ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಿಕಿನಿ ಟಾಪ್‌ಗಳು (Bikini Top Outfits) ಇದೀಗ ಕ್ಯಾಶುವಲ್ ಔಟ್‌ಫಿಟ್‌ಗಳೊಂದಿಗೆ ಸೇರಿಕೊಂಡಿವೆ. ಕೇವಲ ಬೀಚ್ ಹಾಗೂ ವಾಟರ್ ಸ್ಪಾಟ್‌ಗಳಿಗೆ ಸೀಮಿತವಾಗಿದ್ದ ಬಿಕಿನಿ ಸೆಟ್‌ನಲ್ಲಿ, ಟಾಪ್‌ಗಳು ಮಾತ್ರ ಇತರೇ ಔಟ್‌ಫಿಟ್‌ಗಳೊಂದಿಗೆ ಸೇರಿ ಹೊಸ ರೂಪ ಪಡೆದಿವೆ. ನೋಡಲು ಗ್ಲಾಮರಸ್ ಲುಕ್ ನೀಡುವ ಈ ಬಿಕಿನಿ ಟಾಪ್‌ಗಳು ಹಾಲಿವುಡ್, ಬಾಲಿವುಡ್ ಹಾಗೂ ಫ್ಯಾಷನ್ ಲೋಕದ ತಾರೆಯರ ಫೇವರೇಟ್ ಕ್ಯಾಶುವಲ್ ಔಟ್‌ಫಿಟ್‌ನ ಟ್ರಾವೆಲಿಂಗ್ ಲಿಸ್ಟ್‌ನಲ್ಲಿವೆ ಎಂದರೂ ಅತಿಶಯೋಕ್ತಿಯಾಗದು ! ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್. ಬಿಕಿನಿ ಡೇ ಹಿನ್ನೆಲೆಯಲ್ಲಿ ಅವರು ಈ ಕುರಿತಂತೆ ವಿವರಿಸಿದ್ದಾರೆ.
ಬಾಲಿವುಡ್ ತಾರೆಯರ ಬಿಕಿನಿ ಟಾಪ್ ಔಟ್‌ಫಿಟ್ ಪ್ರೇಮ
ಜಾನ್ವಿ ಕಪೂರ್, ಅನನ್ಯಾ ಪಾಂಡೇ, ಆಲಿಯಾ, ತಾರಾ ಸುತಾರಿಯಾ, ಮಲೈಕಾ, ನೋರಾ, ಶೆರ್ಲೀನ್, ಶುಭ್ರಾ ಅಯ್ಯಪ್ಪ ಸೇರಿದಂತೆ ನಾನಾ ತಾರೆಯರು ಈ ಬಿಕಿನಿ ಟಾಪ್ ಅಥವಾ ಬಿಕಿನಿ ಬ್ಲೌಸ್ ಔಟ್‌ಫಿಟ್ ಪ್ರಿಯರು. ವಿದೇಶ ಪ್ರವಾಸಗಳಲ್ಲಿ, ಬೀಚ್ ಸುತ್ತ ಮುತ್ತಾ, ಇಲ್ಲವೇ ವಾಟರ್ ಸ್ಪಾಟ್‌ಗಳಲ್ಲಿ ಇತರೇ ಔಟ್‌ಫಿಟ್‌ನೊಂದಿಗೆ ಬಿಕಿನಿ ಟಾಪ್ ಮಿಕ್ಸ್ ಮ್ಯಾಚ್ ಮಾಡಿ ಓಡಾಡುವುದು ಎಲ್ಲರಿಗೂ ಗೊತ್ತೇ ಇದೆ. ಅಷ್ಟೇಕೆ! ಇತ್ತೀಚೆಗೆ, ಬಿಕಿನಿ ಟಾಪ್‌ಗಳು ಬ್ಲೌಸ್‌ಗಳಾಗಿ ಪರಿವರ್ತನೆಗೊಂಡು ಇಂಡಿಯನ್ ಔಟ್‌ಫಿಟ್‌ಗಳೊಂದಿಗೂ ಮಿಕ್ಸ್ ಮ್ಯಾಚ್ ಆಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಅಮಿತ್.
ಬಿಕಿನಿ ಟಾಪ್/ಬ್ಲೌಸ್ ಮಿಕ್ಸ್ ಮ್ಯಾಚ್
ಕಲರ್‌ಫುಲ್ ಬಿಕಿನಿ ಟಾಪ್ ಡೆನಿಮ್ ಶಾಟ್ರ್ಸ್, ಪ್ಯಾಂಟ್, ಟೋರ್ನ್ ಪ್ಯಾಂಟ್, ಬರ್ಮಡಾ, ಮಿನಿ ಸ್ಕರ್ಟ್, ಮಿಡಿ ಸ್ಕರ್ಟ್, ಟೈಟ್ಸ್ ಶಾಟ್ರ್ಸ್ ಸೇರಿದಂತೆ ವೆಸ್ಟರ್ನ್ ಲುಕ್ ನೀಡುವ ಉಡುಪುಗಳೊಂದಿಗೆ ಇವು ಮಿಕ್ಸ್ ಮ್ಯಾಚ್ ಆಗಿವೆ. ಅಲ್ಲದೇ ಬಿಂದಾಸ್ ಫಂಕಿ ಲುಕ್‌ಗೆ ಸಾಥ್ ನೀಡಿವೆ. ಇನ್ನು ಎಥ್ನಿಕ್ ಸ್ಕರ್ಟ್‌ಗಳೊಂದಿಗೂ ಬಿಕಿನಿ ಸ್ಟೈಲ್ ಬ್ಲೌಸ್ ಮ್ಯಾಚ್ ಮಾಡಿರುವುದಕ್ಕೆ ಸಾಕಷ್ಟು ಬಾಲಿವುಡ್‌ನ ಸಿನಿಮಾಗಳಲ್ಲಿ ನಾಯಕಿಯರು ಧರಿಸಿರುವ ಔಟ್‌ಫಿಟ್ ಸ್ಟೈಲೇ ಉದಾಹರಣೆ ಎನ್ನುತ್ತಾರೆ ಫ್ಯಾಷನಿಸ್ಟ್ ರಾಶಿ. ಅವರ ಪ್ರಕಾರ, ಈ ಜನರೇಷನ್‌ನ ನಾಯಕಿಯರು ಗ್ಲಾಮರಸ್ ಬಿಕಿನಿ ಟಾಪ್ ಅಥವಾ ಬ್ಲೌಸನ್ನು ಆಯ್ಕೆ ಮಾಡುವುದು ಹೆಚ್ಚಾಗಿದೆ. ಅವುಗಳ ಫ್ಯಾಬ್ರಿಕ್ ಮಾತ್ರ ಬದಲಾಗಿದೆ ಅಷ್ಟೇ! ಸ್ಟಿಚ್ಚಿಂಗ್ ಹಾಗೂ ಡಿಸೈನ್ ಕಾನ್ಸೆಪ್ಟ್ ಹಾಗೆಯೇ ಉಳಿದಿದೆ ಎನ್ನುತ್ತಾರೆ.
ಬಿಕಿನಿ ಟಾಪ್‌ನ ಹೊಸ ರೂಪ
ಸ್ಕಟ್ರ್ಸ್, ಲೆಹೆಂಗಾಗೆ ಧರಿಸುವ ಬಿಕಿನಿ ಬ್ಲೌಸ್ ಕೂಡ ಈ ಬಿಕಿನಿ ಟಾಪ್ ಡಿಸೈನ್‌ನಿಂದಲೇ ಹೊಸ ರೂಪ ಪಡೆದಿದೆ. ಇಂಡೋ-ವೆಸ್ಟರ್ನ್ ಲುಕ್‌ಗೆ ಸಾಥ್ ನೀಡುವ ಈ ಬಿಕಿನಿ ಬ್ಲೌಸ್ ಹಾಗೂ ಟಾಪ್‌ಗಳು ಕೊಂಚ ಸ್ಥಳೀಯ ವಿನ್ಯಾಸದಲ್ಲಿ ಮಾರ್ಪಡಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Pageant News: ಮಿಸ್ಟರ್ ಮತ್ತು ಮಿಸ್ ಐಕಾನ್ ಸೌಂದರ್ಯ ಸ್ಪರ್ಧೆಯಲ್ಲಿ ಕಾಲೇಜು ಹುಡುಗ-ಹುಡುಗಿಯರ ಸಂಭ್ರಮ