Site icon Vistara News

ಗಂಟೆಗಟ್ಲೆ Binge Watching ಮಾಡಿದ್ರೆ ರಕ್ತ ಹೆಪ್ಪುಗಟ್ಟಬಹುದು ಹುಷಾರ್‌!

binge watching

ಇತ್ತೀಚೆಗೆ ಪ್ರತಿಷ್ಠಿತ ಕಂಪನಿಯ ಉದ್ಯೋಗಿಯೊಬ್ಬರಿಗೆ ಉಸಿರಾಟದ ತೊಂದರೆ, ಎದೆನೋವು ಎದುರಾಯಿತು. ವೈದ್ಯರು ಪರಿಶೀಲಿಸಿ, ಇದು ʼಪಲ್ಮನರಿ ಎಂಬೋಲಿಸಂʼ ಎಂದರು. ಹಾಗಂದರೆ ಶ್ವಾಸಕೋಸದ ನಾಳದಲ್ಲಿ ಉಂಟಾದ ಒಂದು ಬ್ಲಾಕ್.‌ ಇದು ಉಂಟಾದುದು ಕಾಲಿನಲ್ಲಿ ಸೃಷ್ಟಿಯಾದ ಒಂದು ಬ್ಲಡ್‌ ಕ್ಲಾಟ್‌ (ಹೆಪ್ಪುಗಟ್ಟಿದ ರಕ್ತ) ನಿಂದ. ಕಂಪ್ಯೂಟರ್‌ನ ಮುಂದೆ ಬಹುಕಾಲ ಕೂತಿರುವುದು ಇದಕ್ಕೆ ಕಾರಣವಿರಬಹುದು ಎಂದು ವೈದ್ಯರು ಊಹಿಸಿದರು.

ಬಹುಕಾಲ ಚಲನೆಯಿಲ್ಲದೆ ಒಂದೇ ಕಡೆ ಕುಳಿತಿರುವುದನ್ನು ರೂಢಿ ಮಾಡಿಕೊಂಡರೆ ಡೀಪ್‌ ವೇಯ್ನ್‌ ಥ್ರೋಂಬೋಸಿಸ್‌ (DVT) ಉಂಟಾಗಬಹುದು. ಇದು ತೊಡೆ ಹಾಗೂ ಕಾಲಿನ ದೊಡ್ಡ ರಕ್ತನಾಳಗಳನ್ನು ಬಾಧಿಸುತ್ತದೆ. ನಂತರ ಈ ರಕ್ತದ ಹೆಪ್ಪುಗಟ್ಟಿದ ಬಿಂದುಗಳು ಶ್ವಾಸಕೋಶ, ಹೃದಯಕ್ಕೂ ಪ್ರಯಾಣ ಬೆಳೆಸುತ್ತವೆ. ಇದರಿಂದ ಉಸಿರಾಟದ ಸಮಸ್ಯೆ, ಎದೆನೋವು ಉಂಟಾಗಬಹುದು. ಸರಿಯಾದ ಕಾಲಕ್ಕೆ ಡಯಾಗ್ನೋಸಿಸ್‌ ಆಗದಿದ್ದರೆ ಸಾವು ಕೂಡ ಸಂಭವಿಸಬಹುದು.

ಹೆಚ್ಚಿನ ಯುವಜನ ಇಂದು ಬಿಂಜ್‌ ವಾಚಿಂಗ್‌ (ಗಂಟೆಗಟ್ಟಲೆ ಕುಳಿತಲ್ಲೇ ಇದ್ದು ವೆಬ್‌ ಶೋ ನೋಡುವುದು) ರೂಡಿಸಿಕೊಂಡಿದ್ದಾರೆ. ಇದು ಅಪಾಯಕರ. ಕೆಲವೊಮ್ಮೆ ವಿಮಾನದಲ್ಲಿ ಬಹುಕಾಲ ಕುಳಿತಿದ್ದಾಗಲೂ (ಇದಕ್ಕೆ ಕೋಚ್‌ ಕ್ಲಾಸ್‌ ಸಿಂಡ್ರೋಮ್‌ ಅನ್ನುತ್ತಾರೆ), ಸರ್ಜರಿಗೆ ಒಳಗಾಗಿ ಹಾಸಿಗೆಯಲ್ಲೇ ಇದ್ದಾಗಲೂ ಇದು ಸಂಭವಿಸಬಹುದು. ಬೊಜ್ಜು ಇದ್ದವರು, ಗರ್ಭನಿರೋಧಕ ಗುಳಿಗೆ ಸೇವಿಸುವವರು, ಕೆಲವು ವಂಶವಾಹಿ ಸಮಸ್ಯೆಗಳು ಇರುವವರಲ್ಲಿ ಇದರ ರಿಸ್ಕ್‌ ಹೆಚ್ಚಿರಬಹುದು. ಈ ಎಚ್ಚರಿಕೆ ಕುಳಿತು ಕೆಲಸ ಮಾಡುವವರಿಗೆ ಮಾತ್ರವಲ್ಲ. ಒಂದೇ ಕಡೆ ಕುಳಿತು ಅಥವಾ ಆರಾಮದಾಯಕವಲ್ಲದ ಭಂಗಿಯಲ್ಲಿ ಅರೆ ಮಲಗಿಕೊಂಡು ಟಿವಿ ಶೋಗಳನ್ನು ವೀಕ್ಷಿಸುತ್ತಲೇ ಇರುವವರಿಗೂ ಅನ್ವಯ.

ಹೇಗಾಗುತ್ತದೆ?

ಕಾಲುಗಳನ್ನು ಅಲ್ಲಾಡಿಸದೆ ಕುಳಿತೇ ಇರುವುದರಿಂದ ಕಾಲುಗಳಲ್ಲಿ ರಕ್ತ ಪರಿಚಲನೆ ನಿಧಾನವಾಗುತ್ತದೆ. ಇದು ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ದುರದೃಷ್ಟದ ವಿಷಯ ಎಂದರೆ, ಹೆಚ್ಚಿನವರಿಗೆ ಈ ಬ್ಲಡ್‌ ಕ್ಲಾಟ್‌ಗಳು ಹೃದಯ ಅಥವಾ ಶ್ವಾಸಕೋಶದತ್ತ ಚಲಿಸುವವರೆಗೂ ಗೊತ್ತೇ ಆಗುವುದಿಲ್ಲ.

DVT ಲಕ್ಷಣಗಳೇನು?


ಶ್ವಾಸಕೋಶ ಬ್ಲಾಕ್‌ನ ಲಕ್ಷಣಗಳು

ನೀವೇನು ಮಾಡಬಹುದು?

ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಘೆ, ಮಲೇರಿಯಾ ಹೆಚ್ಚಳ: ಪಾರಾಗಲು ಇಲ್ಲಿದೆ ಉಪಾಯ

Exit mobile version