Site icon Vistara News

Colour Kajal Beauty Trend: ಕಂಗಳ ಸೌಂದರ್ಯಕ್ಕೆ ಬಂತು ಕಲರ್‌ ಕಾಡಿಗೆ ಪೆನ್ಸಿಲ್‌

Colour Kajal Beauty Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಾಡಿಗೆ ಜಾಗಕ್ಕೆ ಕಲರ್‌ಫುಲ್‌ ಕಾಡಿಗೆ ಅಥವಾ ಕಾಜಲ್‌ (Colour Kajal Beauty Trend) ಪೆನ್ಸಿಲ್‌ಗಳು ಲಗ್ಗೆ ಇಟ್ಟಿವೆ. ಹಾಗೆಂದು ಇವು ಡಾರ್ಕ್ ಶೇಡ್‌ನವಲ್ಲ! ಬಣ್ಣ ಬಣ್ಣದ ಕಣ್ಣಿಗೆ ಹಚ್ಚುವ ಕಾಡಿಗೆ ಪೆನ್ಸಿಲ್‌ಗಳಿವು. ಹೌದು. ಮೊದಲೆಲ್ಲಾ ಕಣ್ಣಿಗೆ ಕಪ್ಪು ಕಾಡಿಗೆ ಚೆಂದ ಎಂಬಂತಿದ್ದ ಬ್ಯೂಟಿ ಕಾನ್ಸೆಪ್ಟ್‌ ಇದೀಗ ನಿಧಾನಗತಿಯಲ್ಲಿ ಮಾಯವಾಗುತ್ತಿದೆ. ಈ ಜನರೇಷನ್‌ಗೆ ತಕ್ಕಂತೆ ಕಣ್ಣುಗಳ ಸೌಂದರ್ಯದ ಥೀಮ್‌ ಕೂಡ ಬದಲಾಗಿದೆ. ಕಂಗಳನ್ನು ಕಲರ್‌ಫುಲ್‌ ಆಗಿಸುತ್ತಿವೆ.

ಕಲರ್‌ ಕಾಡಿಗೆ ಪೆನ್ಸಿಲ್‌ ಜಾದೂ

ಅಂದಹಾಗೆ, ಕಾಡಿಗೆಯಂತೆಯೇ ಇವು ಕೂಡ ಕೆಲಸ ನಿರ್ವಹಿಸುತ್ತವೆ. ಆದರೆ, ಇವುಗಳು ನೋಡಲು ಡಿಫರೆಂಟ್‌ ಆಗಿರುವುದರೊಂದಿಗೆ ಸ್ಮಡ್ಜ್‌ ಪ್ರೂಫ್‌ ಅಥವಾ ವಾಟರ್‌ ಪ್ರೂಫ್‌ ಆಗಿರುತ್ತವೆ. ಕಾಡಿಗೆ ಪೆನ್ಸಿಲ್‌, ಕಾಡಿಗೆ ಕ್ರಯಾನ್ಸ್, ಐ ಲೈನರ್‌ನಂತಹ ಕಾಡಿಗೆ ಹೀಗೆ ಕಾಡಿಗೆ ಪೆನ್ಸಿಲ್‌ಗಳು ನಾನಾ ರೂಪ ಬದಲಿಸಿವೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಲರ್‌ ಕಾಜಲ್‌ಗಳು, ಪೆನ್ಸಿಲ್‌ ಅಥವಾ ನಿಬ್‌ ಇರುವಂತಹ ಪೆನ್ಸಿಲ್‌ ಪೆನ್‌ ಹಾಗೂ ಸ್ಕೆಚ್‌ ಪೆನ್ ರೂಪದಲ್ಲಿ ಬಂದಿವೆ. ಸಿಂಪಲ್‌ ಆಗಿ ಹೇಳಬೇಕೆಂದರೇ, ಅತಿ ಸುಲಭವಾಗಿ ಬಳಸಬಹುದಾದ ಕಾನ್ಸೆಪ್ಟ್‌ನಲ್ಲಿ ಆಗಮಿಸಿವೆ. ಮೊದಲಿನಂತೆ ಹರಡುವುದಿಲ್ಲ. ಮಳೆಯಲ್ಲಿ ನೆನೆದರೂ ಕರಗುವುದಿಲ್ಲ.

ವೈಬ್ರೆಂಟ್‌ ಐ ಪೆನ್ಸಿಲ್‌ಗಳ ಮೇಕಪ್‌ ಜಾದೂ

ಉಡುಪಿಗೆ ಮ್ಯಾಚ್‌ ಮಾಡುವ ಬಣ್ಣದ ಕಾಂಟ್ರಸ್ಟ್‌ ಶೇಡ್‌ಗಳಲ್ಲೂ ದೊರೆಯುತ್ತಿವೆ. ಪರ್ಪಲ್‌, ಕೊಬಾಲ್ಟ್‌ ಬ್ಲ್ಯೂ, ಪೀಚ್‌ ಪಿಂಕ್‌, ಸಿಲ್ವರ್‌, ವೈಟ್‌ ಹೀಗೆ ನಾನಾ ವರ್ಣಗಳಲ್ಲಿ ದೊರೆಯುತ್ತಿವೆ. ವೈಬ್ರೆಂಟ್‌ ಶೇಡ್‌ಗಳನ್ನು ಮೊದಲೆಲ್ಲಾ ಕೇವಲ ಮಾಡೆಲ್‌ಗಳು ಫ್ಯಾಷನ್‌ ಕ್ಷೇತ್ರದಲ್ಲಿ ಬಳಸುತ್ತಿದ್ದರು. ಇದೀಗ ಸಾಮಾನ್ಯ ಸ್ತ್ರೀಯರು ಬಳಸಲಾರಂಭಿಸಿದ್ದಾರೆ. ಆದರೆ, ಎವರ್‌ಗ್ರೀನ್‌ ಕಪ್ಪು ಬಣ್ಣದ ಕಾಡಿಗೆ ಇಂದಿಗೂ ಟ್ರೆಂಡ್‌ನಲ್ಲೆ ಇದೆ. ಆದರೆ, ಡ್ರೆಸ್‌ಗಳ ಮ್ಯಾಚಿಂಗ್‌ ತಕ್ಕಂತೆ ಬದಲಿಸುವುದು ಸಾಮಾನ್ಯವಾಗತೊಡಗಿದೆ ಎನ್ನುತ್ತಾರೆ ಮೇಕಪ್‌ ಆರ್ಟಿಸ್ಟ್‌ಗಳು.

ಕಂಗಳಿಗೆ ಹೀಗೆ ಬಳಸಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Denim Gown Fashion : ಡೆನಿಮ್‌ ಪ್ರೇಮಿಗಳ ಸ್ಟೈಲಿಂಗ್‌ಗೆ ಬಂತು ಟ್ರೆಂಡಿ ಗೌನ್ಸ್

Exit mobile version