ಶೀಲಾ ಸಿ, ಶೆಟ್ಟಿ, ಬೆಂಗಳೂರು
ಬೀದಿ ಬದಿಯಲ್ಲಿ ಅಥವಾ ಸ್ಟ್ರೀಟ್ ಶಾಪಿಂಗ್‌ನಲ್ಲಿ ಖರೀದಿಸುವ ಬಹುತೇಕ ಕಾಸ್ಮೆಟಿಕ್ಸ್ (Beauty care) ಎಲ್ಲವೂ ಫೇಕ್! ಅಷ್ಟು ಮಾತ್ರವಲ್ಲ, ಇವುಗಳ ನಿರಂತರ ಬಳಕೆ ಕೂಡ ಡೇಂಜರ್. ಬಳಕೆ ಮಾಡಿದ ನಂತರ ಎಂದಾದರೂ ಸರಿ ತ್ವಚೆ ಹಾಗೂ ಚರ್ಮದ ಆರೋಗ್ಯ ಹದಗೆಡುವುದು ಖಚಿತ ಎನ್ನುತ್ತಾರೆ ಎನ್ನುತ್ತಾರೆ ಕಾಸ್ಮಾಟಲಿಜಿಸ್ಟ್.
ಬೀದಿ ಬದಿಯ ಡ್ಯೂಪ್ಲಿಕೇಟ್ ಕಾಸ್ಮೆಟಿಕ್ಸ್
ಹೌದು. ಕಡಿಮೆ ಬೆಲೆಯಲ್ಲಿ ಅಥವಾ ಅರ್ಧಕ್ಕೆ ಅರ್ಧ ಬೆಲೆಗೆ ದೊರಕುತ್ತದೆ ಎನ್ನುವ ಆಸೆಯಲ್ಲಿ, ಸಾಕಷ್ಟು ಹೆಣ್ಣು ಮಕ್ಕಳು ಸ್ಟ್ರೀಟ್ ಶಾಪಿಂಗ್‌ಗೆ ಹೋದಾಗ ಬೀದಿ ಬದಿಯಲ್ಲಿ ಮಾರಾಟಕ್ಕಿಟ್ಟಿರುವ ಲಿಪ್‌ಸ್ಟಿಕ್ಸ್, ಕಾಜಲ್, ಲಿಪ್ ಪೆನ್ಸಿಲ್, ಫೌಂಡೇಷನ್, ಪ್ರೈಮರ್, ಮಾಯಿಶ್ಚರೈಸರ್, ಬ್ಲಶ್, ಪೌಡರ್ ಸೇರಿದಂತೆ ನಾನಾ ಬಗೆಯ ಕಾಸ್ಮೆಟಿಕ್ ಐಟಂಗಳನ್ನು ಖರೀದಿಸುತ್ತಾರೆ. ಅವುಗಳ ಮೇಲೆ ನಾನಾ ಹೈ ಫ್ಯಾಷನ್‌ನ ಬ್ರಾಂಡ್‌ಗಳ ಹೆಸರು ಇದೆಯಲ್ಲ ಎಂದು ನಂಬಿ ಕಣ್ಮುಚ್ಚಿಕೊಂಡು ಕಡಿಮೆ ಬೆಲೆಗೆ ಖರೀದಿಸಿರುವ ಬಗ್ಗೆ ಒಳಗೊಳಗೆ ಖುಷಿಪಟ್ಟುಕೊಳ್ಳುತ್ತಾರೆ. ಆದರೆ, ಇವೆಲ್ಲಾ ರಿಪ್ಲಿಕಾ ಅಥವಾ ಫೇಕ್ ಕಾಸ್ಮೆಟಿಕ್ಸ್. ನೋಡಿದಾಕ್ಷಣಾ ಥೇಟ್ ಬ್ರಾಂಡ್‌ಗಳ ಅಚ್ಚು ಕಾಪಿಯಂತೆ ಕಂಡರೂ ಇವು ಅವಲ್ಲ!ಹಾಗಾಗಿ ಇವನ್ನು ಖರೀದಿಸಬೇಡಿ ಎನ್ನುತ್ತಾರೆ ಸೌಂದರ್ಯ ತಜ್ಞರು.
ಅವರ ಪ್ರಕಾರ, ಬೀದಿ ಬದಿಯಲ್ಲಿ ಅಥವಾ ಸ್ಟ್ರೀಟ್ ಶಾಪಿಂಗ್‌ನಲ್ಲಿ ಖರೀದಿಸುವ ಕಾಸ್ಮೆಟಿಕ್ಸ್ ಬಳಕೆ ಸಖತ್ ಡೇಂಜರ್! ಇವುಗಳಲ್ಲಿ ಬಣ್ಣ ಹಾಗೂ ಬ್ರೈಟ್ ಲುಕ್ ನೀಡಲು ಎಮೊಲಿಯಂಟ್ಸ್, ಪೆಟ್ರೊಲ್ಯಾಟಮ್‌ನಂತಹ ತ್ವಚೆಯ ಹಾನಿಕಾರಕ ಕೆಮಿಕಲ್ಸ್ ಬಳಸಲಾಗಿರುತ್ತದೆ. ಮುಖಕ್ಕೆ ಅಥವಾ ಮೇಕಪ್ ಮಾಡಿದಾಗ ತಕ್ಷಣಕ್ಕೆ ಅವುಗಳ ಎಫೆಕ್ಟ್ ಗೊತ್ತಾಗದಿದ್ದರೂ ನಿಧಾನಗತಿಯಲ್ಲಿ ಪರಿಣಾಮ ಬೀರಲಾರಂಭಿಸುತ್ತವೆ. ಮುಂದೊಮ್ಮೆ ತ್ವಚೆಯ ಸಮಸ್ಯೆ ಎದುರಾಗಬಹುದು. ಚರ್ಮದ ಆರೋಗ್ಯವೂ ಹಾಳಾಗಬಹುದು. ಇನ್ನು ಕಣ್ಣಿಗೆ ಹಚ್ಚುವ ಕಾಜಲ್, ಐ ಲೈನರ್, ಮಸ್ಕರಾ ಹಾಗೂ ಐ ಶೇಡ್‌ಗಳು ಕಣ್ಣಿಗೆ ಹಾನಿಯನ್ನು ಉಂಟು ಮಾಡಬಹುದು. ಹಾಗಾಗಿ ಎಚ್ಚರವಹಿಸಿ ಎನ್ನುತ್ತಾರೆ ಕಾಸ್ಮಲಾಜಿಸ್ಟ್ ರೀನಾ.
ಗುಣಮಟ್ಟದ ಕಾಸ್ಮೆಟಿಕ್ಸ್ ಬಳಕೆ ಉತ್ತಮ
ಗುಣಮಟ್ಟದ ಕಾಸ್ಮೆಟಿಕ್ಸ್ ಬೆಲೆ ಹೆಚ್ಚಿರಬಹುದು. ಆದರೆ, ಇವು ಸುರಕ್ಷಿತವಾಗಿರುತ್ತವೆ. ಮುಖದ ತ್ವಚೆ ಹಾಗೂ ಕಣ್ಣಿಗೆ ಹಾನಿಯುಂಟು ಮಾಡುವ ಕೆಮಿಕಲ್ಸ್ ಹೊಂದಿರುವುದಿಲ್ಲ! ಸ್ಕಿನ್ ಫ್ರೆಂಡ್ಲಿಯಾಗಿರುತ್ತವೆ. ಬಳಸಿದ ನಂತರವೂ ಯಾವುದೇ ಆತಂಕವಿರುವುದಿಲ್ಲ ಎನ್ನುತ್ತಾರೆ ಸೌಂದರ್ಯ ತಜ್ಞರು. ಇದೀಗ ಸಾಕಷ್ಟು ಬ್ರಾಂಡೆಡ್ ಕಾಸ್ಮೆಟಿಕ್ಸ್ ಕೂಡ ತುಸು ಕೈಗೆಟಕುವ ದರದಲ್ಲಿ ದೊರೆಯುತ್ತಿವೆ ಅಂತವನ್ನೇ ಖರೀದಿಸಿ ಬಳಸಿ ಎನ್ನುತ್ತಾರೆ.
ಫೇಕ್ ಕಾಸ್ಮೆಟಿಕ್ಸ್ ಕಂಡು ಹಿಡಿಯುವುದು ಹೇಗೆ?
- ತೀರಾ ಕಡಿಮೆ ಬೆಲೆ ಇರುತ್ತದೆ.
- ಪ್ಯಾಕೇಜಿಂಗ್ ಫಿನಿಶಿಂಗ್ ಇರುವುದಿಲ್ಲ!
- ಬ್ಯಾಚ್ ನಂಬರ್, ಮ್ಯಾನುಫ್ಯಾಕ್ಚರ್ಡ್ –ಎಕ್ಸ್ಪೈರಿ ಡೇಟ್ಗಳು ಕಣ್ಣಿಗೆ ಕಾಣಿಸುವುದಿಲ್ಲ!
- ಬ್ರಾಂಡ್ ಹೆಸರುಗಳ ಸ್ಪೆಲ್ಲಿಂಗ್ ತಪ್ಪಾಗಿ ನಮೂದಾಗಿರುತ್ತದೆ.
(ಲೇಖಕಿ : ಫ್ಯಾಷನ್‌ಪತ್ರಕರ್ತೆ)
ಇದನ್ನೂ ಓದಿ: Festive Fashion: ಈದ್ ಸಂಭ್ರಮಕ್ಕೆ ಜತೆಯಾದ 3 ಜಗಮಗಿಸುವ ಡಿಸೈನರ್‌ವೇರ್ಸ್