ತಮ್ಮ ಸ್ಟೈಲಿಶ್ ಔಟ್‌ಫಿಟ್‌ಗಳಿಂದ ಕಿಯಾರಾ ಆಡ್ವಾಣಿ ಎಲ್ಲರ ಗಮನ ತಮ್ಮತ್ತ ಸೆಳೆಯುತ್ತಲೆ ಇರುತ್ತಾರೆ. ಇವೆಂಟ್ ಯಾವುದೇ ಇರಲಿ, ಅವಾರ್ಡ್ ಶೋ ಅಥವಾ ಪಾರ್ಟಿ, ಕಿಯಾರಾ ಸ್ಟೈಲಿಶ್ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ.
ಬಾಲಿವುಡ್‌ನಲ್ಲಿ ಎಲ್ಲೆಡೆ ದೀಪಾವಳಿ ಪಾರ್ಟಿಗಳದ್ದೇ ಕಾರುಬಾರು. ಎಲ್ಲ ನಟ-ನಟಿಯರು ಪಾರ್ಟಿಯಿಂದ ಪಾರ್ಟಿಗೆ ಓಡಾಡುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಕಿಯಾರಾ ತಮ್ಮ ದೀಪಾವಳಿ ಔಟ್‌ಫಿಟ್‌ನಿಂದ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಧರ್ಮಾ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಕರಣ್ ಜೋಹರ್ ಏರ್ಪಡಿಸಿದ್ದ ಪೂಜೆಯಲ್ಲಿ ಕಿಯಾರಾ ಪಾಲ್ಗೊಂಡಿದ್ದರು. ಸಿದ್ಧಾರ್ಥ ಮಲ್ಹೋತ್ರ ಹಾಗೂ ಕರಣ್ ಜೋಹರ್ ಜತೆಯಲ್ಲಿನ ಫೋಟೊ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ಕಿಯಾರಾ ದೀಪಾವಳಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕರಣ್ ಜೋಹರ್, ಸಿದ್ಧಾರ್ಥ ಮಲ್ಹೋತ್ರ, ಅಪೂರ್ವ ಮೆಹ್ತಾ ಹಾಗೂ ಮನೀಷ್ ಮಲ್ಹೋತ್ರ ಜತೆಗಿನ ಫೋಟೊಗಳಲ್ಲಿ ಮನೀಷ್ ಮಲ್ಹೋತ್ರ ಡಿಸೈನ್ ಮಾಡಿದ ಬ್ರೈಟ್ ಗ್ರೀನ್ ಶರಾರಾ ಸೆಟ್‌ನಲ್ಲಿ ಕಿಯಾರಾ ಕಾಣಿಸಿಕೊಂಡಿದ್ದಾರೆ.
ಸುಂದರವಾದ ಎಂಬ್ರಾಯ್ಡರಿ ಇರುವ ವಿ-ನೆಕ್ ಪೆಪ್ಲಮ್ ಕುರ್ತಾಗೆ ಕಿಯಾರಾ ಹಸಿರು ಬಣ್ಣದ ಶರಾರಾ ಧರಿಸಿದ್ದರು. ಈ ಕುರ್ತಾ ಸೆಟ್‌ನ ಬೆಲೆ ಬರೋಬ್ಬರಿ 1,69,000 ರೂ!
ಇದನ್ನೂ ಓದಿ : Deepawali Mens Royal Fashion | ದೀಪಾವಳಿ ಸಂಭ್ರಮಕ್ಕೆ ಎಂಟ್ರಿ ಕೊಟ್ಟ ಮೆನ್ಸ್ ರಾಯಲ್ ಡಿಸೈನರ್‌ವೇರ್ಸ್