ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದ ಪ್ರಯುಕ್ತ ಪುರುಷರ ಫ್ಯಾಷನ್‌ನಲ್ಲಿ ರಾಯಲ್ ಇಮೇಜ್ ನೀಡುವ ನಾನಾ ವಿನ್ಯಾಸದ ಎಥ್ನಿಕ್ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿವೆ.
ನೋಡಲು ಭಾರಿ ಎನಿಸುವ ಡಿಸೈನರ್‌ವೇರ್‌ಗಳಿಂದ ಸಿಂಪಲ್ ಲುಕ್ ನೀಡುವಂತಹ ಹ್ಯಾಂಡ್‌ವರ್ಕ್ ಇರುವಂತಹ ಎಥ್ನಿಕ್ ಡಿಸೈನರ್‌ವೇರ್‌ಗಳು ಪುರುಷರ ಮೆನ್ಸ್‌ವೇರ್ ಸೆಕ್ಷನ್‌ನಲ್ಲಿ ಬಿಡುಗಡೆಗೊಂಡಿವೆ.
ಈ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸ, ಊಹೆಗೂ ನಿಲುಕದ ಚಿತ್ತಾರ, ಡಿಗ್ನಿಟಿ ಎತ್ತಿ ಹಿಡಿಯುವಂತಹ ಕಲರ್ಸ್ ಹಾಗೂ ಶೇಡ್ಸ್‌ನಲ್ಲಿ ಕುರ್ತಾ-ಪೈಜಾಮ, ಬಂದಲಾಗ, ಜುಬ್ಬಾ –ಪೈಜಾಮ, ಕೋಟ್ ಸೂಟ್‌ಗಳು ಆಗಮಿಸಿವೆ. ಪುರುಷರು, ಕಾರ್ಪೋರೇಟ್ ಕ್ಷೇತ್ರದವರು, ಬಿಸ್ನೆಸ್‌ಮೆನ್, ಎಂಟರ್‌ಟೈನ್‌ಮೆಂಟ್ ಕ್ಷೇತ್ರ ಹಾಗೂ ಕಾಮನ್‌ಮೆನ್ ವರ್ಗ ಹೀಗೆ ಎಲ್ಲರಿಗೂ ಇಷ್ಟವಾಗುವಂತಹ ನಾನಾ ಡಿಸೈನ್‌ಗಳಲ್ಲಿ ಇವು ಕಾಣಿಸಿಕೊಂಡಿವೆ. ಫ್ಯಾಬ್ರಿಕ್‌ಗೆ ತಕ್ಕಂತೆ ಆಯಾ ವರ್ಗದವರಿಗೆ ಮ್ಯಾಚ್ ಆಗುವಂತಹ ಪ್ರೈಸ್ ಟ್ಯಾಗ್‌ಗಳಲ್ಲಿ ದೊರಕುತ್ತಿವೆ.
ಎಥ್ನಿಕ್ ಸ್ಟೈಲ್‌ನಲ್ಲೆ ರಾಯಲ್ ಲುಕ್
“ಹಿಂದಿನ ಕಾಲದಂತೆ ಪುರುಷರು ಫೆಸ್ಟೀವ್ ಸೀಸನ್‌ನಲ್ಲಿ ಕೈಗೆ ಸಿಕ್ಕ ಫಾರ್ಮಲ್ ಇಲ್ಲವೇ ಎಥ್ನಿಕ್ ಲುಕ್ ನೀಡುವ ಉಡುಪಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ರಾಯಲ್ ಇಮೇಜ್ ನೀಡುವ ಡಿಸೈನರ್‌ವೇರ್‌ಗಳತ್ತ ಮುಖ ಮಾಡುತ್ತಿದ್ದಾರೆ.
ರಾಯಲ್ ಲುಕ್ ಇಮೇಜ್ ಕೇವಲ ಹುಡುಗಿಯರಿಗೆ ಮಾತ್ರವಲ್ಲ. ಹುಡುಗರಿಗೂ ಬಂದಿದೆ. ಅದು ಫಂಕಿ ಹುಡುಗರ ಇಮೇಜನ್ನೇ ಬದಲಿಸುವಂತಹ ಡಿಸೈನರ್‌ವೇರ್‌ಗಳಲ್ಲಿಕಾಣಿಸಿಕೊಂಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಜ್.
ಬಿಂದಾಸ್ ಹುಡುಗರಿಗೂ ಎಥ್ನಿಕ್ ಸ್ಟೈಲ್
ಹಬ್ಬಗಳಲ್ಲಿ ಬಿಂದಾಸ್ ಹುಡುಗರು ಕೂಡ ಎಥ್ನಿಕ್ ಸ್ಟೈಲ್ ಟ್ರೈ ಮಾಡಬಹುದು. ಆ ಮಟ್ಟಿಗೆ ಈ ಹೊಸ ಎಥ್ನಿಕ್ ಡಿಸೈನರ್‌ವೇರ್‌ಗಳು ವಿನ್ಯಾಸಗೊಂಡಿವೆ. ಇದು ಡಿಫರೆಂಟ್ ಲುಕ್ ನೀಡುವುದರೊಂದಿಗೆ ಫೆಸ್ಟೀವ್ ಸೀಸನ್‌ನ ಸಂಭ್ರಮವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ.
ಸದಾ ಕ್ಯಾಷುವಲ್‌ನಲ್ಲಿ ಕಾಣಿಸಿಕೊಂಡು ಬೋರಾಗಿರುವ ಈ ಜನರೇಷನ್‌ನ ಹುಡುಗರು ಕೂಡ ಈ ಎಥ್ನಿಕ್ ಉಡುಪುಗಳನ್ನು ಪ್ರಯೋಗ ಮಾಡಬಹುದು.
ಇನ್ನು ಸ್ಟೈಲಿಸ್ಟ್ ಅಜಿತ್ ಹೇಳುವಂತೆ, ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಹುಡುಗರು ಸಿಂಪಲ್ ಡಿಸೈನ್ ಇರುವಂತಹ ಎಥ್ನಿಕ್ ರಾಯಲ್ ಇಮೇಜ್ ನೀಡುವ ಉಡುಪುಗಳನ್ನು ಧರಿಸಬಹುದು. ನೋಡಲು ಆಕರ್ಷಕವಾಗಿ ಕಾಣುತ್ತದೆ. ಇನ್ನು ಹಬ್ಬಗಳಲ್ಲಿ ಟ್ರೆಂಡಿಯಾಗುವ ಎಥ್ನಿಕ್ ಸ್ಟೈಲ್ ಸ್ಟೇಟ್‌ಮೆಂಟ್ ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ ಎನ್ನುತ್ತಾರವರು.
ರಾಯಲ್ ಲುಕ್ ಪಡೆಯಲು ಬಯಸುವ ಹುಡುಗರಿಗೊಂದಿಷ್ಟು ಸಲಹೆ
- ಹ್ಯಾಂಡ್ಮೇಡ್ ವಿನ್ಯಾಸದ ಶೆರ್ವಾನಿ, ಕುರ್ತಾಗಳ ಆಯ್ಕೆ ಮಾಡಿ.
- ಎಥ್ನಿಕ್ ಉಡುಪು ಧರಿಸಿದಾಗ ಸ್ಪೈಕ್ಸ್ ಹೇರ್ಸ್ಟೈಲ್ ಬೇಡ.
- ಬಂಗಾರದ ಆಕ್ಸೆಸರೀಸ್ ಧರಿಸಬಹುದು.
- ಫಾರ್ಮಲ್ ಶೂ ಮ್ಯಾಚ್ ಮಾಡಿ.
- ಫೆಸ್ಟೀವ್ ಲುಕ್ಗೆ ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಮ್ಯಾಚ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Deepawali Saree Fashion | ದೀಪಾವಳಿ ಹಬ್ಬದ ಸಂಭ್ರಮಕ್ಕೆ ಬಂತು ಕಲರ್‌ಫುಲ್ ಡಿಸೈನರ್ ಸೀರೆಗಳು