ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಿಗ್ ಬಾರ್ಡರ್ ಹೊಂದಿರುವ ರೇಷ್ಮೆಯ ಸಾಂಪ್ರದಾಯಿಕ ಶೈಲಿಯ ಲಂಗ-ದಾವಣಿಗಳು ಈ ಬಾರಿ ಸಂಕ್ರಾಂತಿಯ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಧರಿಸಿದಾಗ ನೋಡಲು ಪಕ್ಕಾ ಸೌತ್ ಇಂಡಿಯನ್ ಲುಕ್ ನೀಡುವ ಈ ಟ್ರೆಡಿಷನಲ್ ರೇಷ್ಮೆಯ ಫ್ಯಾಬ್ರಿಕ್‌ನಿಂದ ಸಿದ್ಧಗೊಂಡಿರುವ ಈ ಲಂಗ-ದಾವಣಿಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಜ್ಜಾಗಿವೆ.
ಟ್ರೆಡಿಷನಲ್ ಲುಕ್‌ಗಾಗಿ ಬಿಗ್ ಬಾರ್ಡರ್
“ಪ್ರತಿ ಬಾರಿಯಂತೆ ಈ ಬಾರಿಯು ಸಾಂಪ್ರದಾಯಿಕ ಫ್ಯಾಷನ್‌ನಲ್ಲಿ ಲಂಗ-ದಾವಣಿಯದ್ದೇ ಅಬ್ಬರ. ಆದರೆ, ಕೊಂಚ ಡಿಸೈನ್ ಹಾಗೂ ಸ್ಟಿಚ್ಚಿಂಗ್‌ನಲ್ಲಿ ಬದಲಾವಣೆಯಾಗಿದೆಯಷ್ಟೇ! ರೇಷ್ಮೆ ಸೀರೆಯ ಬಿಗ್ ಬಾರ್ಡರ್‌ನಂತೆ ಲಂಗದ ಬಾರ್ಡರ್‌ಗಳು ಅಗಲವಾಗಿವೆ. ಇಡೀ ಔಟ್‌ಫಿಟ್‌ನ ಹೈಲೈಟ್ ಆಗಿವೆ. ಹಳೆಯ ಕಾಲದ ರೇಷ್ಮೆ ಸೀರೆಗಳಿಂದ ಹೊಲೆದಂತೆ ಕಾಣುವ ಈ ಟ್ರೆಡಿಷನಲ್ ಲಂಗ-ದಾವಣಿಗಳು ಕೇವಲ ಯುವತಿಯರಿಗೆ ಮಾತ್ರವಲ್ಲ, ಮಾನಿನಿಯರಗೂ ಪ್ರೀತಿ ಪಾತ್ರವಾಗಿವೆ “ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಫರ್ಟ್ ರೇಷ್ಮಾ. ಅವರ ಪ್ರಕಾರ, ಸಂಕ್ರಾಂತಿ ಹಬ್ಬಕ್ಕೂ ಲಂಗ-ದಾವಣಿಗೂ ಅವಿನಾಭಾವ ಸಂಬಂಧವಿದೆ. ಹಾಗಾಗಿ ಪ್ರತಿ ಬಾರಿಯೂ ಹೊಸ ಡಿಸೈನ್‌ನೊಂದಿಗೆ ರೂಪದೊಂದಿಗೆ ಇವು ಮರು ಎಂಟ್ರಿ ನೀಡುತ್ತಲೇ ಇರುತ್ತವೆ ಎನ್ನುತ್ತಾರೆ. ಇನ್ನು, ಲಂಗ-ದಾವಣಿ ಉಡುಗೆ ಫೆಸ್ಟೀವ್ ಸೀಸನ್‌ನ ಸಂಸ್ಕೃತಿಯ ಪ್ರತೀಕ ಎನ್ನುತ್ತಾರೆ ಮಾಡೆಲ್ ಹಾಗೂ ಬೆಂಗಳೂರು ವುಮೆನ್ ಪವರ್ ಸಂಸ್ಥಾಪಕಿ ಸ್ವಾತಿ ದೇಸಾಯಿ.
ರೇಷ್ಮೆಯ ಬಿಗ್ ಬಾರ್ಡರ್ ಲಂಗ ದಾವಣಿ
ಶುದ್ಧ ರೇಷ್ಮೆ ಫ್ಯಾಬ್ರಿಕ್‌ನ ಬಿಗ್ ಬಾರ್ಡರ್ ಲಂಗ-ದಾವಣಿಗಳಲ್ಲೂ ಇದೀಗ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಜರತಾರಿ ಸೀರೆಯಂತೆ ಕಾಣುವ ಕೆಲವು ಲಂಗದಲ್ಲಿ ಟ್ರೆಡಿಷನಲ್ ಪ್ರಿಂಟ್ಸ್ ಇರುವಂತಹ ಬಿಗ್ ಬಾರ್ಡರ್‌ಗಳು, ಟೆಂಪಲ್ ಡಿಸೈನ್ ಇರುವ ಬಿಗ್ ಬಾರ್ಡರ್ಸ್, ಜೆಮೆಟ್ರಿಕಲ್ ಡಿಸೈನ್ಸ್ ಬಾರ್ಡರ್‌ಗಳು ಸೇರಿದಂತೆ ನಾನಾ ಬಗೆಯವು ಈ ಫೆಸ್ಟಿವ್ ಸೀಸನ್‌ನಲ್ಲಿ ಚಾಲ್ತಿಯಲ್ಲಿವೆ. ಇವನ್ನು ಧರಿಸಿದಾಗ ಇಡೀ ಲುಕ್ ಟ್ರೆಡಿಷನಲ್ ಇಮೇಜ್ ಪಡೆಯುತ್ತದೆ. ಪಕ್ಕಾ ಸೌತ್ ಇಂಡಿಯನ್ ವುಮೆನ್ ಲುಕ್ ನೀಡುತ್ತದೆ.
ಬಿಗ್ ಬಾರ್ಡರ್ ರೇಷ್ಮೆಯ ಲಂಗ-ದಾವಣಿಯಲ್ಲಿ ಮೇಕ್‌ಓವರ್
- ಬಿಗ್ ಬಾರ್ಡರ್ ಲಂಗ-ದಾವಣಿ ಧರಿಸಿದಾಗ ಟ್ರೆಡಿಷನಲ್ ಲುಕ್ ನೀಡುವ ಮೇಕಪ್ ಮಾಡಿ.
ಹೇರ್ಸ್ಟೈಲ್ ಕೂಡ ಸಾಂಪ್ರದಾಯಿಕ ಲುಕ್ಗೆ ಸಾಥ್ ನೀಡುತ್ತದೆ.
ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಡಿಸೈನ್ಸ್ ಆಯ್ಕೆ ಮಾಡಿ.
ಹಣೆಗೆ ಬಿಂದಿಯಿಡುವುದನ್ನು ಮರೆಯಬೇಡಿ.
ಆಂಟಿಕ್ ಲುಕ್ ನೀಡುವ ಆಭರಣಗಳನ್ನು ಧರಿಸಿ.
ಪಾದರಕ್ಷೆಗಳು ಈ ಲುಕ್ಗೆ ಮ್ಯಾಚ್ ಆಗುವಂತಿರಬೇಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Jhumka Neck Chain Fashion: ಯುವತಿಯರ ಕುತ್ತಿಗೆ ಅಲಂಕರಿಸಲು ಬಂತು ಜುಮ್ಕಾ ಸರಗಳು!