ಸಂದರ್ಶನ : ಶೀಲಾ ಸಿ. ಶೆಟ್ಟಿ
ಉದ್ಯಾನನಗರಿಯ ಫ್ಯಾಷನ್ ಲೋಕದಲ್ಲಿ ಸಂತೋಷ್ ರೆಡ್ಡಿ ಅವರ ಹೆಸರು ತೀರಾ ಕಾಮನ್. ನೋಡಲು ಸೂಪರ್ ಮಾಡೆಲ್ ಆದರೂ ಕೊಂಚವೂ ಹಮ್ಮು-ಬಿಮ್ಮು ಇಲ್ಲದ ಸಿಂಪಲ್ ವ್ಯಕ್ತಿತ್ವ ಹೊಂದಿದ ವ್ಯಕ್ತಿ. ತನ್ನದೇ ಆದ ಡಿಫರೆಂಟ್ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಹೊಂದಿರುವ ಇವರು ನಟರೂ ಹೌದು. ಇಂಟರ್‌ನ್ಯಾಷನಲ್ ಫ್ಯಾಷನ್ ಐಕಾನ್, ಕೆಂಪೇಗೌಡ ಪ್ರಶಸ್ತಿ, ಮ್ಯಾನ್ ಆಫ್ ದಿ ಯಿಯರ್, ಫ್ಯಾಷನ್ ಗುರು ಆಫ್ ದಿ ಯಿಯರ್ ಸೇರಿದಂತೆ ನಾನಾ ಅವಾರ್ಡ್‌ಗಳನ್ನು ಪಡೆದಿರುವ ಸ್ಟೈಲಿಶ್ ಮಾಡೆಲ್. ಈ ಬಾರಿಯ ವಿಸ್ತಾರದ ಸೆಲೆಬ್ರಿಟಿ ಫ್ಯಾಷನ್ ಕಾರ್ನರ್‌ನಲ್ಲಿ ತಮ್ಮ ಫ್ಯಾಷನ್ ಪ್ರಪಂಚ ಹಾಗೂ ಇನ್ನಿತರೇ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ವಿಸ್ತಾರ : ಉದ್ಯಾನನಗರಿಯ ಫ್ಯಾಷನ್ ಲೋಕದ ಐಕಾನ್ ಆಗಿರುವ ನಿಮ್ಮ ಫ್ಯಾಷನ್ ಬಗ್ಗೆ ಹೇಳಿ ?
ಸಂತೋಷ್ ರೆಡ್ಡಿ : ನನ್ನ ಪ್ರಕಾರ, ಫ್ಯಾಷನ್ ಎಂದರೇ, ಟ್ರೆಂಡ್ ಹಾಗೂ ಫ್ಯಾಷೆನಬಲ್ ಆಗಿರುವ ಉಡುಪುಗಳನ್ನು ಆಕರ್ಷಕವಾಗಿ ಧರಿಸುವುದು. ಇನ್ನು ನನ್ನ ಭಾಷೆಯಲ್ಲಿ ಸ್ಟೈಲ್ ಸ್ಟೇಟ್‌ಮೆಂಟನ್ನು ಹೇಳುವುದಾದಲ್ಲಿ ಫ್ಯಾಷನ್ ಎಂಬುದು ಬಹಿರಂಗ, ಸ್ಟೈಲ್ ಎಂಬುದು ಅಂತರಂಗಕ್ಕೆ ಸಂಬಂಧ ಪಟ್ಟದ್ದು ಎನ್ನಬಹುದು.
ವಿಸ್ತಾರ : ಫ್ಯಾಷನ್‌ಲೋಕ ಸಾಗರದಂತೆ ಆಗಿದೆಯಲ್ಲ! ಈ ಬಗ್ಗೆ ಏನು ಹೇಳುವೀರಿ?
ಸಂತೋಷ್ ರೆಡ್ಡಿ : ಹೌದು. ಮೊದಲೆಲ್ಲಾ ಫ್ಯಾಷನ್ ಲೋಕದಲ್ಲಿ ಹೆಸರು ಮಾಡುವುದು ಕೇವಲ ಅದೃಷ್ಠದ ಮೇಲೆ ನಿರ್ಧರಿತವಾಗುತ್ತಿತ್ತು. ಆದರೆ, ಈಗ ಹಾಗಿಲ್ಲ! ಕಾಲ ಸಂಪೂರ್ಣ ಬದಲಾಗಿದೆ. ಎಲ್ಲವೂ ಮಾಡೆಲ್‌ಗಳ ಹಾರ್ಡ್‌ವರ್ಕ್, ಶಿಸ್ತು, ಪ್ಲಾನಿಂಗ್ ಹಾಗೂ ಆಯಾ ವ್ಯಕ್ತಿಯ ಪ್ರಿಪೆರೇಷನ್ ಮೇಲೆ ಡಿಪೆಂಡ್‌ಆಗಿದೆ. ಇಂದು ಈ ಕ್ಷೇತ್ರಕ್ಕೆ ಕಾಲಿಟ್ಟವರೆಲ್ಲರಿಗೂ ಒಂದಲ್ಲ ಒಂದು ಬಗೆಯ ಅವಕಾಶಗಳು ಸದಾ ತೆರೆದಿರುತ್ತವೆ. ಇತರೇ ಲೋಕದಂತೆ ಫ್ಯಾಷನ್ ಲೋಕವೂ ವಿಸ್ತರಿಸುತ್ತಿದೆ.
ಸೂಪರ್ ಮಾಡೆಲ್ ಎಂದು ಕರೆಸಿಕೊಳ್ಳುವಾಗ ನಿಮಗನಿಸುವುದು ಏನು ?
ಸಂತೋಷ್ ರೆಡ್ಡಿ : ನಾನು ಸೂಪರ್ ಮಾಡೆಲ್ ಲೈಫ್ ಸಾಗಿಸಿರುವುದರ ಬಗ್ಗೆ ನನಗೆ ಖುಷಿಯಿದೆ. ಜವಾಬ್ದಾರಿಯುತ ಸೂಪರ್ ಮಾಡೆಲ್ ಸದಾ ಉಲ್ಲಾಸ, ಉತ್ಸಾಹದೊಂದಿಗೆ ಫಿಟ್ನೆಸ್ ಕಡೆ ಗಮನ ನೀಡಿ, ಶಿಸ್ತಿನ ಜೀವನ ನಡೆಸಬೇಕಾಗುತ್ತದೆ. ಯಾವುದೇ ಸಮಯದಲ್ಲೂ ಕ್ಯಾಮೆರಾಗೆ ಸಿದ್ಧರಾಗಿರಬೇಕಾಗುತ್ತದೆ. ಇವೆಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸಿದಾಗ ಈ ಪದಕ್ಕೆ ಮಾನ್ಯತೆ ದೊರೆಯುತ್ತದೆ ಎಂದನಿಸುತ್ತದೆ.
ವಿಸ್ತಾರ : ನಿಮ್ಮ ಪ್ರಕಾರ, ಯಾವುದೇ ಮಾಡೆಲ್‌ಗೂ ಫ್ಯಾಷನ್ ಲೋಕ ಸಿನಿಮಾಗೆ ಎಂಟ್ರಿ ನೀಡಲು ಸಹಕಾರಿಯೇ?
ಸಂತೋಷ್ ರೆಡ್ಡಿ : ಖಂಡಿತಾ. ಫ್ಯಾಷನ್ ಲೋಕ ಸಿನಿಮಾಗೆ ಎಂಟ್ರಿ ನೀಡಲು ಮೊದಲ ಮೆಟ್ಟಿಲು ಎನ್ನಬಹುದು. ನನಗೆ ಗೊತ್ತಿರುವಂತೆ ಈಗಾಗಲೇ ಸಾಕಷ್ಟು ಕನ್ನಡದ ಮಾಡೆಲ್‌ಗಳು ಫ್ಯಾಷನ್ ಹಾಗೂ ಸಿನಿಮಾ ಎರಡರಲ್ಲೂ ಯಶಸ್ವಿಯಾಗಿದ್ದಾರೆ. ಇದು ನಮ್ಮ ಕ್ಷೇತ್ರದ ಘನತೆ ಎನ್ನಬಹುದು. ಹಾಗೆಂದು ಎಲ್ಲರಿಗೂ ಯಾವತ್ತೂ ಕುಳಿತೆಡೆಗೆ ಅವಕಾಶಗಳು ಅರಸಿ ಬರುವುದಿಲ್ಲ. ಅದಕ್ಕಾಗಿ ಪ್ರತಿ ಮಾಡೆಲ್ ಕೂಡ ಕೇವಲ ಫಿಟ್‌ನೆಸ್ ಜತೆಗೆ ನಟನೆಯನ್ನೂ ಕಲಿಯಬೇಕಾಗುತ್ತದೆ. ಅಡಿಷನ್‌ಗಳಲ್ಲಿ ಪಾಲ್ಗೊಂಡು ಪ್ರಯತ್ನಿಸುತ್ತಿರಬೇಕು . ಆಗಷ್ಟೇ ಮಾಡೆಲ್‌ಗಳು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ನೀಡಲು ಸಾಧ್ಯ.
ವಿಸ್ತಾರ : ಮುಂಬರುವ ಮಾಡೆಲ್‌ಗಳಿಗೆ ನಿಮ್ಮ ಸಲಹೆ ಏನು ?
ಸಂತೋಷ್ ರೆಡ್ಡಿ : ಮಾಡೆಲ್ ಆಗುವ ಇಚ್ಛೆಯಿದ್ದಲ್ಲಿ ಮೊದಲು ಆತ್ಮವಿಶ್ವಾಸ ಇರಲಿ. ಪ್ಯಾಷನ್ ಇದ್ದಲ್ಲಿ ಅದರೊಂದಿಗೆ ಫೋಕಸ್ ಇರಲಿ, ಪ್ರಯತ್ನ ಹಾಗೂ ಟೈಮಿಂಗ್ ಎರಡೂ ಜೀವನದಲ್ಲಿ ಅಳವಡಿಸಿಕೊಳ್ಳಿ. ಎಲ್ಲದಕ್ಕಿಂತ ಹೆಚ್ಚಾಗಿ ಔಟರ್ ಲುಕ್ ಜತೆಗೆ ಆರೋಗ್ಯಕರ ಲೈಫ್‌ಸ್ಟೈಲ್ ಅಳವಡಿಸಿಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Wedding Fashion | ಅರಿಶಿಣ ಶಾಸ್ತ್ರದಲ್ಲಿ ಶಕುಂತಲೆಯಂತೆ ಕಂಡ ಅದಿತಿ; ಫ್ಯಾಷನ್ ರೂವಾರಿ ಯಾರು?