ಶೀಲಾ ಸಿ ಶೆಟ್ಟಿ, ಬೆಂಗಳೂರು
ಪುರುಷರು ಕೂಡ ಟ್ರೆಂಡ್‌ಗೆ ತಕ್ಕಂತೆ ಇಲ್ಲವೇ ತಮ್ಮ ಇಮೇಜ್‌ಗೆ ಹೊಂದುವಂತೆ ಆಗಾಗ ಅಪ್‌ಡೇಟ್ ಆಗುವುದು ಇಂದಿನ ಅಗತ್ಯವಾಗಿದೆ ಎನ್ನುವ ಮಾಡೆಲ್ ಕಮ್ ನಟ ದರ್ಶ್ ಚಂದ್ರಪ್ಪ, ರ್ಯಾಂಪ್ ಮಾತ್ರವಲ್ಲ, ಜಾಹೀರಾತು ಹಾಗೂ ನಟನೆಯಲ್ಲೂ ಸೈ ಎನಿಸಿಕೊಂಡ ಕನ್ನಡದ ಹುಡುಗ. ಕೇವಲ ಉತ್ತರ ಭಾರತದವರೇ ಹೆಚ್ಚಾಗಿರುವ ಮಾಡೆಲಿಂಗ್ ಜಗತ್ತಿನಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಕೆಲವೇ ಕೆಲವು ಕನ್ನಡಿಗರ ಸಾಲಿನಲ್ಲಿ ಇವರೂ ನಿಲ್ಲುತ್ತಾರೆ(Celebrity Fashion). ಈ ಬಾರಿಯ ಸೆಲೆಬ್ರಿಟಿ ಫ್ಯಾಷನ್ ಕಾರ್ನರ್ ಕಾಲಂನಲ್ಲಿ ವಿಸ್ತಾರದೊಂದಿಗೆ ಮಾತನಾಡಿದ್ದಾರೆ. ಪುರುಷರಿಗೆ ಒಂದಿಷ್ಟು ಫ್ಯಾಷನ್ ಟಿಪ್ಸ್ ಕೂಡ ನೀಡಿದ್ದಾರೆ.
*ಮಾಡೆಲಿಂಗ್ ಜಗತ್ತಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಎನ್ನುತ್ತಾರಲ್ಲ ನಿಜವೇ? ಕಾರಣ?
ದರ್ಶ್: ಹೌದು. ಮಾಡೆಲಿಂಗ್ ಜಗತ್ತು ಎಲ್ಲರಿಗೂ ಕೈ ಬೀಸಿ ಕರೆಯುವುದಿಲ್ಲ. ಬಹುತೇಕರು ಸಿನಿಮಾದತ್ತ ಆಕರ್ಷಿತರಾಗುವಷ್ಟು ಮಾಡೆಲಿಂಗ್‌ನತ್ತ ವಾಲುವುದಿಲ್ಲ. ಕಾರಣ, ಈ ಕ್ಷೇತ್ರದಲ್ಲಿ ಫಿಟ್ನೆಸ್, ಔಟ್‌ಲುಕ್ ಎಲ್ಲವನ್ನೂ ಸದಾ ಕಾಪಾಡಿಕೊಂಡಿರಬೇಕಾಗುತ್ತದೆ. ಇನ್ನು ಉತ್ತರ ಭಾರತದ ಮಾಡೆಲ್‌ಗಳ ಮಧ್ಯೆ ಎಲ್ಲದರಲ್ಲೂ ಸೈ ಎನಿಸಿಕೊಳ್ಳಬೇಕಾಗುತ್ತದೆ. ಒಂದೆರೆಡು ಬಾರಿ ರ್ಯಾಂಪ್ ತುಳಿದವರು ನಂತರದ ದಿನಗಳಲ್ಲಿ ಕಾಣೆಯಾಗುತ್ತಾರೆ. ಇದು ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ. ಕೆಲವರು ಮಾತ್ರ ತಮ್ಮ ಸ್ಥಾನ ಉಳಿಸಿಕೊಳ್ಳುತ್ತಾರೆ.
*ಇಂದಿನ ಯುವಕರು ಫ್ಯಾಷನ್‌ಗೆ ತಕ್ಕಂತೆ ಅಪ್‌ಡೇಟ್ ಆಗಿರಲೇಬೇಕಾ? ಇದು ಅಗತ್ಯವೇ?
ದರ್ಶ್: ಹೌದು. ಫ್ಯಾಷನ್ ಫಾಲೋ ಮಾಡದಿದ್ದರೂ ಪರವಾಗಿಲ್ಲ. ನೋಡುಗರು ಒಪ್ಪುವಂತಹ ಅಥವಾ ತಮ್ಮ ವ್ಯಕ್ತಿತ್ವಕ್ಕೆ ಹೊಂದುವಂತಹ ಡ್ರೆಸ್ ಸೆನ್ಸ್ ಬೆಳೆಸಿಕೊಳ್ಳುವುದು ಅಗತ್ಯ.
*ಡ್ರೆಸ್‌ಸೆನ್ಸ್ ಉತ್ತಮವಾಗಿರಿಸಿಕೊಳ್ಳಲು ಏನು ಮಾಡಬೇಕು?
ದರ್ಶ್: ಉತ್ತಮ ಡ್ರೆಸ್ ಸೆನ್ಸ್ ಇರಲು ಮಾಡೆಲ್ ಆಗಬೇಕಾಗಿಲ್ಲ. ಒಂದಿಷ್ಟು ಬೇಸಿಕ್ ಜ್ಞಾನ ಇದ್ದರೆ ಸಾಕು. ಫ್ಯಾಷನ್ ಅಪ್‌ಡೇಟ್ ಇರುವಂತಹ ಲೇಖನಗಳನ್ನು ಗಮನಿಸಿದರೇ ಸಾಕು. ಅಗಾಗ್ಗೆ ಫ್ಯಾಷನ್ ಮ್ಯಾಗಝೀನ್ ಇಲ್ಲವೇ ಫ್ಯಾಷನ್ ನ್ಯೂಸ್ ಅಪ್‌ಡೇಟ್ ನೋಡುತ್ತಿರಬೇಕು. ಸಿಂಪಲ್ ಆಗಿರುವಂತವನ್ನು ಅಳವಡಿಸಿಕೊಳ್ಳಬಹುದು.
*ವೃತ್ತಿಪರರಿಗೆ ನೀವು ಹೇಳುವುದೇನು?
ದರ್ಶ್: ಆಯಾ ವ್ಯಕ್ತಿಯು ನಿರ್ವಹಿಸುವ ಕಾರ್ಯಕ್ಕೆ ಅನುಗುಣವಾಗಿ ಡ್ರೆಸ್ ಸೆನ್ಸ್ ಬೆಳೆಸಿಕೊಳ್ಳಬೇಕು. ಉದಾಹರಣೆಗೆ ಕಾಲೇಜು ಹುಡುಗರು ಈ ಜನರೇಷನ್‌ಗೆ ಸೂಟ್ ಆಗುವಂತಹ ಯಾವುದೇ ಫಂಕಿ ಸ್ಟೈಲ್ ಫಾಲೋ ಮಾಡಬಹುದು. ಆದರೆ, ಕಾರ್ಪೋರೇಟ್ ಕ್ಷೇತ್ರ ಹಾಗೂ ಕಚೇರಿಗೆ ತೆರಳುವವರು ಅವರ ಇಮೇಜ್‌ಗೆ ತಕ್ಕಂತೆ ಸೂಕ್ತವೆನಿಸುವ ಔಟ್‌ಫಿಟ್ ಅಥವಾ ಫಾರ್ಮಲ್ಸ್ ಧರಿಸಬೇಕು. ನೋಡಲು ಯೂನಿಫಾರ್ಮ್ ಎಂದನಿಸದಂತೆ ಕಾಣಿಸಲು ಒಂದಿಷ್ಟು ಡ್ರೆಸ್ ಸೆನ್ಸ್ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಆಗ ಧರಿಸುವ ಡ್ರೆಸ್‌ಕೋಡ್ ನೋಡುಗರಿಗೆ ನೀರಸ ಎನಿಸದು.
*ದಿನಚರಿಯಲ್ಲಿ ಪ್ರತಿಯೊಬ್ಬರು ಫಾಲೋ ಮಾಡಬಹುದಾದ ಸಿಂಪಲ್ ಸಲಹೆ ನೀಡಿ?
ದರ್ಶ್: ಸೀಸನ್‌ಗೆ ತಕ್ಕಂತೆ ಬಾಡಿ ಲಾಂಗ್ವೇಜ್‌ಗೆ ಸೂಟ್ ಆಗುವಂತೆ ಔಟ್‌ಫಿಟ್ ಧರಿಸಿ. ಟ್ರಯಲ್ ನೋಡದೇ ಯಾವತ್ತೂ ಯಾವುದೇ ಔಟ್‌ಫಿಟ್ ಧರಿಸಬೇಡಿ. ಧರಿಸುವ ಫುಟ್‌ವೇರ್ ಇಮೇಜ್‌ಗೆ ಪ್ಲಸ್ ಪಾಯಿಂಟ್ ಎಂಬುದನ್ನು ಮರೆಯದಿರಿ. ಹೇರ್‌ಸ್ಟೈಲ್ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತಿರಲಿ.
ಇದನ್ನೂ ಓದಿ: Celebrity Fashion Corner: ಫ್ಯಾಷನ್ ಎಂಬುದು ಹರಿಯುವ ನೀರಿನಂತೆ!