ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಳಕಿನ ಹಬ್ಬ ದೀಪಾವಳಿಗೆ (Deepavali Nailart) ನಾನಾ ಡಿಸೈನ್‌ನ ದೀಪಗಳ ಚಿತ್ತಾರವಿರುವ ನೇಲ್‌ಆರ್ಟ್ ಬಿಡುಗಡೆಗೊಂಡಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲೂ, ಬ್ಯೂಟಿ ಬ್ಲಾಗ್‌ಗಳಲ್ಲೂ ಹಂಗಾಮ ಎಬ್ಬಿಸಿವೆ. ಇನ್ನು ಇನ್‌ಸ್ಟಂಟ್ ನೇಲ್ ಡಿಸೈನ್ ಪ್ರಿಯರಿಗೆ ಇಷ್ಟವಾಗುವಂತೆ, ಪ್ರೆಸ್ ಆನ್ ನೇಲ್ ಪ್ಯಾಕ್‌ನಲ್ಲೂ ಇವು ದೊರೆಯುತ್ತಿವೆ.
ಫೆಸ್ಟಿವ್ ಸೀಸನ್ ನೇಲ್ ಆರ್ಟ್
ಫೆಸ್ಟಿವ್ ಸೀಸನ್‌ನಲ್ಲಿ ಹಬ್ಬದ ಥೀಮ್‌ಗೆ ತಕ್ಕಂತೆ ಬಗೆಬಗೆಯ ವೆರೈಟಿ ದೀಪದ ನೇಲ್ ಆರ್ಟ್ ಟ್ರೆಂಡಿಯಾಗಿದೆ. ದೀಪಾವಳಿ ಹಬ್ಬದ ಥೀಮ್ ಒಳಗೊಂಡಂತೆ ದೀಪಗಳ ಚಿತ್ರ ಮತ್ತು ಲೈಟಿಂಗ್‌ಗಳ ಚಿತ್ರಗಳ ನೇಲ್ ಆರ್ಟ್ ಮಹಿಳೆಯರನ್ನು ಆಕರ್ಷಿಸುತ್ತಿದೆ.
ದೀಪಾವಳಿಯ ಕಲರ್‌ಫುಲ್ ಥೀಮ್ ಚಿತ್ತಾರ
ಉಗುರಿನ ಮೇಲೆ ಸಾಲು ಸಾಲಿನ ದೀಪಗಳ ಸಾಲು, ನಾನಾ ಶೈಲಿಯ ದೀಪದ ಚಿತ್ರ, ತೂಗು ಹಾಕಿರುವ ಆಕಾಶ ಬುಟ್ಟಿ, ನಕ್ಷತ್ರ, ಚಂದ್ರ, ಬಣ್ಣ ಬಣ್ಣದ ಲೈಟಿಂಗ್ಸ್ ಇರುವಂತಹ ದೀಪಾವಳಿಯ ಮಿನಿಯೇಚರ್ ನೇಲ್ ಆರ್ಟ್ ಡಿಸೈನ್‌ಗಳು ಈ ಫೆಸ್ಟಿವ್ ಸೀಸನ್‌ನಲ್ಲಿಚಾಲ್ತಿಯಲ್ಲಿವೆ. ಇನ್ನು ನೇಲ್ ಡಿಸೈನರ್ ರಾಕಿ ಹೇಳುವಂತೆ, ಕ್ರಿಯೇಟೀವ್ ಥೀಮ್‌ನೊಂದಿಗೆ ಆಕರ್ಷಕವಾಗಿ ಸುಂದರವಾಗಿ ಚಿತ್ರಿಸಬಹುದು. ಇಂಥ ಚಿತ್ರಗಳನ್ನು ಬಿಡಿಸಲು ಆದಷ್ಟು ಮಲ್ಟಿ ಕಲರ್ ಬಳಕೆ ಮಾಡಿದರೆ ಡಿಸೈನ್ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಕೊಂಚ ಕ್ರಿಯಾತ್ಮಕ ಮನಸ್ಸಿದ್ದಲ್ಲಿ ಮನೆಯಲ್ಲೂ ದೀಪಾವಳಿ ನೇಲ್ ಆರ್ಟ್ ಡಿಸೈನ್ ಮಾಡಬಹುದುಎನ್ನುತ್ತಾರೆ.
ಬಣ್ಣ ಬಣ್ಣದ ಹಣತೆ
ನೀವು ಮನೆಯಲ್ಲೆ ಚಿತ್ತಾರ ಮೂಡಿಸುವುದಾದಲ್ಲಿ ಮೊದಲಿಗೆ ಮೆನಿಕ್ಯೂರ್ ಮಾಡಿ. ಸಿಂಗಲ್ ಕೋಟ್ ಹಚ್ಚಿ. ನಂತರ ನಿಮಗೆ ಬೇಕಾದ ವರ್ಣದಿಂದ ಒಂದೊಂದು ಉಗುರಿಗೂ ಒಂದೇ ರೀತಿಯ ಚಿತ್ರ ಅಥವಾ ಒಂದೊಂದು ಉಗುರಿಗೂ ಒಂದೊಂದು ವಿವಿಧ ವಿನ್ಯಾಸದ ಬೆಳಗುವ ಹಣತೆಯ ಚಿತ್ರವನ್ನು ಮೂಡಿಸಿ. ಇದು ಆಕರ್ಷಕವಾಗಿ ಕಾಣುತ್ತದೆ. ಸಾಲು ದೀಪ, ತೂಗು ದೀಪ, ದೀಪದ ಜತೆ ಪುಟ್ಟ ಪುಟ್ಟ ರಂಗೋಲಿ ಇರುವ ನೇಲ್ ಆರ್ಟ್ ಡಿಸೈನ್‌ಗಳು ಕಣ್ಮನ ಸೆಳೆಯುತ್ತವೆ. ಚಿತ್ರ ಬಿಡಿಸಿದ ಮೇಲೆ ಅದಕ್ಕೆ ಗೋಲ್ಡ್ ಅಥವಾ ಸಿಲ್ವರ್ ಗ್ಲಿಟರ್ ಬಣ್ಣವನ್ನು ನೇಲ್ ನಿಡಲ್‌ನಿಂದ ಡಿಸೈನ್ ಮಾಡಿ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್.
ನೇಲ್ ಡಿಸೈನ್ ಹೀಗಿರಲಿ
- ಉಗುರನ್ನು ಸಿಂಗರಿಸಲು ನೇಲ್ ಆರ್ಟ್ ಕಿಟ್ ಬಳಸಿ ಡಿಸೈನ್ ಮಾಡಿ.
- ನೇಲ್ ಆರ್ಟ್ಗೆ ಮೂರಕ್ಕಿಂತ ಹೆಚ್ಚು ಬಣ್ಣ ಬಳಕೆ ಮಾಡಿ.
- ಲೈಟ್ ಮತ್ತು ಡಾರ್ಕ್ ಬಣ್ಣಗಳ ಕಾಂಟ್ರೆಸ್ಟ್ ಇರಲಿ. ಬ್ಯಾಕ್ಗ್ರೌಂಡ್ಗೆ ಲೈಟ್ ಕಲರ್ ಮತ್ತು ಚಿತ್ರಗಳಿಗೆ ಡಾರ್ಕ್ ಬಣ್ಣ ಬಳಸಿ ಚಿತ್ತಾರ ಮೂಡಿಸಿ.
- ಉಗುರಿನ ಮೇಲೆ ಹಬ್ಬಕ್ಕೆ ಸಂಬಂಧಿಸಿದ ವಸ್ತುಗಳ ಚಿತ್ರ ಬರೆಯುವ ಮುನ್ನ ಅದರ ಚಿತ್ರವನ್ನು ಪೇಪರ್ ಮೇಲೆ ಬಿಡಿಸಿ. ಬಣ್ಣ ಹಚ್ಚಿ ನಂತರ ಅದರಂತೆಯೇ ಉಗುರಿನ ಮೇಲೆ ಚಿತ್ತಾರ ಮಾಡಿ ವಿನ್ಯಾಸ ಗೊಳಿಸಿ.
- ಚಿತ್ರಗಳಿಗೆ ಗೋಲ್ಡ್ ಮತ್ತು ಸಿಲ್ವರ್ ಗ್ಲಿಟರ್ ಶೇಡ್ ಉಗುರಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Deepavali Sky lanterns: ದೀಪಾವಳಿ ಅಲಂಕಾರಕ್ಕೆ ಬಂತು ವೆರೈಟಿ ಆಕಾಶ ದೀಪ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ