Site icon Vistara News

Cat Eye Makeup: ಸಮ್ಮರ್‌ ಬೋಲ್ಡ್ ಲುಕ್‌ಗೆ ಸಾಥ್‌ ನೀಡುವ ಕ್ಯಾಟ್‌ ಐ ಮೇಕಪ್‌

Cat Eye Makeup

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಮ್ಮರ್‌ ಫ್ಯಾಷನ್‌ಗೆ ಸಾಥ್‌ ನೀಡುವ ಕ್ಯಾಟ್‌ ಐ ಲೈನರ್‌ ಮೇಕಪ್‌ (Cat Eye Makeup) ಟ್ರೆಂಡ್‌ ಇದೀಗ ತಾರೆಯರ ಫೇವರಿಟ್​ ಲಿಸ್ಟ್‌ಗೆ ಮತ್ತೊಮ್ಮೆ ಸೇರಿದ್ದು, ಮೇಕಪ್‌ನ ಬೋಲ್ಡ್‌ ಮತ್ತು ಬ್ಯೂಟಿಫುಲ್‌ ಲುಕ್‌ನಲ್ಲಿ ಸೇರಿದೆ. ನೋಡಲು ಹಾಟ್‌ ಲುಕ್‌ ನೀಡುವ ಈ ಐ ಮೇಕಪ್‌ ಈ ಸೀಸನ್‌ನಲ್ಲಿ ಪ್ರಚಲಿತದಲ್ಲಿದೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ಶಮಿತಾ ಶೆಟ್ಟಿಯ ಇತ್ತೀಚಿನ ಕ್ಯಾಟ್‌ ಐ ಮೇಕಪ್‌ ಫ್ಯಾಷನ್‌ ಪ್ರಿಯರ ಮನ ಗೆದ್ದಿದೆ.

ಏನಿದು ಕ್ಯಾಟ್‌ ಐ ಲೈನರ್ ಲುಕ್‌ ?

ಕಣ್ಣುಗಳ ರೆಪ್ಪೆಯ ಮೇಲೆ ಎಳೆಯುವ ಐ ಲೈನರ್‌ ಇದು. ಕಣ್ಣಿನ ಒಂದು ತುದಿಯಿಂದ ರೆಪ್ಪೆಯ ಕೊನೆ ದಾಟಿದ ನಂತರವೂ ಎಳೆಯಲಾಗುತ್ತದೆ. ಅದೇ ರೀತಿ ಕೆಳಗಿನ ಭಾಗದಲ್ಲೂ ಐ ಲೈನರ್‌ ಎಳೆದು ಮೇಲಿನ ಲೈನ್‌ ಒಟ್ಟಿಗೆ ಸೇರಿಸಲಾಗುತ್ತದೆ. ಜಾಯಿನ್‌ ಆದ ಈ ಐ ಲೈನರ್‌ ಡಿಫರೆಂಟ್‌ ಲುಕ್‌ ನೀಡುವುದರೊಂದಿಗೆ ಬೋಲ್ಡ್‌ ಲುಕ್‌ ನೀಡುತ್ತದೆ. ಹಾಗಾದರೇ ವಿಂಗ್ಡ್‌ ಐ ಲೈನರ್‌ ಕೂಡ ಹಾಗೆಯೇ ಕಾಣುತ್ತದಲ್ಲ! ಎಂದು ನೀವೂ ಅಂದುಕೊಳ್ಳಬಹುದು. ವಿಂಗ್ಡ್‌ ಐ ಲೈನರ್‌ ಕೇವಲ ಕಣ್ಣಿನ ರೆಪ್ಪೆಯ ತುದಿಯಿಂದ ಮೇಲ್ಭಾಗಕ್ಕೆ ಮಾತ್ರ ಹಾರುವ ರೆಕ್ಕೆಯಂತೆ ಎಳೆಯಲಾಗುತ್ತದೆ. ಆದರೆ, ಕ್ಯಾಟ್‌ ಐ ಲೈನರ್‌ ರೀತಿಯಲ್ಲಿ ಕೆಳಗಿನ ಲೈನ್‌ ಎಳೆಯಲಾಗುವುದಿಲ್ಲ. ಇದೇ ವ್ಯತ್ಯಾಸ ಎನ್ನುತ್ತಾರೆ ಮೇಕಪ್‌ ಸ್ಪೆಷಲಿಸ್ಟ್‌ ರೀಟಾ. ಇನ್ನು, ಬೆಕ್ಕಿನ ಕಂಗಳಂತೆ ಬಿಂಬಿಸುವ ಈ ಕ್ಯಾಟ್‌ ಐ ಮೇಕಪ್‌ ಮಾಡುವಾಗ ಆದಷ್ಟೂ ಬ್ರಾಂಡೆಡ್‌ ಐ ಮೇಕಪ್‌ ಕಿಟ್‌ ಬಳಸಿ ಎನ್ನುತ್ತಾರೆ.

ಆಕರ್ಷಕ ಕ್ಯಾಟ್‌ ಐ ಮೇಕಪ್‌ಗಾಗಿ ಹೀಗೆ ಮಾಡಿ

ಕ್ಯಾಟ್‌ ಐ ಮೇಕಪ್‌ ಮಾಡುವ ಮೊದಲು ಮುಖದ ಮೇಕಪ್‌ ಮುಗಿಸಿಕೊಳ್ಳಬೇಕು. ನಂತರ ಐ ಮೇಕಪ್‌ಗೆ ಅಗತ್ಯವಿರುವ ಶೇಡ್‌ಗಳನ್ನು ಸೆಲೆಕ್ಟ್‌ ಮಾಡಬೇಕು. ಬ್ಲಾಕ್‌ ಐ ಲೈನರ್‌ ಎವರ್‌ಗ್ರೀನ್‌ ಕಲರ್‌, ಇತರೇ ಕಲರ್‌ಗಳನ್ನು ಬಳಸಬಹುದು ಆದರೆ, ಅದು ಫಂಕಿ ಲುಕ್‌ ನೀಡುತ್ತದೆ. ಹಾಗಾಗಿ ನೀವು ಧರಿಸುವ ಔಟ್‌ಫಿಟ್‌ಗೆ ತಕ್ಕಂತೆ ಕ್ಯಾಟ್‌ ಐ ಲೈನರ್‌ ಮೇಕಪ್‌ ಪ್ಲಾನ್‌ ಮಾಡಿ ಎನ್ನುತ್ತಾರೆ ಎಕ್ಸ್‌ಪಟ್ರ್ಸ್.

ಸಿಂಪಲ್‌ ಕ್ಯಾಟ್ ಐ ಲೈನರ್ ರೂಲ್ಸ್

ಮೊದಲಿಗೆ ಕಣ್ಣಿನ ರೆಪ್ಪೆಯ ಮೇಲೆ ನ್ಯೂಟ್ರಲ್‌ ಶೇಡ್‌ ಲೇಪಿಸಿ. ವಿಂಗ್‌ ಐ ಲೈನರ್‌ ಎಳೆಯುವಂತೆ ಮೇಲೆ ಲೈನ್‌ ಎಳೆಯಿರಿ, ನಂತರ ಕೆಳಗೂ ಅದನ್ನು ಎಳೆದು ಸೇರಿಸಿ. ದಪ್ಪನಾಗಿ ಐ ಲೈನರ್‌ ಹಚ್ಚುವುದರಿಂದ ಕಂಗಳು ಎದ್ದು ಕಾಣುವುದು ಎಂದು ಮೇಕಪ್‌ ಎಕ್ಸ್‌ಪರ್ಟ್ ಹೇಳುತ್ತಾರೆ.

ಕ್ಯಾಟ್ ಐ ಲೈನರ್‌ ಪ್ರಿಯರು ಪಾಲಿಸಬೇಕಾದ್ದು

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Fashion: ವೈಟ್‌ ಕಟೌಟ್‌ ಬಾಡಿಕಾನ್‌ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ ರಚನಾ ಇಂದರ್‌ ಗ್ಲಾಮರಸ್‌ ಲುಕ್‌

Exit mobile version