Site icon Vistara News

Celebrity Fashion Corner: ಫ್ಯಾಷನ್‌ ಗ್ರೂಮಿಂಗ್‌ ಕಾನ್ಸೆಪ್ಟ್‌ಗೆ ಹೊಸ ರೂಪ ಕಲ್ಪಿಸಿದ ಗೀತಾ ಶೆಟ್ಟಿ

Celebrity Fashion Corner

ಸಂದರ್ಶನ : ಶೀಲಾ ಸಿ. ಶೆಟ್ಟಿ

ಫ್ಯಾಷನ್‌ ಕ್ಷೇತ್ರಕ್ಕೆ ಕಾಲಿಡುತ್ತಿರುವವರನ್ನು ಮಾತ್ರವಲ್ಲ, ರಾಜಕೀಯ ಪಕ್ಷಕ್ಕೆ ಕಾಲಿಟ್ಟು ಅಲ್ಲಿಯೇ ಭವಿಷ್ಯ ಕಂಡುಕೊಳ್ಳಲು ಬಯಸುವ ಯುವ ಜನಾಂಗಕ್ಕೂ ಗ್ರೂಮಿಂಗ್‌ ಸೇಷನ್‌ ಕಲ್ಪಿಸುತ್ತಿದ್ದಾರೆ ಫ್ಯಾಷನ್‌ ಲೋಕದ ಸೆಲೆಬ್ರೆಟಿ ಹಾಗೂ ಗ್ರೂಮಿಂಗ್‌ ಗುರುಕುಲ್‌ನ ಸಂಸ್ಥಾಪಕಿ ಗೀತಾ ಶೆಟ್ಟಿ. ಮಾಡೆಲ್‌ಗಳಿಗೆ ಮಾತ್ರವಲ್ಲ, ಮುಂಬರುವ ಚುನಾವಣೆ ಪ್ರಚಾರದಲ್ಲಿ ಹೇಗೆ ಜನರೊಂದಿಗೆ ಮಾತನಾಡುವುದು, ಹೇಗೆ ಅತ್ಯುತ್ತಮವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವುದು ಎಂಬೆಲ್ಲಾ ವಿಷಯಗಳ ಕುರಿತು ಸಾಕಷ್ಟು ಮಂದಿಗೆ ಇಮೇಜ್‌ ಗ್ರೂಮಿಂಗ್‌ ಕ್ಲಾಸ್‌ಗಳನ್ನು ನಡೆಸುತ್ತಿದ್ದಾರೆ. ಇದೇನಿದು ಗ್ರೂಮಿಂಗ್‌, ಯಾರಿಗೆಲ್ಲ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ಈ ಬಾರಿಯ ಸೆಲೆಬ್ರೆಟಿ ಫ್ಯಾಷನ್‌ ಕಾರ್ನರ್‌ನಲ್ಲಿ ವಿಸ್ತಾರದೊಂದಿಗೆ ಹಂಚಿಕೊಂಡಿದ್ದಾರೆ.

ವಿಸ್ತಾರ: ನಿಮ್ಮ ಪ್ರಕಾರ, ಫ್ಯಾಷನ್‌ ಕ್ಷೇತ್ರದಲ್ಲಿ ಕಾಲಿಡುವ ಪ್ರತಿ ಮಾಡೆಲ್‌ಗೂ ಗ್ರೂಮಿಂಗ್‌ ಅತ್ಯವಶ್ಯವೇ?

ಖಂಡಿತಾ. ಈ ಕ್ಷೇತ್ರದಲ್ಲಿ ಟ್ರಯಲ್‌ ಹಾಗೂ ಎರರ್ ಎಂದೆಲ್ಲಾ ಪ್ರಾಕ್ಟೀಸ್‌ ಮಾಡಿ ಸೋಲುವ ಬದಲು, ಮೊದಲೇ ಸರಿಯಾದ ಪ್ಲಾನ್‌ ಮಾಡಿ ಎಕ್ಸ್‌ಪರ್ಟ್‌ಗಳ ಬಳಿ ಗ್ರೂಮಿಂಗ್‌ ಕ್ಲಾಸ್‌ಗಳಲ್ಲಿ ಎಲ್ಲವನ್ನು ಕಲಿತು ಮುನ್ನೆಡೆದಲ್ಲಿ ಯಶಸ್ಸು ದೊರಕುವುದು ಗ್ಯಾರಂಟಿ.

ವಿಸ್ತಾರ: ಫ್ಯಾಷನ್‌ ಕುರಿತ ಈ ಗ್ರೂಮಿಂಗ್‌ ಸೇಷನ್‌ಗಳು ಏನೆಲ್ಲಾ ಒಳಗೊಂಡಿರುತ್ತದೆ?

ಗ್ರೂಮಿಂಗ್‌ನಲ್ಲೆ ಸಾಕಷ್ಟು ವಿಷಯಗಳ ಬಗ್ಗೆ ಕಲಿಕೆ ಸಾಧ್ಯ. ಮಾಡೆಲ್‌ಗಳ ಹಾವ-ಭಾವ, ರ್ಯಾಂಪ್‌ನಲ್ಲಿ ವಾಕ್‌ ಮಾಡುವ ಕಲೆ, ರ್ಯಾಂಪ್‌ ಫೋಟೋ ಪೋಸಿಂಗ್‌, ಐ ಟು ಐ ಕಾಂಟಾಕ್ಟ್‌, ಮಾತನಾಡುವ ಕಲೆ, ಫ್ಯಾಷನ್‌ ಶೋಗಳಲ್ಲಿ ಬಿಂದಾಸ್‌ ಆಗಿ ತಮ್ಮನ್ನು ತಾವು ರೆಪ್ರೆಸೆಂಟ್‌ ಮಾಡುವ ರೀತಿ-ನೀತಿ, ಡ್ರೆಸ್ಸಿಂಗ್‌, ಸ್ಟೈಲಿಂಗ್‌ ಹೀಗೆ ಎಲ್ಲವನ್ನೂ ಕರಾರುವಕ್ಕಾಗಿ ಕಲಿಯಲು ಈ ಗ್ರೂಮಿಂಗ್‌ ತರಗತಿಗಳು ಸಹಕಾರಿ. ಇವೆಲ್ಲವು ಈ ಕ್ಷೇತ್ರದಲ್ಲಿ ಮುಂದುವರಿಯಲು ಸಹಕರಿಸುತ್ತವೆ.

ವಿಸ್ತಾರ: ಕೇವಲ ಫ್ಯಾಷನ್‌ ಕ್ಷೇತ್ರಕ್ಕೆ ಸೀಮಿತವಾಗಿದ್ದ ಈ ಗ್ರೂಮಿಂಗ್‌ ಕಾನ್ಸೆಪ್ಟ್ ಇದೀಗ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಈ ಬಗ್ಗೆ ವಿವರಿಸಿ.

ಹೌದು. ಇತರೇ ಕ್ಷೇತ್ರಗಳಿಗೂ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಈ ಹಿಂದೆ ಕೇವಲ ಫ್ಯಾಷನ್‌ ಕ್ಷೇತ್ರದವರು ಮಾತ್ರ ಗ್ರೂಮಿಂಗ್‌ಗೆ ಒಳಗಾಗುತ್ತಿದ್ದರು. ಇದೀಗ ಜನರೇಷನ್‌ ಬದಲಾಗಿದೆ. ಮಾಡೆಲ್‌ಗಳು ಹಾಗೂ ನಟ-ನಟಿಯರು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದವರು ಕೂಡ ಇದರತ್ತ ವಾಲುತ್ತಿದ್ದಾರೆ. ಅಷ್ಟೇಕೆ! ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಬಯಸುವ ಯುವ ನಾಯಕರು ಕೂಡ ತಮ್ಮನ್ನು ತಾವು ಬೆಸ್ಟ್‌ ಎಂದು ಗುರುತಿಸಿಕೊಳ್ಳಲು ಇಮೇಜ್‌ ಗ್ರೂಮಿಂಗ್‌ನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ವಿಸ್ತಾರ: ಫ್ಯಾಷನ್‌ ಗ್ರೂಮಿಂಗ್‌ ಎಕ್ಸ್‌ಪರ್ಟ್ ಆಗಿರುವ ನೀವು ನೀಡುವ ಸಿಂಪಲ್‌ ಸಲಹೆಗಳೇನು?

ನೀವಿರುವ ಕ್ಷೇತ್ರದಲ್ಲಿ ನಿಮ್ಮನ್ನು ಅತ್ಯಾಕರ್ಷಕವಾಗಿ ಬಿಂಬಿಸಿಕೊಳ್ಳಲು ಪರ್ಫೆಕ್ಟ್‌ ಗ್ರೂಮಿಂಗ್‌ ತರಗತಿಗಳನ್ನು ಆಯ್ಕೆ ಮಾಡಿ, ಕಲಿಯಿರಿ. ನಿಮ್ಮ ಬಾಡಿ ಲಾಂಗ್ವೇಜ್‌ ಹಾಗೂ ಮಾತನಾಡುವ ಕಲೆ ನಿಮ್ಮ ಅಭಿವೃದ್ಧಿಗೆ ಕಾರಣವಾಗಲಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Fashion Sarees: ಮದುವೆ ಸೀಸನ್‌ನಲ್ಲಿ ಟ್ರೆಂಡಿಯಾದ ಗೋಲ್ಡನ್‌ ಶೇಡ್‌ ಸೀರೆಗಳು

Exit mobile version