Site icon Vistara News

ಬಿಂದಾಸ್‌ ಹುಡುಗಿಯರ ಟೊರ್ನ್ ಜೀನ್ಸ್(Jeans) ಶಾರ್ಟ್ಸ್(Shorts) ಸವಾರಿ!

ದಿಶಾ ಪಟಾನಿ, ಬಾಲಿವುಡ್‌ ನಟಿ

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕೇವಲ ಜೀನ್ಸ್‌ ಪ್ಯಾಂಟ್‌ಗೆ ಸೀಮಿತವಾಗಿದ್ದ ಟೊರ್ನ್‌ ಕಾನ್ಸೆಪ್ಟ್ ಇದೀಗ ಶಾರ್ಟ್ಸ್ ಗೂ ಲಗ್ಗೆ ಇಟ್ಟಿದೆ. ಈ ಬಾರಿಯ ಸೀಸನ್‌ ಟ್ರೆಂಡ್‌ನಲ್ಲಿ ಕ್ಲೋಸ್ಡ್‌ ಕ್ಯಾಶುವಲ್‌ ಡ್ರೆಸ್‌ಗಳು ಸೈಡಿಗೆ ಸರಿದಿದ್ದು, ಜಿಮ್‌ ವರ್ಕೌಟ್‌ ನಂತರ ಧರಿಸುವ ಇಲ್ಲವೇ, ಔಟಿಂಗ್‌ಗೆ ಧರಿಸುವ ಉಡುಪುಗಳ ಸಾಲಿನಲ್ಲಿ ಗ್ಲಾಮರಸ್‌ ಲುಕ್‌ ನೀಡುವ ಟೊರ್ನ್‌ ಶಾರ್ಟ್ಸ್ ಯುವತಿಯರ ಮನ ಗೆದ್ದಿವೆ.

ಏನಿದು ಟೊರ್ನ್‌ ಶಾರ್ಟ್ಸ್:

ನೋಡಲು ಅಲ್ಲಲ್ಲಿ ಹರಿದಂತಿರುವ ವಿನ್ಯಾಸ, ಇಲ್ಲವೇ ಉಡುಪಿನ ಕೊನೆಯಲ್ಲಿ ಹೆಮ್‌ ಇಲ್ಲದೇ ದಾರ ಬಿಚ್ಚಿ ಹೋದಂತಿರುವ ಡಿಸೈನ್‌. ತಕ್ಷಣಕ್ಕೆ ಇದು ನೋಡಲು ಹರಿದ ಹಳೆಯ ಉಡುಪಿನಂತೆ ಕಂಡರೂ ಔಟಿಂಗ್‌ ಡ್ರೆಸ್‌ಕೋಡ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ. ಅದರಲ್ಲೂ ಬ್ಲೀಚ್‌ ಬ್ಲ್ಯೂ, ಶ್ವೇತ ವರ್ಣ, ಐಸ್‌ ಬ್ಲ್ಯೂ, ಕ್ರೀಮ್‌ ಶೇಡ್‌ನ ಮಿನಿ, ಮೈಕ್ರೋ ಶಾರ್ಟ್ಸ್, ಡೆನೀಮ್‌ ಜೀನ್ಸ್‌ ಶಾರ್ಟ್ಸ್ ರನ್ನಿಂಗ್‌ನಲ್ಲಿವೆ. “ಡೆನೀಮ್‌ ಟೊರ್ನ್‌ ಶಾರ್ಟ್ಸ್ ಧರಿಸುವವರ ಸ್ಟೈಲೇ ಭಿನ್ನ-ವಿಭಿನ್ನ. ಯಾಕೆಂದರೆ, ಇದು ಪಾಶ್ಚಿಮಾತ್ಯ ಶೈಲಿಯ ಸ್ಟೈಲ್‌ ಸ್ಟೇಟ್‌ಮೆಂಟ್‌. ಇದೀಗ ಲೈಟ್‌ವೇಟ್‌ ಇರುವಂತಹ ಟೊರ್ನ್‌ ಡೆನೀಮ್‌ ಶಾರ್ಟ್ಸ್ ಕೂಡ ಮಾರುಕಟ್ಟೆಗೆ ನಾನಾ ಬ್ರಾಂಡ್‌ಗಳಲ್ಲಿ ಆಗಮಿಸಿವೆ. ಹೆಚ್ಚಾಗಿ ಕಾಲೇಜು ಹುಡುಗಿಯರನ್ನು ಸೆಳೆದಿವೆ’ ಎನ್ನುತ್ತಾರೆ ಸ್ಟೈಲಿಸ್ಟ್ ಡೇವಿಡ್‌.

ದಿಶಾ ಪಟಾನಿ, ಬಾಲಿವುಡ್‌ ನಟಿ

ಹಾಲಿವುಡ್‌ನಲ್ಲಿ ಚಾಲ್ತಿಯಲ್ಲಿದ್ದ ಈ ಫ್ಯಾಷನ್‌ ಮೊದಮೊದಲು ಶಾರ್ಟ್ಸ್ ಜೀನ್ಸ್‌(Jeans) ಪ್ಯಾಂಟ್‌ ಮೂಲಕ ನಮ್ಮಲ್ಲಿ ಕಾಲಿಟ್ಟಿತ್ತು. ಇದೀಗ ಜೀನ್ಸ್‌ ಫ್ಯಾಷನ್‌ ಅನ್ನು ಹಿಂದಕ್ಕೆ ಹಾಕಿ ಈ ಸೀಸನ್‌ನ ಶಾರ್ಟ್ಸ್ ಉಡುಪುಗಳ ವಿಭಾಗದಲ್ಲಿ ಹಾಟ್‌ ಟ್ರೆಂಡ್‌ನಲ್ಲಿ ಮೊದಲಾಗಿದೆ.

ತಾರೆಯರ ಫೇವರಿಟ್:

ಹಾಲಿವುಡ್‌ನ ನಟಿಯರ ಫೇವರಿಟ್‌ ಡ್ರೆಸ್‌ಕೋಡ್‌ ಟೊರ್ನ್‌ ಶಾರ್ಟ್ಸ್(Shorts) ಎಂದರೂ ತಪ್ಪಿಲ್ಲ! ಏಂಜಲೀನಾರಿಂದಿಡಿದು ಕೆನ್ನೆಲ್‌ವರೆಗೂ ಈ ಟೊರ್ನ್‌ ಡೆನೀಮ್‌ ಶಾರ್ಟ್ಸ್ ಮೋಡಿ ಮಾಡಿವೆ. ಬಾಲಿವುಡ್‌ನ ದಿಶಾ ಪಟಾಣಿ, ಜಾನ್ವಿ ಕಪೂರ್‌, ಸಾರಾ, ಅನನ್ಯಾ ಪಾಂಡೆ, ತಾರಾ ಸುತಾರಿಯಾ, ಪೂಜಾ ಹೆಗ್ಡೆ, ನೋರಾ, ಅದಿತಿ ಸೇರಿದಂತೆ ಸಾಕಷ್ಟು ಸಿನಿ ತಾರೆಯರು ಟೊರ್ನ್‌ ಶಾರ್ಟ್ಸ್ ನ ಮೋಹ ಪಾಶಕ್ಕೆ ಒಳಗಾಗಿದ್ದಾರೆ. ಕೆಲವರು ‘ಆಫ್ಟರ್‌ ಜಿಮ್‌ ಅವರ್ಸ್‌’ ಡ್ರೆಸ್‌ಕೋಡ್‌ ಆಗಿ ಪರಿವರ್ತಿಸಿಕೊಂಡಿದ್ದಾರೆ. ಮತ್ತೆ ಕೆಲವರು ಔಟಿಂಗ್‌ ಡ್ರೆಸ್‌ಕೋಡ್‌ ಆಗಿ ಧರಿಸಲಾರಂಭಿಸಿದ್ದಾರೆ. ಇದೀಗ ದಕ್ಷಿಣ ಭಾರತದ ತಾರೆಯರು ಕೂಡ ತಮ್ಮ ಔಟಿಂಗ್‌ ಹಾಗೂ ಫೋಟೋಶೂಟ್‌ಗಳಲ್ಲಿ ಟೊರ್ನ್‌ ಶಾರ್ಟ್ಸ್ ಧರಿಸಲಾರಂಭಿಸಿದ್ದಾರೆ.

ಪರ್ಫೆಕ್ಟ್ ಲುಕ್‌:

ಟೊರ್ನ್‌ ಶಾರ್ಟ್ಸ್ ಗ್ಲಾಮರಸ್‌ ಲುಕ್‌ ನೀಡುವುದರೊಂದಿಗೆ ಔಟಿಂಗ್‌ ಹಾಗೂ ಪಿಕ್‌ನಿಕ್‌ಗೆ ಚೆನ್ನಾಗಿ ಕಾಣಿಸುತ್ತವೆ. ಇತರೇ ಸಾಫ್ಟ್‌ ಮೆಟಿರೀಯಲ್‌ನಂತೆ ಜಾರುವುದಿಲ್ಲ. ಬ್ರಾಂಡೆಡ್‌ನಲ್ಲಿ ಮಾತ್ರ ಪರ್ಫೆಕ್ಟ್ ಫಿಟ್ಟಿಂಗ್‌ನವು ದೊರೆಯುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ ಹರ್ಷ್‌. ಅವರ ಪ್ರಕಾರ: ”ಇವುಗಳನ್ನು ಧರಿಸುವಾಗ ಆದಷ್ಟೂ ಹೈ ಹೀಲ್ಸ್‌ ಧರಿಸಬೇಕು. ನೋಡಲು ಕಾಲು ಸುಂದರವಾಗಿಲ್ಲದಿದ್ದಲ್ಲಿ ಸ್ಟಾಕ್ಸಿನ್ಸ್‌ ಧರಿಸಬೇಕು. ಶೂಗಳು ಬೆಸ್ಟ್‌ ಮ್ಯಾಚ್‌ ಆಗುತ್ತವೆ”. ಅವರವರ ಪರ್ಸನಾಲಿಟಿಗೆ ತಕ್ಕಂತೆ ಟೊರ್ನ್‌ ಶಾರ್ಟ್ಸ್ ಆಯ್ಕೆ ಮಾಡುವುದು ಉತ್ತಮ. ಇಲ್ಲವಾದಲ್ಲಿ ಹಿಂಭಾಗ ಹಾಗೂ ಟಮ್ಮಿ ಭಾಗ ಪ್ಲಂಪಿಯಾದಂತೆ ಕಾಣಬಹುದು ಎಂದು ಎಚ್ಚರಿಸುತ್ತಾರವರು.

ಯಾರಿಗೆ ಸೂಕ್ತ?

ಉದ್ದಗಿರುವವರಿಗೆ ಇದು ಪರ್ಫೆಕ್ಟ್ ಸೂಟ್‌ ಆಗುತ್ತದೆ. ಪ್ಲಂಪಿಯಾಗಿರುವವರಿಗೆ ನಾಟ್‌ ಓಕೆ. ಲಾಂಗ್‌ ಡೆನೀಮ್‌ ಟೊರ್ನ್‌ ಶಾರ್ಟ್ಸ್ ಗೆ ಕ್ರಾಪ್‌ ಟಾಪ್‌ ಧರಿಸಬಹುದು. ಆದಷ್ಟೂ ನೆಕ್‌ಲೈನ್‌ ಶಾರ್ಟ್ಸ್ ಗೆ ಸೂಟ್‌ ಆಗುವಂತಿರಬೇಕು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| New Trend: ಆಫೀಸ್‌ವೇರ್‌ಗೆ ಲಗ್ಗೆ ಇಟ್ಟ ಪ್ರಿಂಟೆಡ್‌ ಶರ್ಟ್‌!


Exit mobile version