Site icon Vistara News

Dasara Shopping: ದಸರಾ ಸೀಸನ್‌ ಶಾಪಿಂಗ್‌ನಲ್ಲಿ ಎಥ್ನಿಕ್‌ ವೇರ್ಸ್‌ಗೆ ಹೆಚ್ಚಿದ ಬೇಡಿಕೆ

Ethnic Wear

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಎಲ್ಲಿ ನೋಡಿದರೂ ದಸರಾ ಶಾಪಿಂಗ್‌ ಸಂಭ್ರಮ ಮನೆ ಮಾಡಿದೆ. ಈ ಸೀಸನ್‌ನಲ್ಲಿ ಒಂದರ ಹಿಂದೊಂದರಂತೆ ಬರುವ ಸಾಲು ಸಾಲು ಹಬ್ಬಗಳಿಗೆಂದೇ ಎಲ್ಲೆಡೆ ಆಫರ್‌ ಹಾಗೂ ಡಿಸ್ಕೌಂಟ್‌ಗಳ ಸುರಿಮಳೆಯಾಗುತ್ತಿದೆ. ಇದರೊಂದಿಗೆ ಎಥ್ನಿಕ್‌ ಲುಕ್‌ಗೆ ಸಾಥ್‌ ನೀಡುವ ಹೊಸ ಟ್ರೆಂಡಿ ಡಿಸೈನ್‌ಗಳು ಕೂಡ ಎಂಟ್ರಿ ನೀಡಿವೆ. ಚಿಕ್ಕ ಮಕ್ಕಳಿಂದಿಡಿದು ಯುವಕ-ಯುವತಿಯರು ಹಾಗೂ ಹಿರಿಯರವರಿಗಾಗಿ ನಾನಾ ಶೈಲಿಯ ವಿನ್ಯಾಸದ ಎಥ್ನಿಕ್‌ ಡಿಸೈನರ್‌ವೇರ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. ಅಷ್ಟು ಮಾತ್ರವಲ್ಲ, ಒಂದಿಷ್ಟು ನವ ವಿನ್ಯಾಸದ ಸಾಂಪ್ರದಾಯಿಕ ಡಿಸೈನ್‌ನ ಜ್ಯುವೆಲ್ಲರಿಗಳು ಕೂಡ ಮಾನಿನಿಯರನ್ನು ಸೆಳೆಯುತ್ತಿವೆ.

ದಸರಾ ಫ್ಯಾಷನ್‌ನಲ್ಲಿ ಏನಿದೆ?

ಈ ಬಾರಿ ದಸರಾ ಸೀಸನ್‌ಗಾಗಿ ಸಾಕಷ್ಟು ಬಗೆಯ ಎಥ್ನಿಕ್‌ ಲುಕ್‌ ನೀಡುವ ಡಿಸೈನರ್‌ ವೇರ್‌ಗಳು ಆಗಮಿಸಿವೆ. ತೀರಾ ಟ್ರೆಡಿಷನಲ್‌ ಎಂದೆನಿಸದ ಸೆಮಿ ಎಥ್ನಿಕ್‌ ವೇರ್‌ಗಳು ಹುಡುಗಿಯರಿಗಾಗಿ ಕಾಲಿಟ್ಟಿವೆ. ನಾನಾ ಬಗೆಯ ಹಿಸ್ಟಾರಿಕಲ್‌ ಹಾಗೂ ಮೈಥಲಾಜಿಕಲ್‌ ಕಥಾನಕಗಳನ್ನೊಳಗೊಂಡ ಮನಮೋಹಕ ಪ್ರಿಂಟೆಡ್‌ ರೇಷ್ಮೆ ಸೀರೆಗಳು ಮಾನಿನಿಯರನ್ನು ಸೆಳೆಯುತ್ತಿವೆ.

ಇದನ್ನೂ ಓದಿ | Navaratri Yellow Colour Fashion Tips: ನವರಾತ್ರಿ 5 ನೇ ದಿನದ ಹಳದಿ ವರ್ಣದ ಎಥ್ನಿಕ್‌ಲುಕ್‌ ಜಾದೂ

ಇನ್ನು ಹೆವಿ ಡಿಸೈನರ್‌ವೇರ್‌ ವಿಷಯಕ್ಕೆ ಬಂದಲ್ಲಿ, ಗಾಗ್ರ ಹಾಗೂ ಲೆಹೆಂಗಾಗಳಲ್ಲಿಊಹೆಗೂ ಮೀರಿದ ವಿನ್ಯಾಸಗಳು ಲಗ್ಗೆ ಇಟ್ಟಿವೆ. ಹೆಚ್ಚು ಭಾರವೆನಿಸದ ಮನಮೋಹಕ ವರ್ಣದ ಮಲ್ಟಿ ಶೇಡ್‌ನ ಪ್ರಿಂಟೆಡ್‌ ಲೆಹೆಂಗಾ, ಗಾಗ್ರಾ, ಶರಾರ ಸೆಟ್‌, ಸಲ್ವಾರ್‌, ಚೂಡಿದಾರ್‌, ಅನಾರ್ಕಲಿ ಒಂದಕ್ಕಿಂತ ಒಂದು ವಿಭಿನ್ನ ವಿನ್ಯಾಸವನ್ನೊಳಗೊಂಡಿವೆ. ಅದರಲ್ಲೂ ಲೇಯರ್‌ ಲೆಹೆಂಗಾ, ಶೀರ್‌ ಲೆಹೆಂಗಾ ಹಾಗೂ ಮಲ್ಟಿಪಲ್‌ ಶೇಡ್‌ ಲೆಹೆಂಗಾಗಳು ಹುಡುಗಿಯರನ್ನು ಆಕರ್ಷಿಸುತ್ತಿವೆ.

ಪುರುಷರಿಗೆ ಎಥ್ನಿಕ್‌ ಫಾರ್ಮಲ್ಸ್

ಪುರುಷರು ಯಾವುದೋ ಒಂದು ಎಥ್ನಿಕ್‌ ಉಡುಪು ಹಾಕಿದಾರಾಯಿತು ಎಂದು ಕೊಳ್ಳುವ ಜಮಾನ ಇದಲ್ಲ. ಯಾಕೆಂದರೆ, ಹಳೆಯ ವಿನ್ಯಾಸಕ್ಕೆ ಹೊಸ ಟಚ್‌ ನೀಡಿರುವ ಎಥ್ನಿಕ್‌ ಫಾರ್ಮಲ್ಸ್‌ ಬಿಡುಗಡೆಗೊಂಡಿವೆ.

ಮಕ್ಕಳಿಗೂ ಮಿನಿ ಡಿಸೈನರ್‌ವೇರ್‌ಗಳು

ಇನ್ನು ಮಕ್ಕಳಿಗೆ ದೊಡ್ಡವರ ಡಿಸೈನರ್‌ವೇರ್‌ಗಳ ರಿಪ್ಲಿಕಾ ಎನ್ನಬಹುದಾದ ಎಲ್ಲಾ ಬಗೆಯ ಮಿನಿ ಡಿಸೈನರ್‌ವೇರ್‌ಗಳು ಕಾಲಿಟ್ಟಿವೆ. ಹೆಣ್ಣುಮಕ್ಕಳಿಗೆ ಲೆಕ್ಕವಿಲ್ಲದಷ್ಟು ಬಗೆಯ ಮಿನಿ ಲೆಹೆಂಗಾ, ಶರಾರ, ಗಾಗ್ರಾಗಳು ಆಗಮಿಸಿದ್ದರೇ, ಗಂಡು ಮಕ್ಕಳಿಗೆ ಧೋತಿ, ಕುರ್ತಾ, ಶೆರ್ವಾನಿಗಳು ಮಿನಿ ಸೈಝ್‌ನಲ್ಲಿ ಲಭ್ಯ ಎನ್ನುತ್ತಾರೆ ಮಾರಾಟಗಾರರು.

ಇದನ್ನೂ ಓದಿ | Dandiya Fashion: ನವರಾತ್ರಿಯ ದಾಂಡಿಯಾ ಸಂಭ್ರಮಕ್ಕೆ ಸಾಥ್‌ ನೀಡುವ 3 ಟ್ರೆಡಿಷನಲ್‌ ಎಥ್ನಿಕ್‌ವೇರ್ಸ್

ಜ್ಯುವೆಲ್ಲರಿ ಲೋಕ

ಮೊದಲೆಲ್ಲಾ ಕೆಲವೊಂದು ಹಬ್ಬಗಳಿಗೆ ಸೀಮಿತವಾಗಿದ್ದ ಜ್ಯುವೆಲ್ಲರಿ ಕೊಳ್ಳುವ ಟ್ರೆಂಡ್‌ ಇದೀಗ ಈ ಹಬ್ಬಕ್ಕೂ ವಿಸ್ತರಿಸಿದೆ. ಟ್ರೆಡಿಷನಲ್‌ ಲುಕ್‌ ನೀಡುವ ಆಭರಣಗಳ ಖರೀದಿ ಹೆಚ್ಚಾಗಿದೆ. ಇನ್ನುಳಿದಂತೆ ಕಂಟೆಂಪರರಿ ಡಿಸೈನ್‌ಗಳು ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿವೆ. ಇನ್ನು ದಾಂಡಿಯಾ ಪ್ರೇಮಿಗಳಿಗೆ ಇಮಿಟೇಷನ್‌ ಜ್ಯುವೆಲ್ಲರಿಗಳು ಆಕರ್ಷಿಸುತ್ತಿವೆ ಎನ್ನುತ್ತಾರೆ ಮಾರಾಟಗಾರರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version