ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಹಾಲಿಡೇ ಬೀಚ್ ಫ್ಯಾಷನ್‌ನಲ್ಲಿ (Beach Fashion) ಇದೀಗ ಲೆಕ್ಕವಿಲ್ಲದಷ್ಟು ಬಗೆಯ ಬೀಚ್‌ವೇರ್‌ಗಳು ಕಾಲಿಟ್ಟಿವೆ. ಬಿಂದಾಸ್ ಲುಕ್ ನೀಡುವ ಉಡುಪುಗಳು ಮಾತ್ರವಲ್ಲ, ನೋಡಲು ಗ್ಲಾಮರ್ ಟಚ್ ನೀಡುವ ಔಟ್‌ಫಿಟ್‌ಗಳು ಎಲ್ಲಾ ವಯಸ್ಸಿನ ಮಹಿಳೆಯರನ್ನು ಸೆಳೆಯುತ್ತಿವೆ.
ತಾತ್ಕಾಲಿಕ ಬೀಚ್‌ಸೈಡ್ ಫ್ಯಾಷನ್
ಬೀಚ್‌ವೇರ್ ಅಥವಾ ಬೀಚ್‌ಸೈಡ್ ಫ್ಯಾಷನ್ ಔಟ್‌ಫಿಟ್‌ಗಳನ್ನು ಸದಾ ಕಾಲ ಧರಿಸಲು ಸಾಧ್ಯವಿಲ್ಲ. ಇವನ್ನು ರಿಪೀಟ್ ಮಾಡಲು ನೀವು ವಾಟರ್ ಸ್ಪಾಟ್‌ಗಳಿಗೆ ಹೋದಾಗ ಮಾತ್ರ ಸಾಧ್ಯವಾಗಬಹುದು. ಹಾಗಾಗಿ ಆದಷ್ಟೂ ನಂತರವೂ ಧರಿಸಬಹುದಾದ ವಿನ್ಯಾಸದ ಔಟ್‌ಫಿಟ್‌ಗಳನ್ನು ಖರೀದಿಸುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಈ ಕುರಿತಂತೆ ಅವರು 5 ಸಿಂಪಲ್ ಐಡಿಯಾಗಳನ್ನು ಹಂಚಿಕೊಂಡಿದ್ದಾರೆ.
ಸೀಸನ್‌ಗೆ ತಕ್ಕಂತೆ ಬೀಚ್‌ವೇರ್ ಖರೀದಿಸಿ
ಮೊದಲಿಗೆ ಯಾವುದೇ ಬೀಚ್ ಪ್ರವಾಸಕ್ಕೆ ಹೋಗುವಾಗ ಸೀಸನ್ ಬಗ್ಗೆ ಯೋಚಿಸಿ. ಅದರಲ್ಲೂ ಸಮ್ಮರ್ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಬೀಚ್‌ವೇರ್‌ಗಳಿಗೆ ಮೊದಲು ಆದ್ಯತೆ ನೀಡಿ. ಸೆಕೆಯಾಗದ ಬ್ರಿಥಬಲ್ ಉಡುಪುಗಳನ್ನು ಖರೀದಿಸಿ. ಬ್ಲಾಕ್ ಹಾಗೂ ಡಾರ್ಕ್ ಶೇಡ್‌ನ ಫ್ಯಾಷನ್ ಔಟ್‌ಫಿಟ್‌ಗಳನ್ನು ಆವಾಯ್ಡ್ ಮಾಡಿ.
ಮಿಕ್ಸ್-ಮ್ಯಾಚ್ ಮಾಡಿ
ನಿಮಗೆ ಬೀಚ್‌ವೇರ್ ಖರೀದಿಸಲು ಸಾಧ್ಯವಾಗದಿದ್ದಲ್ಲಿ ಯೋಚನೆ ಬೇಡ! ನಿಮ್ಮ ಬಳಿ ಇರುವ ಸಮ್ಮರ್‌ವೇರ್‌ಗಳನ್ನು ಮಿಕ್ಸ್ ಮ್ಯಾಚ್ ಮಾಡಿ ಧರಿಸಿ. ಹೌದು. ಮಿನಿ, ಮಿಡಿ, ಕೇಪ್ರಿಸ್, ಬರ್ಮಡಾ ಹಾಗೂ ಶಾಟ್ರ್ಸ್ ಜೊತೆ ಕ್ರಾಪ್ ಟೀ ಶರ್ಟ್, ಟಾಪ್‌ಮಿಕ್ಸ್ ಮಾಡಬಹುದು.
ವಾಟರ್ ಪ್ರೂಫ್ ಬೀಚ್‌ವೇರ್
ವಾಟರ್ ಪ್ರೂಫ್ ಬೀಚ್‌ವೇರ್‌ಗಳು ಇದೀಗ ನಾನಾ ಟ್ರೆಂಡಿ ಡಿಸೈನ್‌ನಲ್ಲಿ ಲಭ್ಯ. ಅಲ್ಲದೇ, ಸಿಂಥೆಟಿಕ್ ಉಡುಪುಗಳನ್ನು ಧರಿಸಬಹುದು. ಮೈಗೆ ಅಂಟದಂತಹ ಪಾರದರ್ಶಕವಾಗಿರದ ಔಟ್‌ಫಿಟ್‌ಗಳ ಆಯ್ಕೆ ಮಾಡುವುದು ಉತ್ತಮ.
ಬೀಚ್ ಫ್ಯಾಷನ್‌ವೇರ್‌ಗೆ ಮೇಕಪ್ ಬೇಡ
ಬೀಚ್‌ಸೈಡ್ ಫ್ಯಾಷನ್ ಉಡುಪುಗಳನ್ನು ಧರಿಸಿದಾಗ ಮೇಕಪ್‌ಗೆ ನೋ ಎನ್ನಿ. ಕಣ್ಣಿಗೂ ಮೇಕಪ್ ಬೇಡ. ಆಕ್ಸೆಸರೀಸ್ ಹೆಚ್ಚು ಧರಿಸಬೇಡಿ. ಪೋನಿಟೇಲ್ ಅಥವಾ ಬನ್ ಹೇರ್‌ಸ್ಟೈಲ್ ಉತ್ತಮ. ಆದಷ್ಟೂ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
ಫ್ಲಿಪ್-ಫ್ಲಾಪ್/ಸನ್‌ಗ್ಲಾಸ್/ಹ್ಯಾಟ್ ಆಯ್ಕೆ
ಬೀಚ್‌ನಲ್ಲಿ ಶೂ ಧರಿಸಬೇಡಿ. ಆದಷ್ಟೂ ಫ್ಲಿಪ್-ಫ್ಲಾಪ್ ಶೈಲಿಯ ಫುಟ್‌ವೇರ್ ಧರಿಸಿ. ಹೀಲ್ಸ್ಗೆ ನೋ ಎನ್ನಿ. ಯಾವುದೇ ಕಾರಣಕ್ಕೂ ಡಿಸೈನರ್ ಚಪ್ಪಲಿಗಳನ್ನು ಧರಿಸಬೇಡಿ. ಟ್ರೆಂಡಿಯಾದ ಸನ್‌ಗ್ಲಾಸ್ ಜೊತೆಗೆ ಹ್ಯಾಟ್ ಧರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸಮ್ಮರ್ ಫ್ಯಾಷನ್‌ನಲ್ಲಿ ಜೆನ್ ಜಿ ಹುಡುಗಿಯರನ್ನು ಸೆಳೆಯುತ್ತಿರುವ ಗ್ಲಾಮರಸ್ ಬಾರ್ಡಾಟ್ ಡ್ರೆಸ್