ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಥ್ನಿಕ್, ಕ್ಯಾಶುವಲ್ ಹೀಗೆ ಎಲ್ಲಾ ಬಗೆಯ ಉಡುಪನ್ನು ಧರಿಸಿದ ಮಹಿಳೆಯರು ತಮ್ಮದೇ ಆದ ಸ್ಟೈಲ್‌ನಲ್ಲಿ ರ್ಯಾಂಪ್ ವಾಕ್ (Beauty Pageant News) ಮಾಡಿದರು. ಇಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನವಾಗಿದ್ದರು. ಯುವತಿಯರಿಂದ ಹಿಡಿದು ಅರವತ್ತೈದರ ಆಸು ಪಾಸಿನ ವಯಸ್ಸಾದ ಹಿರಿಯ ಮಹಿಳೆಯರು ಕೂಡ ಯಾವುದೇ ಮುಜುಗರವಿಲ್ಲದೇ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಔಟ್‌ಫಿಟ್‌ನಲ್ಲೂ ಅಷ್ಟೇ! ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಹೊಂದುವಂತಹ ಉಡುಪನ್ನು ಧರಿಸಿದ್ದರು. ಭಾಷೆ ಹಾಗೂ ವಯಸ್ಸಿನ ಮಿತಿ ಈ ಪೇಜೆಂಟ್‌ನಲ್ಲಿರಲಿಲ್ಲ! ಹೌದು. ಸಮ್ಮರ್ ಸೀಸನ್‌ನಲ್ಲಿ ಉದ್ಯಾನಗರಿಯ ಮಲ್ಲೇಶ್ವರದಲ್ಲಿ ನಡೆದ ಮಿಸೆಸ್ ಸೌತ್ ಗ್ಲಾಮ್ ಸೌಂದರ್ಯ ಸ್ಪರ್ಧೆಯಲ್ಲಿ ಕಂಡು ಬಂದ ಝಲಕ್ ಇದಾಗಿತ್ತು.
ಎಥ್ನಿಕ್-ವೆಸ್ಟರ್ನ್ ರೌಂಡ್ಸ್
ಎರಡು ಸುತ್ತಿನ ರೌಂಡ್ಸ್‌ನಲ್ಲಿ ಬಿಂದಾಸ್ ಆಗಿ ವಾಕ್ ಮಾಡಿದ ಮಹಿಳೆಯರು ಜ್ಯುರಿ ಪ್ಯಾನೆಲ್ ಪ್ರಶ್ನೆಗಳಿಗೆ ತಕ್ಕನಾಗಿ ಉತ್ತರಿಸಿದರು. ಮೊದಲ ಎಥ್ನಿಕ್ ರೌಂಡ್‌ನಲ್ಲಿ ಸೀರೆ, ಲೆಹೆಂಗಾ, ಗಾಗ್ರಾ, ಸಲ್ವಾರ್ ಹೀಗೆ ನಾನಾ ಬಗೆಯ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡರು. ವೆಸ್ಟರ್ನ್ ರೌಂಡ್‌ನಲ್ಲಿ ಗೌನ್, ಕೋ ಆರ್ಡ್ ಸೆಟ್, ಫ್ರಾಕ್, ಮ್ಯಾಕ್ಸಿಗಳಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡು ವಾಕ್ ಮಾಡಿದರು.
ಅನಿತಾ ಥಾಮಸ್ ರ್ಯಾಂಪ್ ವಾಕ್
ಮಿಸೆಸ್ ಸೌತ್ ಗ್ಲಾಮ್‌ನ ಆಯೋಜಕಿ ಹಾಗೂ ಬ್ರಾಂಡ್ ಅಂಬಾಸಡರ್ ಆಗಿರುವ ಅನಿತಾ ಥಾಮಸ್, ಜ್ಯುರಿ ಪ್ಯಾನೆಲ್‌ನೊಂದಿಗೆ ರ್ಯಾಂಪ್ ವಾಕ್ ಮಾಡಿದರು. ಜೊತೆಗೆ ರ್ಯಾಂಪ್ ಮೇಲೆ ಹಳೆಯ ಕನ್ನಡ ರಿಮಿಕ್ಸ್ ಹಾಡೊಂದಕ್ಕೆ ನೃತ್ಯವನ್ನು ಜೊತೆಯಾಗಿ ಮಾಡಿದ್ದು, ನೋಡುಗರನ್ನು ಆಕರ್ಷಿಸಿತು.
ನಟ ಪ್ರತಾಪ್ ರೆಡ್ಡಿ ಮಾತು
ಫ್ಯಾಷನ್ ಕ್ಷೇತ್ರ ಮಹಿಳೆಯರಿಗೆ ಸದಾ ಆತ್ಮವಿಶ್ವಾಸವನ್ನು ತುಂಬುತ್ತದೆ. ಜೊತೆಗೆ ಭವಿಷ್ಯದ ಕನಸು ಕಾಣಲು ಪ್ರೇರೆಪಿಸುತ್ತದೆ ಎಂದು ನಟ ಪ್ರತಾಪ್ ರೆಡ್ಡಿ ಹೇಳಿದರು. ಕಾರ್ಯಕ್ರಮದಲ್ಲಿ ನಟ ಭಾರ್ಗವ್ ಸೇರಿದಂತೆ ಫ್ಯಾಷನ್ ಕ್ಷೇತ್ರದ ಗಣ್ಯರು ಆಗಮಿಸಿದ್ದರು.
ಭರತನಾಟ್ಯಂ ಕಲಾವಿದೆ ಸುವರ್ಣ ಅವರು ಮಿಸೆಸ್ ಗ್ಲಾಮ್ ಸೌತ್ ವಿಜೇತೆಯಾದರು. ಮಿಸೆಸ್ ಗ್ಲಾಮ್ ಸೌತ್ ಇಂಡಿಯಾ-ಕರ್ನಾಟಕ ಟೈಟಲ್ ಶ್ರುತಿ ದೇವೇಂದ್ರ ಅವರು ಪಡೆದರು. ಮಿಸೆಸ್ ಗ್ಲಾಮ್ ಸೌತ್ ಬೆಂಗಳೂರು ಟೈಟಲ್ ಸೋನಾಲಿ ಪಡೆದುಕೊಂಡರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion : ಸಮ್ಮರ್ ಸೀಸನ್ ಶೀರ್ ಬ್ಲ್ಯೂ ಸೀರೆಯಲ್ಲಿ ನಟಿ ಡೈಸಿ ಬೋಪಣ್ಣ