Site icon Vistara News

BWP Fashion Run Way: ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಬೆಂಗಳೂರು ವುಮೆನ್‌ ಪವರ್‌ ಫ್ಯಾಷನ್‌ ರನ್‌ವೇ

BWP Fashion Run Way

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅಮ್ಮ-ಮಗಳ ಫ್ಯಾಷನ್‌ (BWP Fashion Run Way) ರನ್‌ವೇ ಕೆಟಗರಿಯಲ್ಲಿ ನಾನಾ ಬಗೆಯಲ್ಲಿ ಸ್ಟೈಲಿಂಗ್‌ ಮಾಡಿದ ಸಾಮಾನ್ಯ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಾ ನಡೆಯುವಾಗ ಎಂತಹವರಿಗೂ ಖುಷಿಯಾಗುತ್ತಿತ್ತು. ನಂತರ ನಡೆದ ಚಿಣ್ಣರ ರ‍್ಯಾಂಪ್‌ ವಾಕ್‌ನಲ್ಲಿ ಅವರ ಮುದ್ದು ಮುದ್ದಾದ ಮಕ್ಕಳ ಕ್ಯಾಟ್‌ ವಾಕ್‌ ನೋಡುವುದೇ ಕ್ಯೂಟ್‌ ಎಂದೆನಿಸುತ್ತಿತ್ತು. ಅದರ ನಂತರ ಟೀನೇಜ್‌ ಮಕ್ಕಳ ಶೋ ಅಂತೂ ಆ ಮಕ್ಕಳ ಉತ್ಸಾಹವನ್ನು ಎದ್ದು ತೋರಿಸುತ್ತಿತ್ತು. ಕೊನೆಯ ಕೆಟಗರಿಯಲ್ಲಿ ನಡೆದ ಎಲ್ಲಾ ವಯಸ್ಸಿನ ಸ್ತ್ರೀಯರ ಫ್ಯಾಷನ್‌ ವಾಕ್‌ ಮಹಿಳೆಯರ ಕುಂದದ ಉತ್ಸಾಹವನ್ನು ತೋರ್ಪಡಿಸುತ್ತಿತ್ತು.

ಅಂದಹಾಗೆ, ಈ ಚಿತ್ರಣ ಕಂಡು ಬಂದದ್ದು, ಒಂದು ಲಕ್ಷಕ್ಕೂ ಅತಿ ಹೆಚ್ಚು ಮಹಿಳಾ ಸದಸ್ಯರನ್ನು ಹೊಂದಿರುವ ಆನ್‌ಲೈನ್‌ನಲ್ಲಿ ಸಕ್ರಿಯವಾಗಿರುವ ಬೆಂಗಳೂರು ವುಮೆನ್‌ ಪವರ್‌ ಆಶ್ರಯದಲ್ಲಿ ನಡೆದ ಫ್ಯಾಷನ್‌ ರನ್‌ವೇಯಲ್ಲಿ. ಇದು ಎಲ್ಲಾ ವಯೋಮಾನದ ಮಹಿಳೆಯರ ಉಲ್ಲಾಸಕ್ಕೆ ಪ್ರಮುಖ ಕಾರಣವಾಗಿತ್ತು.

ನಾನಾ ಕೆಟಗರಿಯಲ್ಲಿ ಫ್ಯಾಷನ್‌ ರನ್‌ ವೇ

ಕೇವಲ ಮಹಿಳೆಯರು ಮಾತ್ರವಲ್ಲ, ಅವರ ಮಕ್ಕಳು, ಟೀನೇಜ್‌ ಹುಡುಗ-ಹುಡುಗಿಯರು, ಅಮ್ಮಂದಿರು ಹಾಗೂ ಮಕ್ಕಳು ಹೀಗೆ ನಾನಾ ಕೆಟಗರಿಯಲ್ಲಿ ನಡೆದ ಫ್ಯಾಷನ್‌ ರನ್‌ವೇ ಇಡೀ ರ್ಯಾಂಪ್‌ನ ಕಳೆ ಹೆಚ್ಚಿಸಿದಲ್ಲದೇ, ಇಡೀ ದಿನವನ್ನು ಕಂಪ್ಲೀಟ್‌ ಫ್ಯಾಷನ್‌ಮಯವಾಗಿಸಿತ್ತು.

ಮಹಿಳೆಯರ ಮಾರುಕಟ್ಟೆ

ಈ ರನ್‌ವೇ ಫ್ಯಾಷನ್‌ನೊಂದಿಗೆ ಸ್ವ ಉದ್ಯೋಗ ಮಾಡುತ್ತಿರುವ ಮಹಿಳೆಯರಿಗೆ ತಾವು ಸಿದ್ಧಪಡಿಸಿದ ಆಕ್ಸೆಸರೀಸ್‌ ಹಾಗೂ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಮಂದಿ ಈ ಅವಕಾಶವನ್ನು ಸದಾವಕಾಶ ಪಡಿಸಿಕೊಂಡರು. ನಾನಾ ಕಡೆಯಿಂದ ಈ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಿದರು.

ಸಂಸ್ಥೆಯ ಸಂಸ್ಥಾಪಕರಾದ ಸ್ವಾತಿ ದೇಸಾಯಿ ನೇತೃತ್ವದಲ್ಲಿ ಇಡೀ ದಿನ ನಡೆದ ಈ ಫ್ಯಾಷನ್‌ ರನ್‌ವೇ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕರಾದ ರಾಮಮೂರ್ತಿ, ಫಿಟ್ನೆಸ್‌ ದಿವಾ ವನಿತಾ ಅಶೋಕ್‌, ನಿರ್ಮಾಪಕಿ, ಮಾಡೆಲ್‌ ಸುಚಿತ್ರಾ, ಟಿಯಾ, ನಟಿ ಅನುಷಾ ರೈ, ಚಂದನಾ, ಸೆಲೆಬ್ರೆಟಿ ಸ್ಟೈಲಿಸ್ಟ್‌ ಚಂದನ್‌ ಗೌಡ ಸೇರಿದಂತೆ ನಾನಾ ಫ್ಯಾಷನ್‌ ಸೆಲೆಬ್ರೆಟಿಗಳು, ಸಿನಿಮಾ ಸೆಲೆಬ್ರೆಟಿಗಳು ಹಾಗೂ ರಾಜಕೀಯ ಧುರೀಣರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Pageant News: ಮಿಸ್ಟರ್‌ ಮತ್ತು ಮಿಸ್‌ ಐಕಾನ್‌ ಸೌಂದರ್ಯ ಸ್ಪರ್ಧೆಯಲ್ಲಿ ಕಾಲೇಜು ಹುಡುಗ-ಹುಡುಗಿಯರ ಸಂಭ್ರಮ

Exit mobile version