ಸಂದರ್ಶನ: ಶೀಲಾ ಸಿ. ಶೆಟ್ಟಿ
ಪ್ರತಿಯೊಬ್ಬರು ತಮ್ಮ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಬಗ್ಗೆ ತಿಳಿದುಕೊಂಡಿರಬೇಕು. ಜತೆಗೆ ಯಾವುದೇ ಉಡುಪು ಧರಿಸುವ ಮುನ್ನ ತಮ್ಮ ದೇಹ ಯಾವ ಬಗೆಯ ಆಕಾರ ಹೊಂದಿದೆ ಎಂಬುದನ್ನು ಅರಿತು, ತಮ್ಮ ವ್ಯಕ್ತಿತ್ವಕ್ಕೂ ಸೂಟ್ ಆಗುವ ಡ್ರೆಸ್ಸಿಂಗ್ ಸೆನ್ಸ್ ಅಳವಡಿಸಿಕೊಳ್ಳಬೇಕು. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಉಡುಪುಗಳನ್ನು ಧರಿಸಿದಾಗ ಆಕರ್ಷಕವಾಗಿ ಕಾಣಬಹುದು ಎನ್ನುತ್ತಾರೆ ಇಮೇಜ್ ಕನ್ಸಲ್ಟೆಂಟ್ ಹಾಗೂ ಮಿಸೆಸ್ ಇಂಡಿಯಾ ಪರ್ಸನಾಲಿಟಿ ಕ್ವೀನ್(೨೦೧೯) ಮಧುಮತಿ ತಿಪ್ಪಿಮಠ್. ಈ ಬಾರಿಯ ವಿಸ್ತಾರದ ಸೆಲೆಬ್ರಿಟಿ ಫ್ಯಾಷನ್ ಕಾರ್ನರ್‌ನಲ್ಲಿ ಬಾಡಿಶೇಪ್ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ವಿಸ್ತಾರ : ಬಾಡಿ ಶೇಪ್ ಬಗ್ಗೆ ಮಹಿಳೆಯರು ತಿಳಿದುಕೊಳ್ಳುವ ಅಗತ್ಯವಿದೆಯಾ? ಅದು ಯಾಕೆ?
ಮಧುಮತಿ : ಪ್ರತಿಯೊಬ್ಬರ ದೇಹದ ಆಕಾರ ಒಂದೊಂದು ರೀತಿಯಲ್ಲಿ ಇರುತ್ತದೆ. ಪ್ರತಿ ಮಹಿಳೆಯು ತನ್ನ ದೇಹದ ಆಕಾರ ಯಾವುದು ಎಂದು ತಿಳಿದುಕೊಂಡಲ್ಲಿ ಸೂಕ್ತವಾದ ಉಡುಪುಗಳ ಆಯ್ಕೆ ಮಾಡಲು ಸುಲಭವಾಗುವುದು.
ವಿಸ್ತಾರ : ಓದುಗರಿಗೆ ಬಾಡಿ ಶೇಪ್ ಬಗ್ಗೆ ಒಂದಿಷ್ಟು ವಿವರ ನೀಡುವಿರಾ?
ಮಧುಮತಿ : ಖಂಡಿತಾ. ಆಪಲ್ ಶೇಪ್, ಪಿಯರ್ಸ್ ಶೇಪ್, ಸ್ಲಿಮ್, ರೌಂಡ್ ಶೇಪ್, ಅಥ್ಲೆಟಿಕ್ ಬಾಡಿ ಶೇಪ್‌ಗಳನ್ನು ಪ್ರಮುಖವಾಗಿ ಇಲ್ಲಿ ಹೆಸರಿಸಬಹುದು.
ವಿಸ್ತಾರ : ವರ್ಕೌಟ್‌ನಿಂದ ಬಾಡಿ ಶೇಪ್‌ಗೆ ಆಕಾರ ನೀಡಬಹುದಾ?
ಮಧುಮತಿ : ಖಂಡಿತಾ. ಪ್ರತಿಯೊಬ್ಬರಿಗೂ ಅವರದ್ದೇ ಆದ ಯೂನಿಕ್ ದೇಹದ ಆಕಾರವಿರುತ್ತದೆ. ಹಾಗಾಗಿ ಬಹಳಷ್ಟು ಬಾರಿ ಒಬ್ಬರು ಧರಿಸುವ ಉಡುಪು ಮತ್ತೊಬ್ಬರಿಗೆ ಚೆನ್ನಾಗಿ ಕಾಣುವುದಿಲ್ಲ. ನಮ್ಮ ಬಾಡಿಶೇಪ್ ಯಾವುದು ಎಂಬುದನ್ನು ತಿಳಿದಲ್ಲಿ ಜಿಮ್ ಎಕ್ಸ್‌ಪರ್ಟ್‌ಗಳ ಸಲಹೆ ಮೇರೆಗೆ ಅಗತ್ಯವಾದ ವರ್ಕ್‌ಟ್ ಮಾಡಿ ಪರ್ಫೆಕ್ಟ್ ಶೇಪ್ ಪಡೆಯಬಹುದು.
ವಿಸ್ತಾರ : ನಾನಾ ಬಾಡಿ ಶೇಪ್‌ಗಳ ಬಗ್ಗೆ ಸಿಂಪಲ್ಲಾಗಿ ವಿವರ ನೀಡುತ್ತೀರಾ?
ಮಧುಮತಿ : ಆಪಲ್ ಶೇಪ್ ಹೊಂದಿರುವವರಿಗೆ ದೇಹದ ಮೇಲ್ಭಾಗ ಹಾಗೂ ಎದೆಯ ಭಾಗವು ಅಗಲವಾಗಿದ್ದು, ಸೊಂಟದ ಭಾಗವು ಚಿಕ್ಕದಾಗಿರುತ್ತದೆ. ಕೆಲವರಿಗೆ ಭುಜದ ಭಾಗದಿಂದ ದೇಹದ ಆಕಾರವು ಅಡ್ಡಾದಿಡ್ಡಿಯಾಗಿ ಕಾಣುತ್ತದೆ. ಇಂತಹವರು ಹೈ ವೀನೆಕ್ ಹಾಗು ಕಾಲರ್ ಇರುವಂತಹ ನೆಕ್‌ಲೈನ್ ಡ್ರೆಸ್‌ಗಳ ಆಯ್ಕೆ ಮಾಡಿಕೊಳ್ಳಬಹುದು. ಫಿಟ್ಟೆಡ್ ಜೀನ್ಸ್ ಸ್ಲಿಮ್ ಲುಕ್ ನೀಡಬಹುದು. ಭುಜ ಹಾಗೂ ಮುಂಭಾಗಗಳ ವರ್ಕೌಟ್‌ಗೆ ಆದ್ಯತೆ ನೀಡುವುದರಿಂದ ಉತ್ತಮ ಶೇಪ್ ಪಡೆಯಬಹುದು.
ಪಿಯರ್ ಶೇಪ್: ದೇಹದ ಮೇಲ್ಬಾಗವು ಚಿಕ್ಕದಾಗಿದ್ದು, ಹಿಪ್, ತೊಡೆ ಭಾಗವು ಹೆಚ್ಚು ದಪ್ಪವಾಗಿ ಕಾಣುವುದೇ ಪಿಯರ್ ಶೇಪ್. ಆ ಎರಡು ಭಾಗಗಳಲ್ಲಿ ಹೆಚ್ಚಿನ ಕೊಬ್ಬಿನಾಂಶವು ಶೇಖರಣೆಯಾಗಿ ದೇಹದ ಅಂದಗೆಡಬಹುದು. ಅಂತಹವರು ಆದಷ್ಟು ಡಾರ್ಕ್ ಕಲರ್ ಬಾಟಮ್ ಹಾಗೂ ಲೈಟ್ ಕಲರ್ ಟಾಪ್ ಧರಿಸುವುದು ಸೂಕ್ತ. ಸ್ಟ್ರೈಫ್ಸ್ ಡಿಸೈನ್, ಮೋನೋಕ್ರೋಮ್ ಡ್ರೆಸ್ ಆಯ್ಕೆ ಉತ್ತಮ. ಹಿಪ್ ಹಾಗು ತೊಡೆಯ ಭಾಗದ ವರ್ಕೌಟ್ ವ್ಯಾಯಾಮ ಸೂಕ್ತ.
ರೌಂಡ್ ಬಾಡಿ ಶೇಪ್ : ಈ ಬಾಡಿ ಶೇಪ್ ಉಳ್ಳವರ ದೇಹ ದುಂಡು ದುಂಡಾಗಿರುತ್ತದೆ. ಸ್ಲಿಮ್ ಫಿಟ್ ಫ್ಯಾಷನೆಬಲ್ ಟ್ರೆಂಡಿ ಡ್ರೆಸ್ ಧರಿಸಲು ಸಾಧ್ಯವಾಗದು. ಇಂತವರು ಸ್ಕರ್ಟ್, ಮ್ಯಾಕ್ಸಿ, ಲೂಸ್ ಫಿಟ್ಟಿಂಗ್ ಫ್ರಾಕ್ಸ್, ಗೌನ್, ನೀ ಲೆಂಥ್ ಕುರ್ತಾ ಧರಿಸುವುದು ಉತ್ತಮ. ಸೂಕ್ತ ವರ್ಕೌಟ್‌ನಿಂದ ಆಕಾರ ಪಡೆಯಬಹುದು.
ಅವರ್ ಗ್ಲಾಸ್ ಶೇಪ್: ಅವರ್ ಗ್ಲಾಸ್ ಶೇಪ್ ಹೊಂದಿರುವವರು ಎಲ್ಲಾ ಬಗೆಯ ಉಡುಪುಗಳಲ್ಲೂ ಆಕರ್ಷಕವಾಗಿ ಕಾಣುತ್ತಾರೆ. ಆಗಾಗ್ಗೆ ದೇಹದ ತೂಕವನ್ನು ಗಮನಿಸಿ ಬಾಡಿ ಶೇಪ್ ಹಾಳಾಗದಂತೆ ವರ್ಕೌಟ್ ಮಾಡಿ ಮೆಂಟೇನ್ ಮಾಡಿದರೆ ಸಾಕು.
ಅಥ್ಲೆಟಿಕ್ ಬಾಡಿ ಶೇಪ್ : ಎತ್ತರವಾದ ನೀಳ ಶರೀರವನ್ನು ಹೊಂದಿರುವ ಈ ಬಾಡಿ ಶೇಪ್‌ನವರು ಬಹುತೇಕ ಉಡುಪುಗಳಲ್ಲಿ ಸುಂದರವಾಗಿ ಕಾಣುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fusion Fashion | ಫಾತಿಮಾ ಸನಾ ಶೇಕ್ ಬ್ಯಾಕ್‌ಲೆಸ್ ಟಾಸೆಲ್ಸ್ ಕ್ರಾಪ್ ಬ್ಲೌಸ್