ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಮಾಡೆಲಿಂಗ್ ಮತ್ತು ಜಾಹೀರಾತು ಕ್ಷೇತ್ರದಲ್ಲೂ ಬಿಜಿಯಾಗಿರುವ ನಟಿ ಕಮ್ ಮಾಡೆಲ್ ಸ್ನೇಹಾ ನಾಮನಂದಿ ಇದೀಗ ಹಿಂದಿ ಸೀರೀಯಲ್‌ಗಳಲ್ಲೂ ಅಭಿನಯಿಸುತ್ತಿದ್ದಾರೆ. ಸದಾ ಒಂದಲ್ಲ ಒಂದು ಫ್ಯಾಷನಬಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಇವರು ತಮ್ಮ ಫ್ಯಾಷನ್ ಲೋಕ, ಬ್ಯೂಟಿ ಹಾಗೂ ಫಿಟ್ನೆಸ್ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಈ ಕುರಿತು ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.
*ಮಾಡೆಲಿಂಗ್ ಜಗತ್ತಿನಲ್ಲಿ ಪ್ರತಿನಿತ್ಯ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ನೀವು ಟ್ರೆಂಡ್‌ಗೆ ತಕ್ಕಂತೆ ಹೇಗೆ ಬದಲಾಗುತ್ತೀರಾ?
ಸ್ನೇಹಾ: ಫ್ಯಾಷನ್ ಎಂಬುದು ಹರಿಯುವ ನೀರಿನಂತೆ. ಸದಾ ಒಂದಲ್ಲ ಒಂದು ಟ್ರೆಂಡ್ ಆಗಮಿಸುತ್ತಲೇ ಇರುತ್ತದೆ. ಆಗ ನಮಗೆ ಗೊತ್ತಿಲ್ಲದಂತೆ ನಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ಗಳಲ್ಲೂ ಬದಲಾವಣೆಯಾಗುತ್ತದೆ. ಆದರೆ, ಅದು ನಮ್ಮ ದಿನಚರಿಗೆ ತಕ್ಕಂತೆ ಬದಲಾಗಿರುತ್ತದೆ ಅಷ್ಟೇ! ನಟಿಯಾಗಿರುವುದರಿಂದ ಕಂಪ್ಲೀಟ್ ಫ್ಯಾಷನ್ ಫಾಲೋ ಮಾಡಲು ಸಾಧ್ಯವಾಗುವುದಿಲ್ಲ. ಆಯಾ ಸೀಸನ್ ಟ್ರೆಂಡ್‌ಗೆ ತಕ್ಕಂತೆ ಔಟ್‌ಫಿಟ್ ಹಾಗೂ ಮಾಡುವ ಮೇಕಪ್‌ನಲ್ಲಿ ಒಂದಿಷ್ಟು ಬದಲಾವಣೆಗಳಾಗುತ್ತವೆ.
*ನಟನೆ ಹಾಗೂ ಮಾಡೆಲಿಂಗ್ ಜಗತ್ತಿನಲ್ಲಿ ನಿಮಗಿಷ್ಟವಾದ ಕ್ಷೇತ್ರ ಯಾವುದು? ಯಾಕೆ?
ಸ್ನೇಹಾ: ನನ್ನ ಜರ್ನಿ ಆರಂಭವಾಗಿದ್ದು ಮಾಡೆಲಿಂಗ್ ಕ್ಷೇತ್ರವಾದರೂ ಮತ್ತಷ್ಟು ಮುಂದುವರಿಯಲು ನಟನಾ ಕ್ಷೇತ್ರ ಸಾಥ್ ನೀಡಿದೆ. ಹಾಗಾಗಿ ಎರಡೂ ಕ್ಷೇತ್ರಗಳೂ ನನಗಿಷ್ಟ.
*ಈ ಸೀಸನ್‌ನ ಯಾವ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಿಗೆ ನೀವು ಫಿಧಾ ಆಗಿದ್ದೀರಾ?
ಸ್ನೇಹಾ: ಬೋಲ್ಡ್ ಹಾಗೂ ವೈಬ್ರೆಂಟ್ ಕಲರ್‌ಗಳನ್ನು ಬಿಂಬಿಸುವ ಗ್ಲಾಮರಸ್ ಲುಕ್ ನೀಡುವ ಬಾರ್ಡೋಟ್, ಕ್ವಿರ್ಕಿ ಪ್ರಿಂಟ್ಸ್‌ನ ಡಿಸೈನರ್‌ವೇರ್‌ಗಳು, ಶಾರ್ಟ್ ಹಾಗೂ ನೀ ಲೆಂಥ್ ಸ್ಕರ್ಟ್, ಪೆನ್ಸಿಲ್ ಹಾಗೂ ಕಟ್ ಸ್ಕರ್ಟ್‌ಗಳು, ಟೊರ್ನ್ ಜೀನ್ಸ್ ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ನನಗೆ ಪ್ರಿಯವಾಗಿವೆ. ಇನ್ನು ಟ್ರಾನ್ಸಪರೆಂಟ್ ಫಂಕಿ ಆಕ್ಸೆಸರೀಸ್, ಸ್ಲಿಂಗ್ ಬ್ಯಾಗ್, ಟೊಟೆಸ್ ಗಮ್ ಬೂಟ್ಸ್ ನನ್ನ ಸ್ಟೈಲ್ ಸ್ಟೇಟ್‌ಮೆಂಟ್‌ನ ಭಾಗವಾಗಿವೆ.
- ಸ್ಟ್ರಿಕ್ಟ್ ಡಯಟ್ ಹಾಗೂ ವರ್ಕೌಟ್ ಫಾಲೋ ಮಾಡುವ ನೀವು ನೀಡುವ ಗೈಡ್‌ಲೈನ್ಸ್ ಏನು?
ಸ್ನೇಹಾ: ಸ್ಟ್ರಿಕ್ಟ್ ಎನ್ನುವುದಕ್ಕಿಂತ ಹೆಚ್ಚಾಗಿ ಆರೋಗ್ಯಕರ ಡಯಟ್ ಫಾಲೋ ಮಾಡುತ್ತೇನೆ. ವರ್ಕೌಟ್ ತಪ್ಪಿಸುವುದಿಲ್ಲ. ನನ್ನ ಗೈಡ್‌ಲೈನ್ಸ್ ಇಷ್ಟೇ! ಹೊಟ್ಟೆ ಹಸಿಯದಿದ್ದರೂ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಸೀಸನ್‌ಗೆ ತಕ್ಕಂತೆ ಸಿಗುವ ಎಲ್ಲಾ ಹಣ್ಣುಗಳನ್ನು ಸೇವಿಸಿ. ಸದಾ ನೀರನ್ನು ಕುಡಿಯುವ ಅಭ್ಯಾಸ ಇರಲಿ. ಇನ್ನು ನಾನು ಆ್ಯಬ್ಸ್, ಸ್ಟೇರ್ ಸ್ಟೆಪ್ಪಿಂಗ್, ಪ್ಲಾಂಕ್ಸ್, ಸ್ಕ್ವಾಟ್ಸ್, ವಾಟರ್ ಬಾಟಲ್ ವೈಟ್ಸ್, ಜಂಪಿಂಗ್ ಜಾಕ್ಸ್ ವರ್ಕೌಟ್ಸ್ ಮಾಡುತ್ತೇನೆ. ಸೋ, ನಾನು ಹೇಳುವುದು ಇಷ್ಟೇ ! ನಿಮಗೆ ಸೂಟ್ ಆಗುವ ವರ್ಕೌಟ್ ರೂಢಿಸಿಕೊಳ್ಳಿ. ವ್ಯಾಯಾಮವನ್ನು ಮಸ್ಟ್ ಲಿಸ್ಟ್‌ಗೆ ಸೇರಿಸಿಕೊಳ್ಳಿ.
*ನಿಮ್ಮ ಬ್ಯೂಟಿ ಸೀಕ್ರೇಟ್?
ಸ್ನೇಹಾ: ಸದಾ ಮನಸ್ಸನ್ನು ಉಲ್ಲಾಸಿತವಾಗಿಟ್ಟುಕೊಳ್ಳುವುದು, ನನ್ನನ್ನು ನಾನು ಮೊದಲು ಪ್ರೀತಿಸುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| ಮರ್ಲಿನ್ ಮನ್ರೋ ಐತಿಹಾಸಿಕ ಉಡುಗೆ ಹಾಳು ಮಾಡಿದ ಕಾರ್ಡಾಶಿಯಾನ್?