Site icon Vistara News

Winter Fashion | ಚಳಿಗಾಲದ ಗ್ಲಾಮರಸ್ ಫ್ಯಾಷನ್​ಗೆ ಎಂಟ್ರಿ ಕೊಟ್ಟ ಬೂಟ್ಸ್

winter boots fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಳಿಗಾಲದ ಫ್ಯಾಷನ್ನಲ್ಲಿ ಇದೀಗ ನಾನಾ ವೈವಿಧ್ಯಮಯ ಬೂಟ್ಸ್ ಎಂಟ್ರಿ ನೀಡಿವೆ. ಸೆಲೆಬ್ರಿಟಿ ಲುಕ್ ನೀಡುವ ಈ ಬೂಟ್ಸ್ ಆಯಾ ವಿಂಟರ್ ಫ್ಯಾಷನ್ ಉಡುಪಿಗೆ ತಕ್ಕಂತೆ ಧರಿಸುವುದು ಈ ಸೀಸನ್​ನ ಫ್ಯಾಷನ್ ಸ್ಟೇಟ್​ಮೆಂಟ್​ಗಳಲ್ಲಿ ಒಂದಾಗಿದೆ.

ಆಕರ್ಷಕ ಉಡುಪಿಗೆ ಬೂಟ್ಸ್ ಧರಿಸಿದರೆ ಲುಕ್ಕೇ ಬೇರೇ! ಇನ್ನು ವೆಲ್ವೆಟ್, ಮ್ಯಾಟ್ ಫಿನಿಶಿಂಗ್, ಲೆದರ್, ಸಾಫ್ಟ್ ಮೆಟೀರಿಯಲ್ನ ಬೂಟ್ಸ್ ಇಂದಿನ ಸೆಲೆಬ್ರಿಟಿ ಫ್ಯಾಷನ್ ಆಕ್ಸೆಸರೀಸ್​ನಲ್ಲಿ ಟಾಪ್ ಸ್ಥಾನ ಗಳಿಸಿವೆ. ಪ್ಯಾಂಟ್​ಗೆ ಸೂಟ್ ಆಗುವ ನಿ ಲೆಂತ್ ಬೂಟ್ಸ್, ಸ್ಕರ್ಟ್ಸ್​ಗೆ ಹೊಂದುವ ವೆಲ್ಟೆಟ್ ಇಲ್ಲವೇ ಶಾರ್ಟ್ ಲೆದರ್ ಬೂಟ್ಸ್, ಟೀನೇಜ್ ಹುಡುಗಿಯರಿಗೆ ಆ್ಯಂಕಲ್ ಲೆಂತ್ ಬೂಟ್ಸ್ ಹೀಗೆ ನಾನಾ ವೆರೈಟಿಗಳ ಫ್ಯಾಷನಬಲ್ ಬೂಟ್ಸ್ ಈ ಜನರೇಷನ್​ನ ಹುಡುಗಿಯರ ಮನಗೆದ್ದಿವೆ “ ಎನ್ನುತ್ತಾರೆ ಸ್ಟೈಲಿಸ್ಟ್ ದಕ್ಷಾ. ಇನ್ನು ಡಾರ್ಕ್ ವರ್ಣದ ಬೂಟ್ಸ್ ಎಲ್ಲಾ ಬಗೆಯ ಉಡುಪುಗಳಿಗೂ ಮ್ಯಾಚ್ ಆಗುತ್ತದೆ. ಈ ಬಾರಿ ಡಾರ್ಕ್ ಬ್ಲಾಕ್, ಲೆದರ್ ಬ್ರೌನ್, ಬಿಸ್ಕೆಟ್ ಕಲರ್, ಡಾರ್ಕ್ ಪರ್ಪಲ್, ವೈನ್ ರೆಡ್ ಹೀಗೆ ಕಲರ್ ಬೂಟ್ಸ್ ಚಾಲ್ತಿಯಲ್ಲಿವೆ ಎನ್ನುತ್ತಾರೆ.

ತಾರೆಯರ ಸೆಳೆದ ಬೂಟ್ಸ್ ಫ್ಯಾಷನ್

ಟಾಮ್ ಬಾಯ್ ಇಮೇಜ್, ಬಬ್ಲಿ ಲುಕ್ ಹಾಗೂ ಹಾಟ್ ಲುಕ್​ಗಾಗಿ ಬಾಲಿವುಡ್​ನ ತಾರೆಯರು ಅತಿ ಹೆಚ್ಚಾಗಿ ಇತರೇ ಫುಟ್ವೇರ್​ಗಳಿಗಿಂತ ಬೂಟ್ಸ್ ಪ್ರಿಫರ್ ಮಾಡಲಾರಂಭಿಸಿದ್ದಾರೆ. ಶಾರ್ಟ್ ಫ್ರಾಕ್, ಮಿಡಿ, ಮಿನಿಗಳೊಂದಿಗೆ ಇವನ್ನು ಪ್ರಯೋಗಿಸಲಾರಂಭಿಸಿದ್ದಾರೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ಜಿಯಾ.

ನಾನಾ ಬಗೆಯ ಬೂಟ್ಸ್

ಹುಡುಗಿಯರು ವೈಲ್ಡ್ ಲುಕ್​ಗಾಗಿ ದುಬಾರಿ ಝಿಪ್ ಬೂಟ್ಸ್ ಆಯ್ಕೆ ಮಾಡುತ್ತಾರೆ. ಶಾರ್ಟ್ ಡ್ರೆಸ್ ಹಾಗೂ ಪ್ಯಾಂಟ್​ಗಳಿಗೆ ಇವನ್ನು ಹೆಚ್ಚಾಗಿ ಧರಿಸುತ್ತಾರೆ. ಇನ್ನು ವೆಲ್ವೆಟ್ ಬೂಟ್ಸ್ ಎಲಿಗೆಂಟ್ ಲುಕ್​ಗಾಗಿ ಧರಿಸುವುದು ಸಾಮಾನ್ಯವಾಗಿದೆ. ಇವುಗಳಲ್ಲಿ ಸಾಕಷ್ಟು ವೆರೈಟಿ ಲಭ್ಯ. ಉಡುಪಿಗೆ ಮ್ಯಾಚ್ ಆಗುವಂತಹ ಡಿಸೈನ್​ಗಳು ಲಭ್ಯ. ಫಂಕಿ ಫ್ಯಾಷನ್​ಗೆ ಇವು ಸಾಥ್ ನೀಡುತ್ತವೆ. ಆದರೆ ಅತಿ ಹೆಚ್ಚು ಟ್ರೆಂಡಿಯಾಗಿರುವ ವೆಲ್ವಟ್ ಬೂಟ್ಸ್ ಎಂದರೆ ಲೆದರ್ ಕಲರ್ ಹಾಗೂ ಬ್ರೌನಿಶ್ ಹಾಗೂ ಬ್ಲಾಕ್ ವರ್ಣದ ಬೂಟ್ಸ್ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.

ಅವರ ಪ್ರಕಾರ, ವೆಲ್ವೆಟ್ ಬೂಟ್ಸ್ ಮಕ್ಕಳಿಗೂ ಚೆನ್ನಾಗಿ ಕಾಣುತ್ತದೆ. ಇನ್ನು ಕ್ಲಾಸಿಕ್ ಲುಕ್​ಗಾಗಿ ಲೆದರ್ ಬೂಟ್ಸ್ ಆರಿಸಿಕೊಳ್ಳುವವರೇ ಹೆಚ್ಚು. ಇದು ವಿಂಟೆಂಜ್ ಲುಕ್ ನೀಡುತ್ತಲ್ಲದೇ ನೋಡಲು ಮನಮೋಹಕವಾಗಿ ಕಾಣುತ್ತದೆ. ಇದು ಆಲ್ ಟೈಮ್ ಟ್ರೆಂಡಿ ಫುಟ್ವೇರ್ ಎಂದರೂ ತಪ್ಪಲ್ಲ. ಆ್ಯಂಕಲ್ ಲೆಂತ್ ಹಾಗೂ ನೀ ಲೆಂತ್​ನಲ್ಲಿ ಇವು ದೊರಕುತ್ತವೆ. ಬೈಕ್ ಚಾಲನೆ ಮಾಡುವ ಹುಡುಗಿಯರಿಗೆ ಇವು ಬೆಸ್ಟ್ ಆಕ್ಸೆಸರೀಸ್. ಶಾರ್ಟ್ ಫ್ರಾಕ್ ಹಾಗೂ ಮಿನೀಸ್​ಗೆ ಬೆಸ್ಟ್ ಕಾಂಬಿನೇಷನ್. ಇನ್ನು ಹುಡುಗಿಯರು ಕಾಲಿನ ಆಕಾರಕ್ಕೆ ತಕ್ಕಂತೆ, ಬಾಡಿ ಮಾಸ್ ಇಂಡೆಕ್ಸ್​ಗೆ ಹೊಂದುವಂತಹ ಲೆಂತ್​ನದ್ದು ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ. ಉದ್ದ ಕಾಲಿರುವವರು ಲಾಂಗ್ ಲೆಂತ್​ನದ್ದು, ಗಿಡ್ಡ ಕಾಲಿನವರು ಆ್ಯಂಕಲ್ ಲೆಂತ್​ನದ್ದು ಆಯ್ದುಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ.

ಬೂಟ್ಸ್ ಚಾಯ್ಸ್ ಹೀಗಿರಲಿ

ಬೂಟ್ಸ್ ನಿಮ್ಮ ಉಡುಪಿಗೆ ಮ್ಯಾಚ್ ಆಗುವಂತಿರಬೇಕು.

ಡಾರ್ಕ್​ ವರ್ಣಗಳು ಟ್ರೆಂಡ್​ಗೆ ತಕ್ಕಂತಿರಬೇಕು.

ಲೇಸ್ ಇಲ್ಲದ್ದಾದ್ದಲ್ಲಿಕೊಂಚ ಫಿಟ್ ಆಗಿರಬೇಕು.

ಲೇಸ್​ ಇರುವುದಕ್ಕೆ ಸಾಕ್ಸ್ ಧರಿಸಬಹುದು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ | International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು

Exit mobile version