ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀರೆ ಹಾಗೂ ಲೆಹೆಂಗಾ ಸೇರಿದಂತೆ ಗ್ರ್ಯಾಂಡ್ ಟ್ರೆಡಿಷನಲ್‌ವೇರ್‌ಗೆ ಬೆಲ್ಟ್ ಧರಿಸುವ ಫ್ಯಾಷನ್ ಈ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ನೋಡಲು ಇಂಡೋ-ವೆಸ್ಟರ್ನ್ ಲುಕ್ ನೀಡುವ ಈ ಸ್ಟೈಲ್ ಇದೀಗ ಜೆನ್ ಝಿ ವರ್ಗದಲ್ಲಿ ಸಾಮಾನ್ಯವಾಗತೊಡಗಿದೆ.
ಸೊಂಟದ ಪಟ್ಟಿ ಬದಲಿಗೆ ಬೆಲ್ಟ್
ರೆಗ್ಯುಲರ್ ಸೊಂಟದ ಪಟ್ಟಿ ಬದಲಿಗೆ ಬೆಲ್ಟ್ ಧರಿಸುವ ಫ್ಯಾಷನ್ ಇಂದು ವೆಡ್ಡಿಂಗ್ ಸೀಸನ್‌ನಲ್ಲಿ ಕಾಮನ್ ಆಗಿದ್ದು, ಇದು ಟೀನೇಜ್ ಹಾಗೂ ಯುವತಿಯರಲ್ಲಿ ಈ ಕ್ರೇಜ್ ಹೆಚ್ಚಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಗಾ. ಸದ್ಯಕ್ಕೆ ಪ್ರಯೋಗಾತ್ಮಕ ಕಂಟೆಂಪರರಿ ಫ್ಯಾಷನ್ ಲಿಸ್ಟ್‌ಗೆ ಇದು ಸೇರಿದ್ದು, ಬರಬರುತ್ತಾ ಪಾಪ್ಯುಲರ್ ಆಗಬಹುದು ಎನ್ನುತ್ತಾರವರು. ನೋಡಲು ವಿಭಿನ್ನ ಎಂದೆನಿಸಿದರೂ ಎಥ್ನಿಕ್ ಸ್ಟೈಲ್‌ಗೆ ಹೊಸ ಲುಕ್ ನೀಡತೊಡಗಿರುವುದು ಸೀರೆ ಹಾಗೂ ಲೆಹೆಂಗಾ ಪ್ರಿಯರಿಗೆ ಇಷ್ಟವಾಗತೊಡಗಿದೆ.
ರ್ಯಾಂಪ್‌ನಲ್ಲಿ ಮೊದಲು ಪ್ರಯೋಗ
ಅಂದಹಾಗೆ, ಮೊದಲ ಬಾರಿ ಸೀರೆ ಹಾಗೂ ಲೆಹೆಂಗಾದೊಂದಿಗೆ ಬೆಲ್ಟ್ ಧರಿಸುವ ಫ್ಯಾಷನ್ ಕಂಡದ್ದು ರ್ಯಾಂಪ್ ಶೋಗಳಲ್ಲಿ. ಲ್ಯಾಕ್ಮೆ ಫ್ಯಾಷನ್, ಬ್ಲೆಂಡರ್ಸ್ ಪ್ರೈಡ್, ಮುಂಬೈ ಫ್ಯಾಷನ್ ವೀಕ್‌ಗಳಲ್ಲಿ ಪ್ರೊಫೆಷನಲ್ ಡಿಸೈನರ್‌ಗಳು ಟ್ರೆಡಿಷನಲ್ ಔಟ್‌ಫಿಟ್ ಜೊತೆ ಬೆಲ್ಟ್‌ಗಳನ್ನು ಮ್ಯಾಚ್ ಮಾಡಿ ಮಾಡೆಲ್‌ಗಳನ್ನು ವಾಕ್ ಮಾಡಿಸುವ ಪ್ರಯೋಗ ಮಾಡಿದರು. ನೋಡಲು ವಿಭಿನ್ನ ಲುಕ್ ನೀಡುತ್ತಿದ್ದ ಈ ಸ್ಟೈಲ್ ಅಚ್ಚರಿ ಎಂಬಂತೆ ಟ್ರೆಂಡಿಯಾಯಿತು. ನಂತರ ಇತರೇ ಲೋಕಲ್ ಫ್ಯಾಷನ್ ಶೋಗಳಲ್ಲೂ ಇದು ಸಾಮಾನ್ಯವಾಗತೊಡಗಿತು. ನಂತರ ಹೈಪ್ರೊಫೈಲ್ ಹಾಗೂ ಪೇಜ್ ತ್ರೀ ಪಾರ್ಟಿಗಳಲ್ಲಿ ಇದು ಕಾಮನ್ ಆಗತೊಡಗಿತು ಎನ್ನುತ್ತಾರೆ ಫ್ಯಾಷನಿಸ್ಟಾ ರಕ್ಷಿತಾ.
ಇಂಡೋ-ವೆಸ್ಟರ್ನ್ ಲುಕ್
ಸೀರೆ ಹಾಗೂ ಲೆಹೆಂಗಾದೊಂದಿಗೆ ಬೆಲ್ಟ್ ಧರಿಸುವುದು ಇಂಡೋ-ವೆಸ್ಟರ್ನ್ ಲುಕ್‌ಗೆ ಸಹಕಾರಿ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ. ಅವರ ಪ್ರಕಾರ, ಯಾರೇ ಆಗಲಿ ಈ ಶೈಲಿಯ ಸ್ಟೈಲಿಂಗ್ ಟ್ರೈ ಮಾಡುವ ಮುನ್ನ ಟ್ರಯಲ್ ಮಾಡಿ ಧರಿಸುವುದು ಉತ್ತಮ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಲುಕ್ ನೀಡುತ್ತದೆ ಎಂದು ಸಲಹೆ ನೀಡುತ್ತಾರೆ.
ಬೆಲ್ಟ್ ಆಯ್ಕೆ ಹೀಗೆ
ಆದಷ್ಟೂ ಬಕಲ್ ಮಾದರಿಯ ಬೆಲ್ಟ್ ಆಯ್ಕೆ ಉತ್ತಮ. ಲೆದರ್ ಬೆಲ್ಟ್ ಧರಿಸುವ ಡಿಸೈನರ್‌ವೇರ್‌ಗೆ ಮ್ಯಾಚ್‌ಆಗುತ್ತದೆಯೇ ಎಂಬುದನ್ನು ನೋಡಿಕೊಂಡು ಚೂಸ್ ಮಾಡಿ. ಇನ್ನು ಕ್ರಿಸ್ಟಲ್ ಹಾಗೂ ಗೋಲ್ಡನ್ ಬಕಲ್ ಶೈಲಿಯವು ಎಲ್ಲಾ ಡಿಸೈನರ್‌ವೇರ್‌ಗೂ ಚೆನ್ನಾಗಿ ಕಾಣುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ಬ್ಲ್ಯಾಕ್ ಲೆದರ್ ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಗ್ಲಾಮರಸ್ ಲುಕ್