ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಳಕಿನ ಹಬ್ಬ ದೀಪಾವಳಿಯಲ್ಲಿ ತಾರೆಯರಂತೆ ಮಿನುಗಲು ಯಾರು ಬಯಸುವುದಿಲ್ಲ (Deepavali Celebriety Look) ಹೇಳಿ! ಎಲ್ಲರಿಗೂ ತಾವು ಆಕರ್ಷಕವಾಗಿ ಅದರಲ್ಲೂ ಸಿನಿಮಾ ತಾರೆಯರಂತೆ ಕಾಣಿಸಬೇಕೆಂಬ ಆಕಾಂಕ್ಷೆ ಇದ್ದೇ ಇರುತ್ತದೆ. ಇದಕ್ಕಾಗಿ ಧರಿಸುವ ಔಟ್‌ಫಿಟ್ಸ್, ಮೇಕಪ್, ಹೇರ್‌ಸ್ಟೈಲ್ ಹಾಗೂ ಫೆಸ್ಟಿವ್ ಲುಕ್ ಫಾಲೋ ಮಾಡಬೇಕಾಗುತ್ತದೆ. ಅವುಗಳಲ್ಲಿ ಈ 5 ಸ್ಟೈಲಿಂಗ್ ರೂಲ್ಸ್ ಫಾಲೋ ಮಾಡಿ, ತಾರೆಯರಂತೆ ಕಾಣಿಸಿಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸೂಕ್ತ ಟ್ರೆಡಿಷನಲ್ ಅಟೈರ್ ಸೆಲೆಕ್ಟ್ ಮಾಡಿ
ಈ ಫೆಸ್ಟಿವ್ ಸೀಸನ್‌ನ ಟ್ರೆಂಡಿ ಅಟೈರ್ ಅಥವಾ ಡಿಸೈನರ್‌ವೇರ್ ಸೆಲೆಕ್ಟ್ ಮಾಡಿ. ಅದರಲ್ಲೂ ಈ ಬಾರಿ ಟ್ರೆಂಡಿಯಾಗಿರುವ ಹೆವ್ವಿ ಡಿಸೈನ್ ಇರುವಂತಹ ಜಗಮಗಿಸುವ ಔಟ್‌ಫಿಟ್ ಆಯ್ಕೆ ಮಾಡಿ. ಧರಿಸಿದಾಗ ಗ್ರ್ಯಾಂಡ್ ಲುಕ್ ನೀಡಬೇಕು. ಆದಷ್ಟೂ ದುಪಟ್ಟಾ ಇರುವಂತಹ ಜರತಾರಿ ಫ್ಯಾಬ್ರಿಕ್ ಧರಿಸಿ. ಲೆಹೆಂಗಾ, ಗಾಗ್ರ, ಶರಾರಾ, ಲಾಂಗ್ ಸ್ಕರ್ಟ್, ಸೆಮಿ ಫಾರ್ಮಲ್ಸ್, ಟ್ರೆಡಿಷನಲ್ ಗೌನ್ ಆಯ್ಕೆ ಮಾಡಬಹುದು. ಸೀರೆಯಾದಲ್ಲಿ ಡಿಸೈನರ್ ರೇಷ್ಮೆ ಅಥವಾ ಶಿಮ್ಮರಿಂಗ್ ಸೀರೆ ಉಡಿ.
ಟ್ರೆಂಡಿ ಜ್ಯುವೆಲರಿ
ಕೇವಲ ನಿಮ್ಮ ಅಟೈರ್ ನಿಮ್ಮನ್ನು ಗ್ರ್ಯಾಂಡಾಗಿ ಬಿಂಬಿಸುವುದಿಲ್ಲ! ಇದರೊಂದಿಗೆ ಜ್ಯುವೆಲರಿಗಳನ್ನು ಧರಿಸಿ. ಬಂಗಾರದ್ದಾದಲ್ಲಿ ಕಂಪ್ಲೀಟ್ ಸೆಟ್ ಧರಿಸಿ. ಕಮರ್‌ಬಾಂದ್ ಹಾಗೂ ಮಾಂಗ್‌ಟೀಕಾ ಗ್ರ್ಯಾಂಡಾಗಿ ಬಿಂಬಿಸುತ್ತದೆ. ಇನ್ನು ಮ್ಯಾಚಿಂಗ್ ಧರಿಸುವುದಾದಲ್ಲಿ ಆದಷ್ಟೂ ಸ್ಟೇಟ್‌ಮೆಂಟ್ ಜ್ಯುವೆಲರಿಯನ್ನು ಆಯ್ಕೆ ಮಾಡಿ. ಇಮಿಟೇಷನ್ ಆಭರಣಗಳು ಟ್ರೆಂಡ್‌ನಲ್ಲಿವೆ ಅವನ್ನು ಬೇಕಾದಲ್ಲಿ ಧರಿಸಬಹುದು.
ಫೆಸ್ಟಿವ್ ಮೇಕಪ್‌ಗೆ ಆದ್ಯತೆ
ಹಬ್ಬಕ್ಕೆ ಮ್ಯಾಚ್ ಆಗುವಂತಹ ನಿಮ್ಮ ಸ್ಕಿನ್ ಟೋನ್‌ಗೆ ಹೊಂದುವಂತಹ ಮೇಕಪ್‌ಗೆ ಸೈ ಎನ್ನಿ. ನೀವು ಧರಿಸುವ ಉಡುಪಿಗೆ ಮ್ಯಾಚ್ ಆಗುವಂತಹ ಲಿಪ್‌ಸ್ಟಿಕ್ ಹಚ್ಚಿ. ರೆಡ್ ಲಿಪ್‌ಸ್ಟಿಕ್, ಮೆಜೆಂತಾ, ವೈನ್ ರೆಡ್ ಲಿಪ್‌ಶೇಡ್‌ಗಳು ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ನ್ಯೂಡ್ ಲಿಪ್‌ಸ್ಟಿಕ್‌ತೀರಾ ಸಿಂಪಲ್ ಲುಕ್ ನೀಡುತ್ತದೆ.
ಅತ್ಯಾಕರ್ಷಕ ಐ ಮೇಕಪ್
ದೀಪಾವಳಿ ಬೆಳಕಿನ ಹಬ್ಬವಾದ್ದರಿಂದ ನಿಮ್ಮ ಐ ಮೇಕಪ್ ಕೂಡ ಗ್ರ್ಯಾಂಡಾಗಿರಲಿ. ಶಿಮ್ಮರಿಂಗ್ ಐ ಶೇಡ್ಸ್ ನೋಡಲು ಚೆನ್ನಾಗಿ ಕಾಣುತ್ತವೆ. ಕಾಡಿಗೆ ಅಥವಾ ಐ ಲೈನರ್ ಹಚ್ಚಲು ಮರೆಯದಿರಿ. ಟ್ರೆಡಿಷನಲ್ ಲುಕ್ ನಿಡುವಂತಹ ಐ ಮೇಕಪ್ ಮಾಡಿ.
ಆಕರ್ಷಕ ಹೇರ್‌ಸ್ಟೈಲ್
ಅಟೈರ್‌ಗೆ ತಕ್ಕಂತೆ ಹೇರ್‌ಸ್ಟೈಲ್ ಮಾಡಿ. ಇದೀಗ ನಾನಾ ಬಗೆಯ ಜಡೆ ಡಿಸೈನ್‌ಗಳು ಪರಿಚಿತಗೊಂಡಿವೆ. ಅದರಲ್ಲೂ ಪರ್ಲ್ ಹಾಗೂ ಹೇರ್ ಜ್ಯುವೆಲರಿ ಬಳಸುವಂತಹ ಕೂದಲ ವಿನ್ಯಾಸ ಆಯ್ಕೆ ಮಾಡುವುದು ಸೂಕ್ತ. ಜಡೆ ಬೇಡವಾದಲ್ಲಿ ಹಾಫ್ ಆಂಡ್ ಹಾಫ್ ರಿಂಗ್ಲೇಟ್ಸ್ ಹಾಗೂ ಡಿಸೈನರ್ ಜಡೆ ಹಾಕಿ. ಆರ್ಟಿಫಿಷಿಯಲ್ ಹೇರ್ ಎಕ್ಸ್‌ಟೆನ್ಷನ್ ಅಥವಾ ಡಿಸೈನರ್ ಹೇರ್ ಹಾಕಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Saree Fashion: ನಿಮ್ಮ ಹಳೆ ಸೀರೆಗೆ ನೀಡಿ ನಯಾ ಲುಕ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ