ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವಿಂಟರ್ ಸೀಸನ್ನಲ್ಲೂ (Winter Fashion) ಹಾಟ್ ಲುಕ್ ನೀಡುವ ಉಲ್ಲನ್ನ ಕ್ರಾಪ್ಡ್ ಉಲ್ಲನ್ ನಿಟ್ಟೆಡ್ ಸ್ವೆಟರ್ಗಳು ವೈಬ್ರೆಂಟ್ ಶೇಡ್ಸ್ನಲ್ಲಿ ಕಾಲಿಟ್ಟಿದ್ದು, ಗ್ಲಾಮರ್ ಲುಕ್ ಬಯಸುವ ಜೆನ್ ಜಿ ಹುಡುಗಿಯರ ವಾರ್ಡ್ರೋಬ್ ಸೇರಿವೆ. ಲೆಕ್ಕವಿಲ್ಲದಷ್ಟು ಮಿಕ್ಸ್ ಮ್ಯಾಚ್ ಕಾಂಟ್ರಾಸ್ಟ್ ಹಾಗೂ ವಿಂಟರ್ ಮಲ್ಟಿ ಶೇಡ್ಗಳಲ್ಲಿ ಇವು ಬಿಡುಗಡೆಯಾಗಿದ್ದು, ವೈಬ್ರೆಂಟ್ ಶೇಡ್ನವು ಹೆಚ್ಚು ಪ್ರಚಲಿತದಲ್ಲಿವೆ.
ವೈವಿಧ್ಯಮಯ ಕ್ರಾಪ್ ಉಲ್ಲನ್ ಸ್ವೆಟರ್ಸ್
ಫುಲ್ ಸ್ಲೀವ್, ಟರ್ಟಲ್ ನೆಕ್, ಓವರ್ಸೈಝ್, ಕೊರಿಯನ್ ಲೂಸ್ ಸ್ಟೈಲ್, ಕೇಬಲ್ ವೈರ್ ನಿಟ್ಟೆಡ್ ಸ್ಟೈಲ್, ಅಸ್ಸೆಮ್ಮೆಟ್ರಿಕಲ್ ಶೇಪ್ನ ಕ್ರಾಪ್ಡ್ ಉಲ್ಲನ್ ಸ್ವೆಟರ್, ಪುಲ್ಓವರ್ ಸ್ಟೈಲ್, ಹಾಲ್ಟರ್ ನೆಕ್, ಬಾಡಿಕಾನ್ ಟಾಪ್ ಶೈಲಿಯವು ಈ ಸೀಸನ್ನಲ್ಲಿ ಫ್ಯಾಷೆನಬಲ್ ಲುಕ್ಗಾಗಿ ಎಂಟ್ರಿ ನೀಡಿವೆ. ದಪ್ಪನೆಯ ಉಲ್ಲನ್ನಂತೆ ಕಾಣುವ ಈ ಕ್ರಾಪ್ಡ್ ಸ್ವೆಟರ್ಗಳು ಇದೀಗ ಮತ್ತೊಮ್ಮೆ ಟ್ರೆಂಡಿಯಾಗಿವೆ ಎನ್ನುತ್ತಾರೆ ಸ್ಪೆಷಲಿಸ್ಟ್ಗಳು.
ಟಾಪ್ನಂತೆ ಕಾಣುವ ಟ್ರೆಂಡಿ ಡಿಸೈನ್ಸ್
“ಕ್ರಾಪ್ಟ್ ಟಾಪ್ಗಳಂತೆ ಈ ಸೀಸನ್ನಲ್ಲಿ ಇದೀಗ ಕ್ರಾಪ್ಡ್ ಉಲ್ಲನ್ ಸ್ವೆಟರ್ಗಳು ಟ್ರೆಂಡಿಯಾಗಿವೆ. ಟಾಪ್ನಂತಹ ಡಿಸೈನ್ನಲ್ಲಿ ಬಿಡುಗಡೆಗೊಂಡಿರುವುದರಿಂದ ಇವು ಹೆಚ್ಚು ಪಾಪುಲರ್ ಆಗಿವೆ. ಹುಡುಗಿಯರಿಗಂತೂ ಲೆಕ್ಕವಿಲ್ಲದಷ್ಟೂ ಡಿಸೈನ್ನವು ಬಂದಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜಿಂಟಾ. ಅವರ ಪ್ರಕಾರ, ಉಲ್ಲನ್ನವು ದೇಹವನ್ನು ಬೆಚ್ಚಗಿಡುವುದರೊಂದಿಗೆ ಆಕರ್ಷಕವಾಗಿ ಕಾಣುವಂತೆ ಬಿಂಬಿಸುತ್ತವೆ” ಎನ್ನುತ್ತಾರೆ.
ಕ್ರಾಪ್ಡ್ ಉಲ್ಲನ್ ಸ್ವೆಟರ್ ಮಿಕ್ಸ್ ಮ್ಯಾಚ್
- ಯಾವುದೇ ಸೀಸನ್ ಟ್ರೆಂಡ್ನ ಕಲರ್ ಪ್ಯಾಂಟ್ ಜೊತೆಗೆ ಧರಿಸಬಹುದು.
- ಪೆನ್ಸಿಲ್ ಸ್ಕರ್ಟ್ಗೂ ಧರಿಸಬಹುದು.
- ಉಲ್ಲನ್ ಕ್ರಾಪ್ಡ್ ಸ್ವೆಟರ್ ಮೇಲೆ ಹೆಚ್ಚು ಮೆಟಲ್ ಆಕ್ಸೆಸರೀಸ್ ಧರಿಸಕೂಡದು.
- ಟಮ್ಮಿ ಭಾಗ ಪ್ಲಂಪಿಯಿದ್ದಲ್ಲಿ ಹೈ ವೇಸ್ಟ್ ಪ್ಯಾಂಟ್ ಧರಿಸಬಹುದು.
- ಆದಷ್ಟೂ ಮಲ್ಟಿ ಶೇಡ್ ಅನ್ನು ಆಯ್ಕೆ ಮಾಡಿ. ಎಲ್ಲವಕ್ಕೂ ಮ್ಯಾಚ್ ಆಗುತ್ತವೆ.
- ಗುಣಮಟ್ಟದ ಉಲ್ಲನ್ ನಿಟ್ಟೆಡ್ ಕ್ರಾಪ್ಡ್ ಸ್ವೆಟರ್ ಖರೀದಿಸಿ. ಇಲ್ಲವಾದಲ್ಲಿ ಬಬಲ್ ಮೂಡಬಹುದು.
- ಉಲ್ಲನ್ ನಿಟ್ಟೆಡ್ ಕ್ರಾಪ್ಡ್ ಸ್ವೆಟರ್ ಹೆಚ್ಚು ಬೆಚ್ಚಗಿಡುವುದರಿಂದ ಇದರ ಮೇಲೆ ಲೇಯರ್ ಲುಕ್ಗಾಗಿ ಮತ್ತೊಂದನ್ನು ಧರಿಸಕೂಡದು. ಧರಿಸಿದರೂ ತೆಳುವಾಗಿರಬೇಕು.
- ಟಮ್ಮಿ ಭಾಗ ಎಕ್ಸ್ಪೋಸ್ ಆಗುವುದರಿಂದ ಗ್ಲಾಮರಸ್ ಆಗಿ ಕಾಣುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Fashion: ಕಾಲೇಜು ಹುಡುಗಿಯರ ಹೂಡಿ ಫ್ಯಾಷನ್ಗೆ 5 ಸಿಂಪಲ್ ಟಿಪ್ಸ್