ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಸ್ಟ್ರೀಟ್ ಸ್ಟೈಲ್ ಫ್ಯಾಷನ್‌ನಲ್ಲಿ (Winter Fashion) ಫೇಕ್ ಫರ್ ಜಾಕೆಟ್ ಹಾಗೂ ಕೋಟ್‌ಗಳು ಎಂಟ್ರಿ ನೀಡಿವೆ. ಸಂಜೆ ವೇಳೆಯ ಸ್ಟ್ರೀಟ್ ಫ್ಯಾಷನ್‌ಗೆ ಸೇರಿವೆ. ಟ್ರಾವೆಲಿಂಗ್ ಹಾಗೂ ಔಟಿಂಗ್ ಫ್ಯಾಷನ್‌ನಲ್ಲೂ ಎಂಟ್ರಿ ಪಡೆದಿವೆ.
“ಇದೀಗ ನೋಡಲು ಥೇಟ್ ಫರ್ ಎಂದೆನಿಸುವ ಇಮಿಟೇಷನ್ ಅಥವಾ ಫೇಕ್ ಫರ್ ಜಾಕೆಟ್ ಹಾಗೂ ಕೋಟ್‌ಗಳು ಆಕರ್ಷಕ ಕಲರ್‌ಫುಲ್ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಸೆಲೆಬ್ರೆಟಿ ಲುಕ್ ನೀಡುವ ಇವು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ದೊರೆಯುತ್ತಿವೆ. ಕಾಲರ್ ಡಿಸೈನ್‌ನಿಂದಿಡಿದು, ಇಡೀ ಜಾಕೆಟ್ ಫರ್‌ನಿಂದ ಆವರಿಸಿರುವ ಡಿಸೈನ್‌ಗಳು ಟ್ರೆಂಡಿಯಾಗಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ನಾದನ್ ಕೌರ್. ಅವರ ಪ್ರಕಾರ, ಈ ಫೇಕ್ ಫರ್ ಜಾಕೆಟ್ ಹಾಗೂ ಕೋಟ್‌ಗಳು ಮೊದಲೆಲ್ಲಾ ಟ್ರಾವೆಲಿಂಗ್‌ಗೆ ಮಾತ್ರ ಸೀಮಿತವಾಗಿದ್ದವು. ಇದೀಗ ಪ್ರತಿನಿತ್ಯದ ಸ್ಟ್ರೀಟ್ ಸ್ಟೈಲಿಂಗ್‌ನಲ್ಲೂ ಬಂದಿವೆ.
ಟ್ರೆಂಡ್‌ನಲ್ಲಿರುವ ಫರ್ ಜಾಕೆಟ್ಸ್ /ಕೋಟ್ಸ್
ಫರ್ರಿ ಬಾಂಬರ್, ಕಾಲರ್ ಫರ್ ಜಾಕೆಟ್, ಕ್ಲಾಸಿಕ್ ಫರ್ ಕೋಟ್, ಟೆಡ್ಡಿ ಪೀ ಕೋಟ್, ಫ್ಲಫ್ಫಿ ಜಾಕೆಟ್, ಶಿಯರ್ಲಿಂಗ್ ಜಾಕೆಟ್, ಜಿಯಾಮೆಟ್ರಿಕ್ ಫರ್ ಕೋಟ್, ಮಲ್ಟಿಟೋನಲ್ ಫಾಕ್ಸ್ ಫರ್ ಕೋಟ್, ರಾಬಿಟ್ ಫರ್ ಕೋಟ್, ಒವರ್‌ಸೈಝ್ ಫರ್ ಕೋಟ್ಸ್ ಸೇರಿದಂತೆ ನಾನಾ ಬಗೆಯವು ಈ ಸೀಸನ್‌ನ ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಕೆಲವು ಜಾಕೆಟ್‌ಗಳು ಯುವತಿಯರನ್ನು ಯುವಕರನ್ನು ಸೆಳೆದಿವೆ. ಬಹುತೇಕ ಫರ್ ಜಾಕೆಟ್‌ಗಳು ಫೆಮಿನೈನ್ ಲುಕ್ ನೀಡುವುದರಿಂದ ಹುಡುಗರು ಈ ಬಾರಿ ಈ ರೀತಿಯ ಜಾಕೆಟ್ ಧರಿಸುವುದರಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಅಮಿತ್. ಅವರು ಹೇಳುವಂತೆ, ಯುವಕರು ಧರಿಸಿದರೂ ಔಟಿಂಗ್ ಹಾಗೂ ಪ್ರವಾಸದಲ್ಲಿ ಮಾತ್ರ ಧರಿಸುವುದು ಕಂಡು ಬಂದಿದೆ. ಹಾಗಾಗಿ ಇದು ಯುವತಿಯರ ಲಿಸ್ಟ್‌ಗೆ ಸೇರಿದೆ ಎನ್ನಬಹುದು.
ಬಾರ್ಬಿ ಲುಕ್ ನೀಡುವ ಪಿಂಕ್ ಫರ್ ಜಾಕೆಟ್
ವಿಂಟರ್‌ನಲ್ಲಿ ಇದೀಗ ಬಾರ್ಬಿ ಲುಕ್ ನೀಡುವ ಪಿಂಕ್ ಫರ್ ಜಾಕೆಟ್‌ಗಳು ಹೆಚ್ಚು ಹುಡುಗಿಯರನ್ನು ಚಿಕ್ಕ ಹೆಣ್ಣುಮಕ್ಕಳನ್ನು ಸೆಳೆದಿದೆ. ಅದರಲ್ಲೂ ಕ್ರಾಪ್ ಆಗಿರುವ ಪಿಂಕ್ ಫೇಕ್ ಫರ್ ಜಾಕೆಟ್‌ಗಳು ಹೆಚ್ಚು ಟ್ರೆಂಡಿಯಾಗಿವೆ ಎಂಬುದು ಫ್ಯಾಷನಿಸ್ಟ್‌ಗಳ ಅಭಿಪ್ರಾಯ.
ಫೇಕ್ ಫರ್ ಜಾಕೆಟ್ ಬಂದಿದ್ದು ಯಾಕೆ?
ಬಹಳಷ್ಟು ರಾಷ್ಟ್ರಗಳಲ್ಲಿ ಒರಿಜಿನಲ್ ಫರ್ ಜಾಕೆಟ್‌ಗಳು ನಿಷೇಧಗೊಂಡಿವೆ. ಹಾಗಾಗಿ ಫೇಕ್ ಅಂದರೇ, ಆರ್ಟಿಫಿಷಿಯಲ್ ಫ್ಯಾಬ್ರಿಕ್‌ನಲ್ಲಿ ಮಾಡಿದ ಇಮಿಟೇಡ್ ಫರ್ ಜಾಕೆಟ್‌ಗಳು ಫ್ಯಾಷನ್ ಲೋಕಕ್ಕೆ ಎಂಟ್ರಿ ನೀಡಿವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪಟ್ರ್ಸ್
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: New Year Fashion 2024 : ಈ ವರ್ಷ ಟ್ರೆಂಡಿಯಾಗಲಿರುವ ವೆಸ್ಟರ್ನ್ ವೇರ್ಸ್ ಡಿಟೇಲ್ಸ್ ಇಲ್ಲಿದೆ!