Site icon Vistara News

Dandiya Fashion: ನವರಾತ್ರಿಯ ದಾಂಡಿಯಾ ಸಂಭ್ರಮಕ್ಕೆ ಸಾಥ್‌ ನೀಡುವ 3 ಟ್ರೆಡಿಷನಲ್‌ ಎಥ್ನಿಕ್‌ವೇರ್ಸ್

Dandiya Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದಾಂಡಿಯಾ ಹಾಗೂ ಗರ್ಬಾ ನೃತ್ಯಕ್ಕೆ ಆಕರ್ಷಕವಾಗಿ ಕಾಣುವ ಎಥ್ನಿಕ್‌ವೇರ್‌ಗಳು (Dandiya Fashion) ಈ ಸೀಸನ್‌ನ ಟಾಪ್‌ ಲಿಸ್ಟ್‌ನಲ್ಲಿವೆ. ಹೌದು. ಉತ್ತರ ಭಾರತದ ಟ್ರೆಡಿಷನಲ್‌ ನೃತ್ಯದ ಕಾರ್ಯಕ್ರಮಗಳು ಇದೀಗ ಉದ್ಯಾನನಗರಿಯಲ್ಲೂ ಸಾಮಾನ್ಯವಾಗಿದ್ದು, ಉತ್ತರ-ದಕ್ಷಿಣ ಭಾರತದ ಜನರು ಎಂಬ ಭೇದ-ಭಾವವಿಲ್ಲದೇ ಎಲ್ಲರೂ ಪಾಲ್ಗೊಳ್ಳುವುದು ಸಾಮಾನ್ಯವಾಗಿದೆ. ಇನ್ನು ಇದಕ್ಕೆ ಪೂರಕ ಎಂಬಂತೆ, ನವರಾತ್ರಿಯಲ್ಲಿ ನಡೆಯುವ ಗರ್ಬಾ ಹಾಗೂ ದಾಂಡಿಯಾ ನೃತ್ಯಕ್ಕೆಂದೇ ಟ್ರೆಡಿಷನಲ್‌ ಔಟ್‌ಫಿಟ್‌ಗಳು ನಾನಾ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಅವುಗಳಲ್ಲಿ ಎಂದಿನಂತೆ, ಗಾಗ್ರ -ಚೋಲಿ, ಚನಿಯಾ- ಚೋಲಿ, ಲೆಹೆಂಗಾ ಚುನ್ನಿ ಸೆಟ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.

ಟ್ರೆಡಿಷನಲ್‌ ಉಡುಪುಗಳಿಗೆ ಹೆಚ್ಚಾದ ಬೇಡಿಕೆ

“ದಾಂಡಿಯಾ ಇವೆಂಟ್‌ಗಳಲ್ಲಿ ಪಾಲ್ಗೊಳ್ಳುವವರು ಈ ಎಥ್ನಿಕ್‌ ಡ್ರೆಸ್‌ಕೋಡ್‌ ಪಾಲಿಸಲೇ ಬೇಕು. ಟ್ರೆಡಿಷನಲ್‌ ಔಟ್‌ಫಿಟ್‌ಗಳನ್ನು ಧರಿಸುವುದು ಕಡ್ಡಾಯ. ಹಾಗಾಗಿ ಈ ಸೀಸನ್‌ನಲ್ಲಿ ಟ್ರೆಡಿಷನಲ್‌ ಗಾಗ್ರ, ಲೆಹೆಂಗಾದಂತಹ ಉಡುಪುಗಳನ್ನು ಕೊಳ್ಳುವವರು ಹೆಚ್ಚು. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಗ್ರ್ಯಾಂಡ್‌ ಔಟ್‌ಫಿಟ್‌ಗಳು ಕಾಲಿಟ್ಟಿವೆ. ಹೆವ್ವಿ ಡಿಸೈನ್‌ ಒಳಗೊಂಡಿವೆ“ ಎನ್ನುತ್ತಾರೆ ಮಾರಾಟಗಾರರು.

ಗ್ರ್ಯಾಂಡ್‌ ಲುಕ್‌ ನೀಡುವ ಗಾಗ್ರ ಚೋಲಿ

ಮೂಲತಃ ರಾಜಸ್ಥಾನದ ಸಾಂಪ್ರಾದಾಯಿಕ ಉಡುಪಾದ ಗಾಗ್ರ ಚೋಲಿ ಗ್ರ್ಯಾಂಡ್‌ ವಿನ್ಯಾಸವನ್ನು ಒಳಗೊಂಡಿರುತ್ತದೆ. ಇದೀಗ ಇವುಗಳಲ್ಲಿ ಮಾನೋಕ್ರೋಮ್‌ ಹಾಗೂ ಕಾಂಟ್ರಾಸ್ಟ್ ಎರಡು ಬಗೆಯವು ಲಭ್ಯ. ಅವರವರ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬೇಕು.

ಆಕರ್ಷಕ ಚನಿಯಾ ಚೋಲಿ

ಇನ್ನು ಚನಿಯಾ ಚೋಲಿಯಲ್ಲೂ ನಾನಾ ವಿನ್ಯಾಸದವು ದೊರೆಯುತ್ತವೆ. ನೋಡಲು ಗಾಗ್ರದಂತೆ ಕಂಡರೂ ಡಿಸೈನ್‌ಗಳಲ್ಲಿ ವ್ಯತ್ಯಾ ಸ ಕಾಣಬಹುದು. ಸಾಕಷ್ಟು ಫ್ಲೆರ್‌ ಇರುವಂತಹ ಲಾಂಗ್‌ ಲಂಗ ಇದಾಗಿದ್ದು, ಮಲ್ಟಿ ಕಲರ್‌ ಹೊಂದಿರುತ್ತದೆ. ಇನ್ನು ಚೋಲಿಯು ಅಷ್ಟೇ ತೀರಾ ಗ್ರ್ಯಾಂಡಾಗಿರುತ್ತದೆ.

ದಾಂಡಿಯಾ ಲೆಹೆಂಗಾ ಚುನ್ನಿ

ಸಾಮಾನ್ಯವಾಗಿ ಧರಿಸುವ ಲೆಹೆಂಗಾ ಬೇರೇ, ದಾಂಡಿಯಾದಲ್ಲಿ ಧರಿಸುವ ಲೆಹೆಂಗಾ ಬೇರೆಯದು. ಊಹೆಗೂ ಮೀರಿದ ಹೆವ್ವಿ ಡಿಸೈನ್‌ನ ಲಹೆಂಗಾ ಇದಾಗಿದ್ದು, ಚುನ್ನಿ ಕೂಡ ವಿಶಾಲವಾಗಿರುತ್ತದೆ. ತಿರುಗಿದಾಗ ನೋಡಲು ಆಕರ್ಷಕವಾಗಿ ಕಾಣುತ್ತದೆ. ನೂರು ಜನರ ಮಧ್ಯೆಯೂ ಎದ್ದು ಕಾಣುವಂತೆ ಮಾಡುತ್ತದೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Show News: ಫೋರಂ ಮಾಲ್‌ನಲ್ಲಿ ರ‍್ಯಾಂಪ್‌ ವಾಕ್‌ ಮಾಡಿ ಜನರನ್ನು ಸೆಳೆದ ಮಾಡೆಲ್‌ಗಳು

Exit mobile version