ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚೆಸ್ ಬೋರ್ಡ್ ಪ್ಯಾಂಟ್ ಫ್ಯಾಷನ್ (Chessboard Pants Fashion) ಇದೀಗ ಕಾಲೇಜು ಹುಡುಗಿಯರ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ. ಹೌದು, ಬಿಂದಾಸ್ ಫ್ಯಾಷನ್ ಹೆಸರಲ್ಲಿ ಸೇರ್ಪಡೆಗೊಂಡಿರುವ ಈ ಚೆಕ್ಸ್ ಅಥವಾ ಚೆಕ್ಕರ್ಡ್ ಪ್ಯಾಂಟ್‌ಗಳು ಹೊಸ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿವೆ. ಪ್ರಯೋಗಾತ್ಮಕ ಮಿಕ್ಸ್ ಮ್ಯಾಚ್ ಸ್ಟೈಲಿಂಗ್‌ಗೆ ಸೇರಿವೆ.
ರೆಟ್ರೊ ಮೆನ್ಸ್ ಲುಕ್‌ನಲ್ಲಿದ್ದ ಪ್ಯಾಂಟ್‌ಗಳಿವು
“ಚೆಕ್ಸ್ ಪ್ರಿಂಟ್ ಇರುವ ಈ ಚೆಸ್ ಬೋರ್ಡ್ ಎಂದು ಕರೆಯಲಾಗುವ ಈ ಪ್ಯಾಂಟ್‌ಗಳು ಇಂದಿನ ಜನರೇಷನ್‌ನ ಹುಡುಗಿಯರ ವಾರ್ಡ್ರೋಬ್ ಸೇರಿದ್ದು, ಮಿಕ್ಸ್ ಮ್ಯಾಚ್ ಮಾಡಿ ಧರಿಸುವ ಹುಡುಗಿಯರಿಗೆ ಪ್ರಿಯವಾಗಿವೆ. ನೋಡಲು ಇಲ್ಯೂಷನ್ ಕ್ರಿಯೇಟ್ ಮಾಡುವ ಇವು ಫಂಕಿ ಹಾಗೂ ಸೆಮಿ ಫಾರ್ಮಲ್ ಲುಕ್‌ನಲ್ಲಿಕಂಡು ಬರುತ್ತಿವೆ. ಧರಿಸುವ ಹುಡುಗಿಯರ ಸ್ಟೈಲಿಂಗ್ ಆಧಾರದ ಮೇಲೆ ಈ ಪ್ಯಾಂಟ್‌ಗಳು ಲುಕ್ ಬದಲಿಸಿಕೊಳ್ಳುತ್ತವೆ. ಹಾಗಾಗಿ ಈ ಪ್ಯಾಂಟ್‌ಗಳು ಹೀಗೆಯೇ ಕಾಣುತ್ತವೆ ಎಂಬುದನ್ನುಹೇಳಲು ಸಾಧ್ಯವಿಲ್ಲ! ಎಲ್ಲದಕ್ಕಿಂತ ಹೆಚ್ಚಾಗಿ ಮಿಕ್ಸ್ ಮ್ಯಾಚ್ ಅಪ್ಷನ್‌ಗೆ ಇವು ಸಾಥ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಮ್. ಅವರ ಪ್ರಕಾರ, ಚೆಸ್‌ಬೋರ್ಡ್ ಪ್ಯಾಂಟ್‌ಗಳು ಮೂರ್ನಾಲ್ಕು ದಶಕಗಳಿಂದೇ ರೆಟ್ರೊ ಮೆನ್ಸ್ ಲುಕ್‌ನಲ್ಲಿದ್ದವು. ಇದೀಗ ಹುಡುಗಿಯರು ಈ ಪ್ಯಾಂಟ್‌ಗಳಿಗೆ ಫಿದಾ ಆಗಿದ್ದಾರೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಚೆಸ್‌ಬೋರ್ಡ್ ಪ್ಯಾಂಟ್ಸ್
ಥೇಟ್ ಚೆಸ್ ಬೋರ್ಡ್ನಂತೆ ಕಾಣುವ ಪ್ಯಾಂಟ್, ಕಲರ್ ಚೆಕ್ಸ್ ಇರುವಂತವು, ಬಾಕ್ಸ್ ಪ್ರಿಂಟ್ಸ್‌ನವು ಹೆಚ್ಚು ಟ್ರೆಂಡಿಯಾಗಿವೆ. ಅದರಲ್ಲೂ ಸ್ಟ್ರೇಟ್‌ಕಟ್‌ನವು ಸೆಮಿ ಫಾರ್ಮಲ್ ಲುಕ್‌ಗೆ ಸಾಥ್ ನೀಡುತ್ತಿವೆ. ಇನ್ನು ಸ್ಕಿನ್‌ಟೈಟ್ ಚೆಸ್ ಬೋರ್ಡ್ ಪ್ಯಾಂಟ್‌ಗಳು ಫಂಕಿ ಲುಕ್‌ಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಚೆಸ್ ಬೋರ್ಡ್ ಪ್ಯಾಂಟ್ ಮಿಕ್ಸ್ ಮ್ಯಾಚ್
- ಬ್ಲಾಕ್ ಮತ್ತು ವೈಟ್ ಚೆಸ್ ಬೋರ್ಡ್ ಪ್ಯಾಂಟ್‌ಗಳಿಗೆ ಆದಷ್ಟೂ ಅದೇ ಕಲರ್ನ ಕ್ರಾಪ್ ಟಾಪ್ ಅಥವಾ ಟೀ ಶರ್ಟ್ ಹೊಂದುತ್ತವೆ.
- ಲೂಸಾದ ಚೆಸ್ ಬೋರ್ಡ್ ಪ್ಯಾಂಟ್‌ಗಳಿಗೆ ಟೈಟ್ ಟಾಪ್ಗಳು ಹೊಂದುತ್ತವೆ.
- ಟೈಟ್ ಫಿಟ್ಟಿಂಗ್ ಚೆಸ್ ಬೋರ್ಡ್ ಪ್ಯಾಂಟ್‌ಗಳಿಗೆ ದೊಗಲೆ ಕಫ್ತಾನ್ ಶೈಲಿಯ ಕ್ರಾಪ್ ಟಾಪ್ಗಳು ಓಕೆ.
- ಆಯಾ ಪ್ಯಾಂಟ್ನ ಡಿಸೈನ್ ಹಾಗು ಪ್ರಿಂಟ್ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ.
- ಡೀಸೆಂಟ್ ಲುಕ್ ನೀಡಿದಲ್ಲಿ ರೆಟ್ರೊ ಲುಕ್ ಪಡೆಯಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ethnic Footwear Fashion: ಹಂಗಾಮ ಎಬ್ಬಿಸಿದ ದೇಸಿ ಲುಕ್ ನೀಡುವ ಎಥ್ನಿಕ್ ಫುಟ್‌ವೇರ್ಸ್