ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪುಟ್ಟದಾದ ಕ್ರಾಸ್‌ಬಾಡಿ ಮಿನಿ ಬ್ಯಾಗ್‌ಗಳು (Cross body mini Bags trend) ಇದೀಗ ಟ್ರೆಂಡಿಯಾಗಿವೆ. ಅದರಲ್ಲೂ ಜೆನ್ ಜಿ ಹುಡುಗಿಯರನ್ನು ಇವು ಸವಾರಿ ಮಾಡುತ್ತಿವೆ. ಸದ್ಯಕ್ಕೆ ಹುಡುಗಿಯರ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ದೊಡ್ಡ ಬ್ಯಾಗ್‌ಗಳು ಸೈಡಿಗೆ ಸರಿದಿದ್ದು, ವೆಸ್ಟರ್ನ್ ಉಡುಪಿನೊಂದಿಗೆ ಬಿಂದಾಸ್ ಲುಕ್ ನೀಡುವ ಶೈಲಿಯವು ಟ್ರೆಂಡಿಯಾಗಿವೆ.
ಏನಿದು ಕ್ರಾಸ್‌ಬಾಡಿ ಮಿನಿ ಬ್ಯಾಗ್
ನೋಡಲು ವ್ಯಾಲೆಟ್‌ನಂತೆ ಕಾಣುವ ಅಥವಾ ಕೇವಲ ಮೊಬೈಲ್ ಹಾಗೂ ಬ್ಯಾಂಕ್ ಕಾರ್ಡ್, ಇಲ್ಲವೇ ಒಂದಿಷ್ಟು ಹಣವನ್ನು ಇಡಬಹುದಾದಂತಹ ಪುಟ್ಟ ಪರ್ಸನಂತಹ ಬ್ಯಾಗ್‌ಗಳಿವು. ಬೇಕಿದ್ದಲ್ಲಿ ಇವುಗಳ ಚೈನ್ ತೆಗೆದು ವ್ಯಾಲೆಟ್‌ನಂತೆಯೂ ಬಳಸಬಹುದು. ಇಲ್ಲವಾದಲ್ಲಿ ಅವುಗಳ ಚೈನನ್ನು ಕ್ರಾಸ್ ಬಾಡಿ ಸ್ಟೈಲ್‌ನಲ್ಲಿ ಹಾಕಿ ಉಡುಪಿನೊಂದಿಗೆ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸಾಥ್ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಅಮಿತ್. ಅವರ ಪ್ರಕಾರ, ಇವನ್ನು ಕೆಲವರು ಸ್ಲಿಂಗ್ ಬ್ಯಾಗ್ ಎಂದು ತಪ್ಪಾಗಿ ತಿಳಿಯುತ್ತಾರೆ, ಆದರೆ, ಇವು ಅವಲ್ಲ, ನೋಡಲು ಹಾಗೆಯೇ ಕಂಡರೂ ಆಕರ್ಷಕ ಬೆಲ್ಟ್ ಇಲ್ಲವೇ ಸರದಂತಹ ಚೈನ್‌ಗಳನ್ನು ಹೊಂದಿರುತ್ತವೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಕ್ರಾಸ್‌ಬಾಡಿ ಮಿನಿ ಬ್ಯಾಗ್‌ಗಳು
ವ್ಯಾಲೆಟ್ ಮಿನಿ ಬ್ಯಾಗ್, ಪರ್ಸ್ ಮಿನಿ ಬ್ಯಾಗ್, ಮಿನಿ ವ್ಯಾನಿಟಿ ಬ್ಯಾಗ್, ಮೊಬೈಲ್ ಮಿನಿ ಬ್ಯಾಗ್, ಸಿಲಿಕಾನ್ ಮಿನಿ ಬ್ಯಾಗ್, ಲೆದರ್ ಮಿನಿ ಬ್ಯಾಗ್, ಲೆದರ್ ಬಕೆಟ್ ಮಿನಿಬ್ಯಾಗ್, ಶೋಲ್ಡರ್ ಮಿನಿ ಬ್ಯಾಗ್, ಸ್ಯಾಡಲ್, ವಾಟರ್ ರೆಸಿಸ್ಟಂಟ್ ಸ್ಪೋಟ್ಸ್ ಬ್ಯಾಗ್, ಕ್ಲಿಯರ್ ಬ್ಯಾಗ್ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳಲ್ಲೂ ಇವು ಲಭ್ಯ. ಇನ್ನು ದೊಡ್ಡ ಬ್ರಾಂಡ್‌ಗಳನ್ನು ಕೊಳ್ಳಲಾಗದಿದ್ದವರಿಗೆ ಅದೇ ಬ್ರಾಂಡ್‌ನ ರಿಪ್ಲಿಕಾ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿ ಕೈಗೆಟಕುವ ದರದಲ್ಲಿ ಲಭ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬ್ಯಾಗ್‌ಗಳನ್ನು ಶೋಲ್ಡರ್ ಕಡೆಯಿಂದ ಕ್ರಾಸ್ ಆಗಿ ಹಾಕಿಕೊಂಡಾಗಷ್ಟೇ ಟ್ರೆಂಡಿಯಾಗಿ ಕಾಣಿಸುವುದು ಎನ್ನುತ್ತಾರೆ.
ಕ್ರಾಸ್‌ಬಾಡಿ ಮಿನಿಬ್ಯಾಗ್‌ಗಳ ಆಯ್ಕೆ ಹೀಗಿರಲಿ
- ಕ್ಯಾಶುವಲ್ ಉಡುಪಿಗಾದಲ್ಲಿ ಯಾವುದೇ ಡಿಸೈನ್ ಆದರೂ ಓಕೆ.
- ಟ್ರಾವೆಲಿಂಗ್ ಟೈಮ್ಗಾದಲ್ಲಿ ಆದಷ್ಟೂ ಕ್ಯಾಬಿನೇಟ್ ಇರುವಂತವನ್ನು ಆಯ್ಕೆ ಮಾಡಿ.
- ಔಟಿಂಗ್ ಔಟ್ಫಿಟ್ಸ್ ಜೊತೆಯೂ ಇವು ಮ್ಯಾಚ್ ಆಗುತ್ತವೆ.
- ಈ ಬ್ಯಾಗ್ಗಳ ಬೆಲ್ಟ್ ಅಥವಾ ಚೈನ್ ಆದಷ್ಟೂ ಸಲೀಸಾಗಿ ಬಳಸುವಂತಿರಬೇಕು.
- ಉಡುಪಿಗೆ ಸಿಕ್ಕಿಹಾಕಿಕೊಳ್ಳುವಂತಿರಬಾರದು.
- ಎಥ್ನಿಕ್ ಉಡುಪಿಗೆ ಮ್ಯಾಚ್ ಆಗದು.
- ಕ್ಯಾಶುವಲ್, ವೆಸ್ಟರ್ನ್ ಉಡುಪಿಗೆ ಹೇಳಿ ಮಾಡಿಸಿದ ಬ್ಯಾಗ್ ಇದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Doctors Fashion news: ರ‍್ಯಾಂಪ್ ವಾಕ್ ಮಾಡಿ ಟ್ರೆಂಡ್ ಸೆಟ್ ಮಾಡಿದ ಬೆಂಗಳೂರಿನ ಡಾಕ್ಟರ್ಸ್!