Site icon Vistara News

Colombo Fashion Week: ಕೊಲೊಂಬೊ ಫ್ಯಾಷನ್‌ ವೀಕ್‌ನಲ್ಲಿ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ

Colombo fashion week

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೊಲೊಂಬೊ ಫ್ಯಾಷನ್‌ ವೀಕ್‌ನಲ್ಲಿ (Colombo Fashion Week) ಡಿಸೈನರ್ಸ್‌, ಮಾಡೆಲ್ಸ್‌ ಹಾಗೂ ಫ್ಯಾಷನ್‌ಗೆ ಸಂಬಂಧಿಸಿದ ವ್ಯಕ್ತಿಗಳ ಸಮಾಗಮವೇ ಆಗಿತ್ತು. ಪ್ರತಿವರ್ಷದಂತೆ ಈ ವರ್ಷವೂ ನಡೆದ ಈ ಫ್ಯಾಷನ್‌ ವೀಕ್‌ನಲ್ಲಿ ಅಲ್ಲಿನ ಸ್ಥಳೀಯ ಫ್ಯಾಷನ್‌ ಕ್ಷೇತ್ರದ ಕುರಿತಂತೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದ ಡಿಸೈನರ್‌ಗಳು ಹಾಗೂ ಮಾಡೆಲ್‌ಗಳು ಭಾಗವಹಿಸಿ, ಕ್ಷೇತ್ರಕ್ಕೆ ಸಂಬಂಧಿಸಿದ ಕಾಯಕ್ರಮಗಳಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಕನ್ನಡಿಗರಾದ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ಪಾಲ್ಗೊಂಡಿದ್ದರು. ಈ ಶೋನಲ್ಲಿ ಭಾಗವಹಿಸಿದ್ದ ನಾನಾ ಡಿಸೈನರ್‌ಗಳು ಹಾಗೂ ಮಾಡೆಲ್‌ಗಳ ಕುರಿತಂತೆ ಪ್ರಸಾದ್‌ ಬಿದ್ದಪ್ಪ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ವರದಿ.

ಚಿತ್ರಗಳು : ಕೊಲೊಂಬೊ ಫ್ಯಾಷನ್‌ ವೀಕ್‌

ಕೊಲೊಂಬೊ ಫ್ಯಾಷನ್‌ ವೀಕ್‌ ಬಗ್ಗೆ ಪ್ರಸಾದ್‌ ಬಿದ್ದಪ್ಪ ಮಾತು

ಕೊಲೊಂಬೊ ಫ್ಯಾಷನ್‌ ವೀಕ್‌ನಲ್ಲಿ (Colombo Fashion Week) ಅಲ್ಲಿನ ಸ್ಥಳೀಯ ಡಿಸೈನರ್‌ ಆದ ದಿಮಂಥು ಸಹಾಬಂಧು ಅವರ ಡಿಸೈನರ್‌ವೇರ್‌ನಲ್ಲಿ ಎಲ್ಲರನ್ನು ಸೆಳೆದದ್ದು ಮಾಡೆಲ್‌ಗಳು ಧರಿಸಿದ್ದ ಗೌನ್‌ಗಳು. ಎಂಬ್ರಾಯ್ಡರಿ ಹಾಗೂ ಕಲಾಕುಸುರಿ ಹೊಂದಿದ ಇವರ ಡಿಸೈನರ್‌ವೇರ್‌ಗಳು ಮನಮೋಹಕವಾಗಿದ್ದವು. ಇನ್ನು ನಯನಿಕಾ ಚಟರ್ಜಿ ಅವರ ಕೊರಿಯಾಗ್ರಾಫಿ ಕೂಡ ಎಲ್ಲರ ಮನ ಸೆಳೆದಿತ್ತು ಎಂದು ಪ್ರಸಾದ್‌ ಬಿದ್ದಪ್ಪ ಅವರು ಅಭಿಪ್ರಾಯ ಪಟ್ಟಿದ್ದು, ಎಲ್ಲರಿಗಿಂತ ಇವರ ಡಿಸೈನರ್‌ವೇರ್‌ಗಳು ಮನಮೋಹಕವಾಗಿದ್ದವು ಎಂದು ಅಭಿಪ್ರಾಯಪಟ್ಟಿದ್ದಾರೆ.

ಫ್ಯಾಷನ್‌ ವೀಕ್‌ನಲ್ಲಿ ಪ್ರಸಾದ್‌ ಬಿದ್ದಪ್ಪ ಸ್ಟೈಲ್‌ ಸ್ಟೇಟ್‌ಮೆಂಟ್‌

ಈ ಬಾರಿ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ಅವರ ಸ್ಟೈಲ್‌ ಸ್ಟೇಟ್‌ಮೆಂಟ್‌ ಕೊಂಚ ವಿಭಿನ್ನವಾಗಿತ್ತು. ಲೆಯರ್‌ ಜಾಕೆಟ್‌ನಲ್ಲಿ ಕಾಣಿಸಿಕೊಂಡ ಅವರು ಶೈನಿಂಗ್‌ ಸ್ನೀಕರ್‌ನಲ್ಲಿದ್ದರು. ಸ್ಪೆಕ್ಟಾಕಲ್‌ ಜೊತೆಗೆ ನೆಕ್‌ಪೀಸ್‌ ಕೂಡ ಧರಿಸಿದ್ದರು. ಸ್ಲಿಂಗ್‌ ಬ್ಯಾಗ್‌ ಟ್ರಾವೆಲಿಂಗ್‌ನಲ್ಲಿರುವುದನ್ನು ನೆನಪಿಸುವಂತಿತ್ತು. ಬ್ಲಾಕ್‌ ಶೇಡ್‌ ಸಮ್ಮರ್‌ ಫ್ಯಾಷನ್‌ ಮರೆಸಿತ್ತು. ಡ್ರೆಸ್‌ಕೋಡ್‌ ಕಂಪ್ಲೀಟ್‌ ಡಿಫರೆಂಟ್‌ ಲುಕ್‌ ನೀಡಿತ್ತು.

ಅಬ್ರಾಹಂ ಮತ್ತು ಠಾಕೂರ್‌ ಉಪಸ್ಥಿತಿ

ನಮ್ಮ ಉದ್ಯಾನನಗರಿಯ ಖ್ಯಾತ ಫ್ಯಾಷನ್‌ ದಿಗ್ಗಜರಾದ ಅಬ್ರಾಹಂ ಹಾಗೂ ಠಾಕೂರ್‌ ಅವರು ಕೊಲೊಂಬೊ ಫ್ಯಾಷನ್‌ ವೀಕ್‌ನ ಮೊದಲ ದಿನದ ಶೋನಲ್ಲಿ ಉಪಸ್ಥಿತರಿದ್ದರು. ಅಲ್ಲಿನ ಖ್ಯಾತ ಡಿಸೈನರ್‌ ದಿಮಂಥು ಸಹಬಂದು ಅವರೊಂದಿಗೆ ಅಭಿನಂದಿಸಲಾಯಿತು. ಶ್ರೀಲಂಕಾ ಫ್ಯಾಷನ್‌ ಡಿಸಯನ್‌ ಇಂಡಸ್ಟ್ರೀಯನ್ನು ಪ್ರಮೋಟ್‌ ಮಾಡುವ ಸಲುವಾಗಿ ಈ ಶೋಗಳನ್ನು ಹಮ್ಮಿಕೊಳ್ಳಲಾಗಿತ್ತು.

ಫಿನಾಲೆಯಲ್ಲಿ ಖ್ಯಾತ ಡಿಸೈನರ್‌ ತರುಣ್‌ ತೆಹ್ಲಿಯಾನಿ

ಫಿನಾಲೆಯ ದಿನ ಖ್ಯಾತ ಡಿಸೈನರ್‌ ತರುಣ್‌ ತೆಹ್ಲಿಯಾನಿ ಭಾಗವಹಿಸಿದ್ದರು. ಇಂಡಿಯನ್‌ ಹೆರಿಟೆಜ್‌ ಪ್ರತಿಬಿಂಬಿಸುವ ಡಿಸೈನ್‌ಗಳನ್ನು ಖ್ಯಾತಿಗಳಿಸಿದ ಕೀತಿ ಇವರಿಗೆ ಸಲ್ಲುತ್ತದೆ. ಕೊಲೊಂಬೋ ಫ್ಯಾಷನ್‌ ವೀಕ್‌ನ ಎಲ್ಲಾ ಕಲೆಕ್ಷನ್‌ಗಳನ್ನು ನೋಡಿ ಹಾಡಿ ಹೊಗಳಿದರು.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್‌ ಸೀಸನ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಡಿಸೈನರ್‌ ಮಾಟಿ

Exit mobile version