ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಕ್ರಿಸ್ಮಸ್ ಫ್ಯಾಷನ್‌ನಲ್ಲಿ ನಾನಾ ಬಗೆಯ ಗೌನ್‌ಗಳು ಎಂಟ್ರಿ ನೀಡಿದ್ದು ಅವುಗಳಲ್ಲಿ ವೈವಿಧ್ಯಮಯ ೪ ಡಿಸೈನರ್ ಗೌನ್‌ಗಳು ಫ್ಯಾಷನ್ ಪ್ರಿಯರನ್ನು ಸೆಳೆದಿವೆ. ಅವುಗಳಲ್ಲಿ ಬೇಬಿ ಡಾಲ್‌ನಂತೆ ಬಿಂಬಿಸುವ ಗೌನ್‌ಗಳು, ಸ್ಲಿಮ್ ಫಿಟ್ ಗೌನ್‌ಗಳು ಸೇರಿವೆ. ಇವು ಫೆಸ್ಟೀವ್ ಸೀಸನ್ ಸಂಭ್ರಮವನ್ನು ಹೆಚ್ಚಿಸಿವೆ.
“ಟ್ರೆಂಡಿಯಾಗಿರುವ ಗೌನ್‌ಗಳ ಲಿಸ್ಟ್‌ನಲ್ಲಿ ಈ ಕೆಳಗಿನ ಗೌನ್‌ಗಳಿದ್ದು, ಆಯಾ ವ್ಯಕ್ತಿತ್ವ ಹಾಗೂ ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಧರಿಸಬಹುದು. ಆಗ ನೋಡಲು ಆಕರ್ಷಕವಾಗಿ ಕಾಣಬಹುದು” ಎನ್ನುತ್ತಾರೆ ಸ್ಟೈಲಿಸ್ಟ್ ಧೀರಜ್.
೧. ಬೊಂಬೆಯಂತೆ ಕಾಣಲು ನೆಟ್ಟೆಡ್ ಬಾಲ್ ಗೌನ್
ಡಾಲ್‌ನಂತೆ ಬಿಂಬಿಸುವ ನೆಟ್ಟೆಡ್ ಬಾಲ್ ಗೌನ್ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ನೋಡಲು ಆಕರ್ಷಕವಾಗಿ ಕಾಣುತ್ತದೆ. ಕೆಳಗಡೆ ಗೌನ್ ಹರಡಿಕೊಳ್ಳುವುದರಿಂದ ಗೊಂಬೆಯ ಲುಕ್ ನೀಡುತ್ತದೆ. ಹವರ್ ಗ್ಲಾಸ್ ಶೇಪ್‌ನವರಿಗೆ ಇದು ಹೇಳಿ ಮಾಡಿಸಿದಂತಿರುತ್ತದೆ. ತೀರಾ ಸ್ಲಿಮ್ ಆಗಿರದಿದ್ದವರಿಗೂ ಅಷ್ಟೇ, ಇದು ಸೂಟ್ ಆಗುತ್ತದೆ.
೨. ಆಕರ್ಷಕ ಶೀತ್ ಗೌನ್
ಶೀತ್ ಗೌನ್ ಹಾಗೂ ಶೀತ್ ಫ್ರಾಕ್‌ಗಳು ಚಾಲ್ತಿಯಲ್ಲಿವೆ. ಪ್ಲಂಪಿಯಾಗಿರುವವರು ಈ ಶೀತ್ ಗೌನನ್ನು ಧರಿಸಬಹುದು. ಇದಕ್ಕೆ ಬಳಸುವ ಫ್ಯಾಬ್ರಿಕ್ ವಿಭಿನ್ನವಾಗಿರುತ್ತದೆ. ಹೆಚ್ಚು ಹರಡಿಕೊಳ್ಳುವುದಿಲ್ಲ. ಸಿಂಪಲ್ ಹಾಗೂ ಫ್ರಾಕ್ ಲುಕ್ ಬೇಕೆನ್ನುವವರು ಈ ಗೌನ್ ಮೊರೆ ಹೋಗಬಹುದು. ಪಾರ್ಟಿ ಹಾಗೂ ಸಿಂಪಲ್ ಫಂಕ್ಷನ್‌ಗಳಿಗೂ ಇವನ್ನು ಧರಿಸಬಹುದು.
೩. ಟೀ ಲೆಂಥ್ ಗೌನ್ ಜಾದೂ
ಸೆಲೆಬ್ರೇಷನ್‌ನಲ್ಲಿ ಉದ್ದುದ್ದದ ಗೌನ್‌ಗಳನ್ನು ಧರಿಸಲು ಇಷ್ಟವಿಲ್ಲದವರು ಟೀ ಲೆಂಥ್ ಗೌನ್ ಧರಿಸಬಹುದು. ಇದು ಮಂಡಿಯವರೆಗೂ ನೋಡಲು ಸೇಮ್ ಟು ಸೇಮ್ ಫ್ರಾಕ್‌ನಂತೆಯೇ ಕಾಣುತ್ತದೆ. ನಾನಾ ವೆರೈಟಿಗಳಲ್ಲಿಯೂ ದೊರೆಯುತ್ತದೆ. ಪಾಸ್ಟೆಲ್ ಶೇಡ್ ಹಾಗೂ ಲೈಟ್ ಕಲರ್‌ನವು ಹೆಚ್ಚು ಟ್ರೆಂಡಿಯಾಗಿವೆ. ಕೊಂಚ ಪ್ಲಂಪಿಯಾಗಿರುವವರು ಡಬ್ಬಲ್ ಶೇಡ್ ಹಾಗೂ ಮಿಕ್ಸ್‌ಡ್ ಫ್ಯಾಬ್ರಿಕ್‌ನವನ್ನು ಧರಿಸಬಹುದು.
೪. ಅಂದ ಹೆಚ್ಚಿಸುವ ಪ್ರೋಮ್ ಗೌನ್
ಬಾಡಿ ಶೇಪ್‌ಗೆ ತಕ್ಕಂತಿರುವ ಪ್ರೋಮ್ ಗೌನ್‌ಗಳು ಪಾರ್ಟಿಗೆ ಬೆಸ್ಟ್ ಸೂಟ್ ಆಗುತ್ತವೆ. ಧರಿಸಿದಾಗ ಹೆಚ್ಚಾಗಿ ಹರಡಿಕೊಳ್ಳುವುದಿಲ್ಲ. ನೋಡಲು ಲಾಂಗ್ ಫ್ರಾಕ್‌ನಂತೆ ಕಾಣುವ ಇವು ವೆರೈಟಿ ವಿನ್ಯಾಸದವು ದೊರಕುತ್ತವೆ. ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಟ್ರಯಲ್ ನೋಡಿ ಖರೀದಿಸುವುದು ಉತ್ತಮ.
ಗೌನ್ ಪ್ರೇಮಿಗಳಿಗೆ ತಿಳಿದಿರಲಿ
- ನಿಮ್ಮ ಪರ್ಸನಾಲಿಟಿಗೆ ಸರಿಯಾದ ಗೌನ್ ಆಯ್ಕೆ ಮಾಡಿ.
- ಡಿಸೈನ್ಗಳು ನಿಮ್ಮ ವ್ಯಕ್ತಿತ್ವಕ್ಕೆ ಮ್ಯಾಚ್ ಆಗುತ್ತವೆಯೇ ಪರಿಶೀಲಿಸಿ.
- ಕ್ರಿಸ್ಮಸ್ ಸೆಲೆಬ್ರೆಷನ್ಗೆ ಸೂಟ್ ಆಗುವಂತಿರಲಿ.
- ಆಕ್ಸೆಸರೀಸ್ ಕೂಡ ಮ್ಯಾಚ್ ಆಗುವುದು ಅಗತ್ಯ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Christmas Fashion | ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ವೈವಿಧ್ಯಮಯ ವಿನ್ಯಾಸದ ಕ್ರಿಸ್ಮಸ್ ಪಾರ್ಟಿ ಡ್ರೆಸ್