Site icon Vistara News

Beauty Trend: ಹುಬ್ಬನ್ನು ತಿದ್ದಿ ತೀಡುವ ಪೆನ್ಸಿಲ್‌ ಬದಲು ಟ್ರೆಂಡಿಯಾದ ಐಬ್ರೋ ಪೆನ್‌!

Beauty Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಐಬ್ರೋ ಪೆನ್‌ಗಳು ಇದೀಗ ಹುಬ್ಬಿನ ಸೌಂದರ್ಯ (Beauty Trend) ಹೆಚ್ಚಿಸಲು ಲಗ್ಗೆ ಇಟ್ಟಿವೆ. ಮೊದಲಿದ್ದ ಐಬ್ರೋ ಪೆನ್ಸಿಲ್‌ಗಳ ಜಾಗವನ್ನು ನಿಧಾನಗತಿಯಲ್ಲಿ ಇವು ಆಕ್ರಮಿಸಿಕೊಳ್ಳುತ್ತಿದ್ದು, ನಿರಾಂತಕವಾಗಿ ಬಳಸುವ ಕಾನ್ಸೆಪ್ಟ್‌ನಿಂದಾಗಿ ಮಾನಿನಿಯರ ಮನಗೆದ್ದಿವೆ.

ಸೌಂದರ್ಯ ತಜ್ಞೆ ಜೀನತ್‌ ಹೇಳುವಂತೆ, ಬ್ಯೂಟಿ ಲೋಕದಲ್ಲಿ ಇದೀಗ ಹುಬ್ಬಿನ ಸೌಂದರ್ಯಕ್ಕೆ ಮಹತ್ವ ಮೊದಲಿಗಿಂತ ಹೆಚ್ಚಾಗಿದೆ. ಪ್ರತಿ ಬಾರಿ ಪೆನ್ಸಿಲ್‌ನಲ್ಲಿ ತಿದ್ದಿ ತೀಡುತ್ತಿದ್ದ ಜಮಾನ ಬದಲಾಗಿದೆ. ಕೊಂಚ ದುಬಾರಿಯಾದರೂ ಸೌಂದರ್ಯವರ್ಧಕಗಳನ್ನು ಖರೀದಿಸುವ ಮಾನಿನಿಯರು ಇಂದು ಹೆಚ್ಚಾಗಿದ್ದಾರೆ. ಅತಿ ಸುಲಭವಾಗಿ ಹಾಗೂ ದಟ್ಟವಾಗಿ ಕಾಣುವಂತಹ ಜಾದೂ ಮಾಡಬಲ್ಲ ಈ ಹೊಸ ತಂತ್ರಜ್ಞಾನವನ್ನು ಹೊಂದಿದ ಐಬ್ರೋ ಪೆನ್‌ನಿಂದ ಶೇಪ್‌ ನೀಡುವ ಕಾನ್ಸೆಪ್ಟ್‌ ಇದೀಗ ಜಾರಿ ಬಂದಿದೆ.

ಏನಿದು ಐಬ್ರೋ ಪೆನ್‌?

ಪೆನ್ಸಿಲ್‌ಗಳ ಜಾಗಕ್ಕೆ ಬಂದಿರುವ ಈ ಐಬ್ರೋ ಪೆನ್‌ಗಳು ನೋಡಲು ಪೆನ್‌ನಂತೆಯೇ ಕಾಣುತ್ತವೆ. ಜೆಲ್‌ ಪೆನ್‌ನಿಂದ ಬರೆದಂತೆ ಕಾಣುವ ಈ ಪೆನ್‌ಗಳಲ್ಲಿ ನಿಬ್‌ ಇರುವ ಜಾಗದಲ್ಲಿ ಮೂರ್ನಾಲ್ಕು ಬ್ರಶ್‌ ಸ್ಟ್ರೋಕ್‌ನಂತೆ ರಚಿಸಲಾಗಿರುತ್ತದೆ. ಇವನ್ನು ಹಚ್ಚಿದಾಗ ತೆಳುವಾಗಿರುವ ಐಬ್ರೋಗಳ ಜಾಗದಲ್ಲಿ ಇನ್ನೊಂದಿಷ್ಟು ಹುಬ್ಬಿನ ಕೂದಲು ಇರುವಂತೆ ಇಲ್ಯೂಷನ್‌ ಸೃಷ್ಟಿಯಾಗುತ್ತದೆ. ಖುಷಿಯ ವಿಚಾರ ಎಂದರೇ, ಇದು ಸ್ಮಡ್ಜ್‌ ಆಗದು. ಈ ರೀತಿಯ ಬಹುತೇಕ ಐಬ್ರೋ ಪೆನ್‌ಗಳು ವಾಟರ್‌ ಪ್ರೂಫ್‌ ಆಗಿರುತ್ತವೆ. ನಾನಾ ಬ್ರಾಂಡ್‌ಗಳಲ್ಲಿ ಬಗೆಬಗೆಯ ಪೆನ್‌ಗಳು ಬಿಡುಗಡೆಯಾಗಿದ್ದು, ಬ್ಲಾಕ್‌, ಬ್ರೌನ್‌, ಲೈಟ್‌ ಬ್ಲಾಕ್‌ ಹೀಗೆ ನಾಲ್ಕೈದು ಶೇಡ್‌ನವು ದೊರೆಯುತ್ತವೆ. ಹಚ್ಚಿದ ತಕ್ಷಣ ಒಣಗುತ್ತವೆ. ಮುಟ್ಟಿದರೂ ಹರಡುವುದಿಲ್ಲ. ಇದು ಅಪ್‌ಡೇಟೆಡ್‌ ಐಬ್ರೋ ಕಲರಿಂಗ್‌ ಕಾನ್ಸೆಪ್ಟ್‌ ಕೂಡ ಎನ್ನಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಜಾಹ್ನವಿ.

ಐಬ್ರೋ ಪೆನ್‌ ಬಳಸುವವರು ತಿಳಿದುಕೊಳ್ಳಬೇಕಾದ ಅಂಶಗಳು

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Ramp News: ಲಿಟಲ್‌ ಐಕಾನ್ ಇಂಡಿಯಾ ಫ್ಯಾಷನ್‌ ರ‍್ಯಾಂಪ್‌ನಲ್ಲಿ ಮಕ್ಕಳ ಕಲರವ

Exit mobile version