ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಣ್ಣ ಬಣ್ಣದ ವೈಬ್ರೆಂಟ್ ಶೇಡ್‌ನ ಶೂಗಳು ಇದೀಗ (Colour Shoes Fashion) ಫ್ಯಾಷನ್ ಟ್ರೆಂಡ್‌ನಲ್ಲಿವೆ. ಧರಿಸಿದಾಗ ಎದ್ದು ಕಾಣುವಂತಹ ಕಲರ್‌ನವು ಇದೀಗ ಹುಡುಗ-ಹುಡುಗಿಯರನ್ನು ಸೆಳೆದಿವೆ. ವೆಸ್ಟರ್ನ್ ಹಾಗೂ ಕ್ಯಾಶುವಲ್ ಲುಕ್ ನೀಡುವ ಈ ಶೂಗಳು ಮಿಸ್ ಮ್ಯಾಚ್ ಫ್ಯಾಷನ್‌ನಲ್ಲಿವೆ. ಹೌದು. ಮೊದಲಿನಂತೆ ಡಿಸೆಂಟ್ ಬಣ್ಣದ ಶೂಗಳನ್ನು ಧರಿಸುವ ಕಾಲ ಈಗಿಲ್ಲ! ಈಗೇನಿದ್ದರೂ ಕಲರ್‌ಫುಲ್ ಶೂಗಳನ್ನು ಧರಿಸುವ ಜೆನ್ ಜಿ ಕಾಲ!
ಹುಡುಗ-ಹುಡುಗಿಯರ ಕ್ರೇಜ್!
ಮೊದಲೆಲ್ಲಾ ಬ್ಲ್ಯಾಕ್, ಬ್ರೌನ್, ವೈಟ್ ಹೆಚ್ಚೆಂದರೆ ರೆಡ್ ಶೂಗಳನ್ನು ಮಾತ್ರ ಧರಿಸುತ್ತಿದ್ದರು. ಇದೀಗ ಈ ಕಾನ್ಸೆಪ್ಟ್‌ಗೆ ತಿಲಾಂಜಲಿ ಬಿದ್ದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಶೂ ಧರಿಸುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಔಟಿಂಗ್, ಟ್ರಾವೆಲಿಂಗ್, ಸ್ಪೋಟ್ರ್ಸ್, ಜಾಗಿಂಗ್, ವಾಕಿಂಗ್, ಜಂಪಿಂಗ್ ಎಂದೆಲ್ಲಾ ವೆರೈಟಿ ಶೂಗಳು ನಾನಾ ಬ್ರಾಂಡ್‌ಗಳಲ್ಲಿ ಆಗಮಿಸಿವೆ. ಒಂದೊಂದು ಕೆಲಸಕ್ಕೂ ಒಂದೊಂದು ಬಗೆಯ ಶೂಗಳು ಲಭ್ಯ. ಆಯಾ ಕೆಟಗರಿಗೆ ತಕ್ಕಂತೆ ಶೂಗಳು ದೊರಕುತ್ತಿರುವುದು ಜೆನ್ ಜಿ ಹುಡುಗ-ಹುಡುಗಿಯರನ್ನು ಸೆಳೆದಿವೆ. ಇದಕ್ಕೆ ಪೂರಕ ಎಂಬಂತೆ, ಒಬ್ಬರ ಬಳಿ ಕನಿಷ್ಠ ಪಕ್ಷ ಎಂದರೂ ಮೂರ್ನಾಲ್ಕು ಬಗೆಯವು ಇರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಸಮೀಕ್ಷೆಯೊಂದರ ಪ್ರಕಾರ, ಇಂದು ಜೆನ್ ಜಿ ಹುಡುಗರ ಹತ್ತಿರ ಇರುವ ಶೂ ಕಲೆಕ್ಷನ್‌ನಂತೆ ಹುಡುಗಿಯರ ಬಳಿಯು ಇರುತ್ತದಂತೆ. ಅದರಲ್ಲೂ ಕಾಲೇಜು ಹುಡುಗ-ಹುಡುಗಿಯರು ಶೂ ಪ್ರಿಯರು ಎನ್ನಲಾಗಿದೆ.
ಟ್ರೆಂಡ್‌ನಲ್ಲಿರುವ ನಾನಾ ಬಗೆಯ ಕಲರ್ ಶೂಗಳು
ಗ್ರೇ, ಗ್ರೀನ್, ಆರೆಂಜ್, ಪರ್ಪಲ್, ಬ್ಲ್ಯೂ, ರೆಡ್, ಯೆಲ್ಲೋ, ಪಿಂಕ್ ಹೀಗೆ ಮಿಕ್ಸ್ ಮ್ಯಾಚ್ ಶೇಡ್‌ಗಳು ನಾನಾ ಬ್ರಾಂಡ್‌ಗಳ ಸ್ನೀಕರ್ಸ್, ಲೂಫರ್ಸ್, ಬೋಟ್ ಶೇಪ್, ಮೊಕಾಸಿನ್, ಕ್ಯಾನ್ವಾಸ್‌ನಲ್ಲಿ ಲಭ್ಯ. ಇನ್ನು ಕೆಲವು ಪ್ರತಿಷ್ಠಿತ ಬ್ರಾಂಡ್‌ಗಳ ರಿಪ್ಲಿಕಾಗಳು ಇದೀಗ ಸ್ಟ್ರೀಟ್ ಶಾಪ್‌ಗಳಲ್ಲಿ ದೊರೆಯಲಾರಂಭಿಸಿವೆ. ನೋಡಲು ಅದೇ ರೀತಿ ಇದ್ದರೂ, ಕ್ವಾಲಿಟಿ ಬಳಕೆದಾರರಿಗೆ ಬಿಟ್ಟಿದ್ದು. ವೆಲ್ಕ್ರಾನ್, ಲೇಸ್ ಹೀಗೆ ಕಲರ್‌ಫುಲ್ ಲೇಸ್‌ನೊಂದಿಗೆ ಇರುವ ಶೂಗಳು ವೆರೈಟಿ ವಿನ್ಯಾಸದಲ್ಲಿ ಟ್ರೆಂಡ್ ಸೃಷ್ಟಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಚರ್ಕವರ್ತಿ.
ಮಿಸ್ ಮ್ಯಾಚ್ ಕಲರ್ ಶೂಗಳ ಆಯ್ಕೆಗೆ ಸಲಹೆ
- ಇದೀಗ ಮಿಸ್ ಮ್ಯಾಚ್ ಕಲರ್ ಶೂಗಳು ಟ್ರೆಂಡ್‌ನಲ್ಲಿವೆ.
- ಔಟಿಂಗ್ ಹಾಗೂ ಟ್ರಾವೆಲಿಂಗ್ಗೆ ಇವು ಸಖತ್ ಚೆನ್ನಾಗಿ ಕಾಣುತ್ತವೆ.
- ಹುಡುಗ-ಹುಡುಗಿಯರ ಶೂ ವಿನ್ಯಾಸ ಕಂಪ್ಲೀಟ್ ಡಿಫರೆಂಟ್ ಆಗಿರುತ್ತವೆ.
- ಕ್ಯಾಶುವಲ್ ಉಡುಪುಗಳಿಗೆ ಬೆಸ್ಟ್ ಮ್ಯಾಚಿಂಗ್
- ವೈಬ್ರೆಂಟ್ ಕಲರ್‌ನವು ಫಂಕಿ ಲುಕ್ ನೀಡುತ್ತವೆ.
- ಎಥ್ನಿಕ್ ಲುಕ್ಗೆ ಮ್ಯಾಚ್ ಮಾಡದಿರಿ.
- ವೆಸ್ಟೆರ್ನ್ ಔಟ್ಫಿಟ್ಗೆ ಹೇಳಿಮಾಡಿಸಿದ ಫುಟ್ವೇರ್ ಫ್ಯಾಷನ್ ಇದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಕೆಎಲ್‌ಇ ಕಾಲೇಜಿನ ಪ್ರತಿಬಿಂಬದಲ್ಲಿ ಆಕರ್ಷಕ ಫ್ಯಾಷನ್ ಶೋ