ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೋ ಆರ್ಡ್ ಸೆಟ್ ಲೆಹೆಂಗಾಗಳು (Co Ord Set Lehenga Fashion) ಇದೀಗ ಟ್ರೆಂಡಿಯಾಗಿವೆ. ಹೌದು. ಇದೀಗ ಲೆಹೆಂಗಾಗಳಿಗೂ ಕೋ ಆರ್ಡ್ ಸೆಟ್ ಲುಕ್ ಸಿಕ್ಕಿದ್ದು, ಒಂದೇ ವರ್ಣದ ಲೆಹೆಂಗಾ ಬ್ಲೌಸ್ ಹಾಗೂ ಸ್ಕರ್ಟ್ ಶೇಡ್, ಮಾನೋಕ್ರೋಮ್ ಸ್ಟೈಲಿಂಗ್‌ಗೆ ಸಾಥ್ ನೀಡಿದೆ. ವೈವಿಧ್ಯಮಯ ಡಿಸೈನ್‌ನ ಲೆಹೆಂಗಾಗಳು ಈ ಲುಕ್‌ನಲ್ಲಿ ಬಿಡುಗಡೆಗೊಂಡಿವೆ.
ಸೈಡಿಗೆ ಸರಿದ ಕಾಂಟ್ರಾಸ್ಟ್ ಲೆಹೆಂಗಾ ಸೆಟ್
ಬ್ಲೌಸ್ ಒಂದು ಬಣ್ಣ, ಸ್ಕರ್ಟ್ ಇನ್ನೊಂದು ಬಣ್ಣ, ಅದರೊಂದಿಗೆ ಹೊದಿಯುವ ದುಪಟ್ಟಾ ಮತ್ತೊಂದು ಬಣ್ಣ, ಈ ರೀತಿಯ ನಾರ್ತ್ ಇಂಡಿಯನ್ ಶೈಲಿಯ ಲೆಹೆಂಗಾಗಳು ಕಳೆದ ವೆಡ್ಡಿಂಗ್ ಸೀಸನ್‌ನಲ್ಲಿ ಹಾಗೂ ಫೆಸ್ಟಿವ್ ಸೀಸನ್‌ನಲ್ಲಿ ಚಾಲ್ತಿಯಲ್ಲಿದ್ದವು. ಆದರೆ, ಇದೀಗ ಬಾಲಿವುಡ್ ಸೆಲೆಬ್ರೆಟಿಗಳ ಲಿಸ್ಟ್‌ನಲ್ಲಿ ಮಾನೋಕ್ರೋಮ್ ಶೇಡ್‌ನ ಕೋ ಆರ್ಡ್ ಸೆಟ್ ಲುಕ್ ನೀಡುವ ಲೆಹೆಂಗಾ ಸೆಟ್‌ಗಳು ಸೇರಿವೆ. ಪರಿಣಾಮ, ಬಾಲಿವುಡ್ ಪಾರ್ಟಿಯಿಂದಿಡಿದು, ಫೆಸ್ಟಿವ್ ಪಾರ್ಟಿಯಲ್ಲೂ ಈ ರೀತಿಯ ನಾನಾ ಬಗೆಯ ಕೋ ಆರ್ಡ್ ಸೆಟ್ ಲೆಹೆಂಗಾಗಳು ಕಾಣಿಸಿಕೊಳ್ಳತೊಡಗಿವೆ. ಅಷ್ಟೇಕೆ! ಎಥ್ನಿಕ್ ಲೆಹೆಂಗಾಗಳು ಇಂಡೋ-ವೆಸ್ಟರ್ನ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಇವು ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು, ಟ್ರೆಂಡ್ ಲಿಸ್ಟ್‌ಗೆ ಸೇರಿವೆ.
ದುಪಟ್ಟಾ ಇಲ್ಲದ ಕೋ ಆರ್ಡ್ ಸೆಟ್ ಲೆಹೆಂಗಾ
ಈ ಕೋ ಆರ್ಡ್ ಸೆಟ್ ಲೆಹೆಂಗಾಗಳು ಸದ್ಯಕ್ಕೆ ದುಪಟ್ಟಾ ಇಲ್ಲದೇ ಬರುತ್ತಿವೆ. ಹಾಗಾಗಿ ಇವು ಇಂಡೋ-ವೆಸ್ಟರ್ನ್ ಲುಕ್ ಪಡೆದಿವೆ. ಬೇಕಾದಾಗ ದುಪಟ್ಟಾ ಮ್ಯಾಚ್ ಮಾಡಿ ಎಥ್ನಿಕ್ ಲುಕ್ ಪಡೆಯಬಹುದು, ಇಲ್ಲವಾದಲ್ಲಿ ವೆಸ್ಟರ್ನ್ ಲುಕ್‌ನಂತೆ ಬಿಂಬಿಸುತ್ತವೆ. ಅವುಗಳ ಡಿಸೈನ್‌ನ ಆಧಾರದ ಮೇಲೆ ಇವಕ್ಕೆ ಸ್ಟೈಲಿಂಗ್ ಮಾಡಬಹುದು ಎನ್ನುತ್ತಾರೆ ಸ್ಟೈಲಿಂಗ್ ಎಕ್ಸ್‌ಪರ್ಟ್ ರೀಟಾ. ಅವರ ಪ್ರಕಾರ, ಕೋ ಆರ್ಡ್ ಸೆಟ್ ಲೆಹೆಂಗಾಗಳು ಆದಷ್ಟೂ ಗ್ರ್ಯಾಂಡ್ ಆಗಿರಕೂಡದು. ಆಗಷ್ಟೇ ಅವಕ್ಕೆ ಇಂಡೋ-ವೆಸ್ಟರ್ನ್ ಲುಕ್ ನೀಡಬಹುದು ಎನ್ನುತ್ತಾರೆ.
ಕೋ ಆರ್ಡ್ ಸೆಟ್ ಲೆಹೆಂಗಾ ಸ್ಟೈಲಿಂಗ್‌ಗೆ 7 ಟಿಪ್ಸ್
- ಕೋ ಆರ್ಡ್ ಸೆಟ್ ಲೆಹೆಂಗಾಗಳ ಪ್ರಿಯರು ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿದಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಬಹುದು.
- ಆದಷ್ಟೂ ಇಂಡೋ-ವೆಸ್ಟರ್ನ್ ಲುಕ್ ನೀಡುವ ವಿನ್ಯಾಸದ ಲೆಹೆಂಗಾ ಆಯ್ಕೆ ಮಾಡಿ.
- ಎಥ್ನಿಕ್ ಲುಕ್ ನೀಡುವುದಾದಲ್ಲಿ ಪ್ರತ್ಯೇಕವಾಗಿ ಮ್ಯಾಚ್ ಆಗುವ ದುಪಟ್ಟಾ ಖರೀದಿಸಿ, ಧರಿಸಿ.
- ವೆರೈಟಿ ಬ್ಲೌಸ್ ಸ್ಲೀವ್ ಡಿಸೈನ್‌ನ ಲೆಹೆಂಗಾಗಳು ಇಂದು ಬೇಡಿಕೆ ಪಡೆದುಕೊಂಡಿವೆ.
- ನಿಮ್ಮ ಪರ್ಸನಾಲಿಟಿಗೆ ಹೊಂದುವಂತಹ ಕೋ ಆರ್ಡ್ ಸೆಟ್ ಆಯ್ಕೆ ಮಾಡಿ.
- ಪಿಂಕ್, ಆರೆಂಜ್, ಪಿಸ್ತಾ ಸೇರಿದಂತೆ ಪಾಸ್ಟೆಲ್ ಶೇಡ್ನವು ಹೆಚ್ಚು ಚಾಲ್ತಿಯಲ್ಲಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Tote Bags Fashion: ರೂಪಾಂತರಗೊಂಡ ಟೊಟ್ ಬ್ಯಾಗ್ ಫ್ಯಾಷನ್!