಲ್ಲ, ಯುವತಿಯರು ಕೂಡ ಈ ಹೇರ್‌ಸ್ಟೈಲ್ ಮುಂದುವರಿಸಿದ್ದಾರೆ. ಪರಿಣಾಮ, ಸದ್ಯದ ಸೀಸನ್ ಹೇರ್‌ಸ್ಟೈಲ್ ಟ್ರೆಂಡ್‌ಗೆ ಸೇರಿದೆ.
ಕ್ಯೂಟಾಗಿ ಬಿಂಬಿಸುವ ಹೇರ್‌ಸ್ಟೈಲ್‌ಗಳಿವು
“ಬಾರ್ಬಿ ಸಿನಿಮಾದ ಎಫೆಕ್ಟ್ ಯಾವ ಮಟ್ಟಿಗೆ ಇಂದಿಗೂ ಇದೆ ಎಂದರೇ, ಸಿನಿಮಾದಲ್ಲಿ ಕಾಣಿಸಿಕೊಂಡ ಎಲ್ಲಾ ಬಗೆಯ ಹೇರ್‌ಸ್ಟೈಲ್‌ಗಳು ಇದೀಗ ಸಾಮಾನ್ಯ ಮಕ್ಕಳ ಹಾಗೂ ಯುವತಿಯರಲ್ಲಿ ಕಾಣಿಸಿಕೊಳ್ಳುತ್ತಿವೆ. ಔಟಿಂಗ್, ವೀಕೆಂಡ್ ಹೀಗೆ ನಾನಾ ಸಂದರ್ಭಗಳಲ್ಲಿ ಜತೆಯಾಗಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ಜಾನ್. ಅವರ ಪ್ರಕಾರ, ಯುವತಿಯರ ಬಾಡಿ ಮಾಸ್ ಹೇಗೆ ಇರಲಿ, ಈ ಹೇರ್‌ಸ್ಟೈಲ್‌ಗಳು ಕ್ಯೂಟಾಗಿ ಬಿಂಬಿಸುತ್ತವೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಹೇರ್‌ಸ್ಟೈಲ್‌ಗಳ ಪಟ್ಟಿ
ಬ್ಲೋ ಡ್ರೈಡ್ ಹೇರ್ ಲುಕ್ ನೀಡುವ ಬಿಗ್ ಬಾರ್ಬಿ ಬ್ಲೋ ಔಟ್, ಪಿಂಕ್ ರಿಬ್ಬನ್ ಬಳಸಿ ಅರ್ಧ ಕೂದಲನ್ನು ಪೋನಿಟೇಲ್‌ನಂತೆ ಎತ್ತಿ ಕಟ್ಟುವ, ಇನ್ನುಳಿದ ಅರ್ಧ ಕೂದಲನ್ನು ಇಳೆ ಬಿಡುವ ಬೌನ್ಸಿ ಹಾಫ್ ಅಪ್ ಹಾಫ್ ಡೌನ್ ಹೇರ್‌ಸ್ಟೈಲ್, ನೋಡಲು ಲೂಸು ಲೂಸಾಗಿ ಹೆಣೆದಂತಿರುವ ಜಡೆ ಎನ್ನಬಹುದು, ಸಿನಿಮಾ ಹೇರ್‌ಸ್ಟೈಲ್ ಭಾಷೆಯಲ್ಲಿ ಹೇಳಬೇಕೆಂದರೇ ಚಂಕಿ ಫ್ಲೈಟ್ಸ್ ಅಥವಾ ಬ್ರೈಡ್ಸ್, ಮುಂಭಾಗದ ಕೂದಲು ಮೆಸ್ಸಿಯಂತೆ ಕಾಣುವ ಈ ಸ್ಟೈಲ್ ಸಿನಿಮಾದಲ್ಲಿ ಪಿಂಕ್ ಕ್ಯಾಪ್ ಜೊತೆಗೆ ನೋಡಬಹುದು. ಇನ್ನು ಮೇಲಿನಿಂದ ಇಳೆ ಬಿಟ್ಟಂತಿರುವ ಕ್ಲಾಸಿಕ್ ಫ್ಲಿಕ್ಸ್ ಹೇರ್‌ಸ್ಟೈಲ್ ನೋಡಲು ಕಾಮನ್ ಆಗಿ ಕಂಡರೂ ಪಿಂಕ್ ಔಟ್‌ಫಿಟ್‌ನೊಂಡಿಗೆ ಕ್ಯೂಟ್ ಲುಕ್ ನೀಡುತ್ತವೆ. ಕೂದಲಿನ ಕೆಳಗಿನ ಒಂದೈದು ಇಂಚಿನ ಕೂದಲು ಉಲ್ಟಾ ಬಾಗಿದಂತಿರುತ್ತವೆ. ಬಾರ್ಬಿ ಗೊಂಬೆಯ ಹೇರ್‌ಸ್ಟೈಲ್‌ನಂತೆಯೇ ಬಿಂಬಿಸುತ್ತವೆ.
ಬಾರ್ಬಿ ಲುಕ್ ಹೇರ್‌ಸ್ಟೈಲ್‌ಗಾಗಿ ನೀವು ಮಾಡಬೇಕಾಗಿದ್ದಿಷ್ಟು
- ಕೇವಲ ಹೇರ್‌ಸ್ಟೈಲ್ ಮಾಡಿದರೆ ಸಾಲದು, ಔಟ್ಫಿಟ್ ಕೂಡ ಹೊಂದಬೇಕು ಎಂಬುದು ಗಮನದಲ್ಲಿರಲಿ.
- ನಿಮ್ಮ ಮುಖದ ಆಕಾರಕ್ಕೆ ಮ್ಯಾಚ್ ಆಗುವ ಬಾರ್ಬಿ ಹೇರ್‌ಸ್ಟೈಲ್ ಮಾಡಿ.
- ಮೊದಲು ಟ್ರಯಲ್ ನೋಡಿ, ಓಕೆಯಾದಲ್ಲಿ ಹೇರ್‌ಸ್ಟೈಲ್ ಮಾಡಿಕೊಳ್ಳಿ.
- ಕರ್ಲಿ ಹೇರ್ಸ್ಟೈಲ್ಗಳಿಗೆ ಅಷ್ಟಾಗಿ ಅಪ್ಷನ್ ಇಲ್ಲ.
- ಸ್ಟ್ರೇಟ್ ಹೇರ್ಸ್ಟೈಲ್ನಲ್ಲಿ ನಾನಾ ವಿನ್ಯಾಸ ಮಾಡಬಹುದು.
- ವೆಸ್ಟರ್ನ್ ಲುಕ್ಗೆ ಮಾತ್ರ ಈ ಹೇರ್‌ಸ್ಟೈಲ್ಸ್ ಹೊಂದುತ್ತವೆ.
- ಎಥ್ನಿಕ್ ಹಾಗೂ ಟ್ರೆಡಿಷನಲ್ ಲುಕ್ಗೆ ನಾಟ್ ಓಕೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Expensive Barbie Dolls: 10 Most Expensive Barbie Dolls Of All Time