ಬೆಂಗಳೂರು: ನಾವು ತಿನ್ನುವ ಆಹಾರ, ಅನುಸರಿಸುವ ಜೀವನ ಪದ್ಧತಿ ಇವೆಲ್ಲವೂ ನಮ್ಮ ದೇಹದ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಒಮ್ಮೆ ಹೆಚ್ಚಾದ ದೇಹದ ತೂಕವನ್ನು (Body Weight) ಇಳಿಸುವುದು ಎಂದರೆ ದೊಡ್ಡ ಸಾಹಸವೇ ಸರಿ. ಬೇಗನೇ ತೂಕ ಇಳಿಸುವುದು ಕೂಡ ದೇಹದ ಆರೋಗ್ಯಕ್ಕೆ ಅಷ್ಟೇ ಅಪಾಯಕಾರಿ. ದೇಹದ ತೂಕ ಹೆಚ್ಚಾಗುವುದರಿಂದ ದೇಹದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಬಂಜೆತನದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನೀವು ತೂಕವನ್ನು ಇಳಿಸಿಕೊಳ್ಳುವುದು ಉತ್ತಮ. ಆದರೆ ನೀವು ತೂಕ ಇಳಿಸುವ ಭರದಲ್ಲಿ ಮಾಡುವಂತಹ ಈ ತಪ್ಪುಗಳು ನಿಮ್ಮ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇವುಗಳ ಪಟ್ಟಿ ಇಲ್ಲಿದೆ.
ಊಟವನ್ನು ಬಿಡುವುದು
ಕೆಲವರು ದೇಹದ ತೂಕವನ್ನು ಇಳಿಸಿಕೊಳ್ಳಲು ಊಟವನ್ನು ತ್ಯಜಿಸುತ್ತಾರೆ. ಇದರಿಂದ ತೂಕ ಇಳಿಕೆಯಾಗುವ ಬದಲು ಮತ್ತಷ್ಟು ಹೆಚ್ಚಾಗಬಹುದು. ಅಥವಾ ನಿಮಲ್ಲಿ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮತ್ತು ನಿಮ್ಮ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಮತ್ತು ನಿಮ್ಮ ಹಸಿವು ಹೆಚ್ಚಾಗಿ ನೀವು ಅತಿಯಾಗಿ ತಿನ್ನಬಹುದು. ಹಾಗಾಗಿ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಊಟವನ್ನು ಸೇವಿಸಿ.
ಆಹಾರದಲ್ಲಿ ಫೈಬರ್ ಕೊರತೆ
ಕೆಲವರು ಸಮತೋಲಿತ ಆಹಾರವನ್ನು ಸೇವಿಸುತ್ತಾರೆ. ಆದರೆ ಅವರ ಆಹಾರದಲ್ಲಿ ಫೈಬರ್ ನ ಕೊರತೆ ಕಂಡುಬರುತ್ತದೆ. ಫೈಬರ್ ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ಕ್ಯಾಲೋರಿ ವೇಗವಾಗಿ ಸುಡುತ್ತದೆ. ಇದು ದೇಹದ ತೂಕದಲ್ಲಿ ಏರುಪೇರು ಉಂಟು ಮಾಡಬಹುದು.
ಅತಿಯಾದ ಒತ್ತಡ
ನೀವು ಅತಿಯಾದ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಇದು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಒತ್ತಡವನ್ನು ಕಡಿಮೆ ಮಾಡುವ ಮಾರ್ಗಗಳನ್ನು ಅನುಸರಿಸಿ. ಮನಸ್ಸನ್ನು ಶಾಂತವಾಗಿರಿಸಿ.
ಪ್ಯಾಕ್ ಮಾಡಲಾದ ಆಹಾರ ಸೇವನೆ
ಪ್ಯಾಕ್ ಮಾಡಿದ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳಲ್ಲಿ ಸಕ್ಕರೆ, ಉಪ್ಪು ಮತ್ತು ಸಂರಕ್ಷಕಗಳ ಪ್ರಮಾಣ ಹೆಚ್ಚಾಗಿರುತ್ತದೆ. ಇವು ನಿಮ್ಮ ತೂಕವನ್ನು ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸಿ ಆರೋಗ್ಯವಾಗಿರಿ.
ನೀರು ಕುಡಿಯದಿರುವುದು
ನೀವು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಂಡರೆ ನಿಮ್ಮ ದೇಹ ಆರೋಗ್ಯವಾಗಿರುವುದು ಮಾತ್ರವಲ್ಲ ತೂಕ ನಷ್ಟವಾಗಲು ಸಹಕಾರಿಯಾಗುತ್ತದೆ. ಯಾಕೆಂದರೆ ನಿರ್ಜಲೀಕರಣದಿಂದ ಕಡುಬಯಕೆಗಳು ಕಾಡುತ್ತದೆ. ಇದರಿಂದ ನೀವು ಹೆಚ್ಚು ಆಹಾರವನ್ನು ಸೇವಸಬಹುದು. ಹಾಗಾಗಿ ಸಾಕಷ್ಟು ನೀರನ್ನು ಕುಡಿಯಿರಿ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮತ್ತು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ.
ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ
ನಿದ್ರಾಹೀನತೆ
ನಿದ್ರಾಹೀನತೆ ಸಮಸ್ಯೆ ಕೂಡ ನಿಮ್ಮ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ದೇಹ ನಿದ್ರಿಸಿದಾಗ ಅದಕ್ಕೆ ವಿಶ್ರಾಂತಿ ಸಿಗುತ್ತದೆ. ನಿದ್ರಾ ದಿನಚರಿಯಲ್ಲಿ ಸಮಸ್ಯೆಯಾದರೆ ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಪ್ರತಿದಿನ 7-8 ಗಂಟೆಗಳ ಕಾಲ ಉತ್ತಮ ನಿದ್ರೆಯನ್ನು ಪಡೆಯಿರಿ.