-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿ ಸಂಭ್ರಮ ಹೆಚ್ಚಿಸಲು ಇದೀಗ ಡಿಸೈನರ್ ಮಾಂಗ್‌ಟೀಕಾ/ಬೈತಲೆ ಬೊಟ್ಟು ಫ್ಯಾಷನ್ ಜ್ಯುವೆಲ್ ಲೋಕಕ್ಕೆ ಕಾಲಿಟ್ಟಿವೆ.
ಟ್ರೆಂಡಿಯಾಗಿರುವ ಅತ್ಯಾಕರ್ಷಕ ಡಿಸೈನ್‌ನ ಮಾಂಗ್‌ಟೀಕಾ
ನೋಡಲು ಒಂದಕ್ಕಿಂತ ಆಕರ್ಷಕವಾಗಿರುವ ಡಿಸೈನರ್ ಮಾಂಗ್‌ಟೀಕಾಗಳು ಲೆಕ್ಕವಿಲ್ಲದಷ್ಟು ವೆರೈಟಿ ಡಿಸೈನ್‌ನಲ್ಲಿ ದೊರೆಯುತ್ತಿವೆ. ಆದರೆ, ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವುದು ಗೋಲ್ಡ್ ಕೋಟಿಂಗ್‌ನವು ಹಾಗೂ ವನ್ ಗ್ರಾಮ್ ಗೋಲ್ಡ್‌ನದ್ದು. ಕುಂದನ್, ಕ್ರಿಸ್ಟಲ್ಸ್, ರೂಬಿ, ಜೇಡ, ನಾನಾ ಬಗೆಯ ಪ್ರಿಶೀಯಸ್ ಹರಳುಗಳನ್ನೊಳಗೊಂಡ ಡಿಸೈನ್‌ಗಳು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಮಾರಾಟಗಾರರು.
ಗ್ರ್ಯಾಂಡ್‌ಲುಕ್‌ಗಾಗಿ ಮಾಂಗ್‌ಟೀಕಾ
ಇತಿಹಾಸ ಹೇಳುವಂತೆ, ಕೇವಲ ರಾಜಮನೆತನದವರಿಗೆ ಮಾತ್ರ ಮೀಸಲಾಗಿದ್ದ ಮಾಂಗ್‌ಟೀಕಾವನ್ನು ಅತಿ ಹೆಚ್ಚಾಗಿ ಧರಿಸುತ್ತಿದ್ದದ್ದು ರಜಪೂತರು, ಮೊಗಲರು. ರಾಜಮನೆತನದ ರಾಣಿಯರು ಹಣೆಯ ಸಿಂಗಾರಕ್ಕಾಗಿ ಮಾಂಗ್‌ಟೀಕಾ ಧರಿಸುತ್ತಿದ್ದರು. ಕಾಲ ಕಳೆದಂತೆ ವೆಡ್ಡಿಂಗ್ ಜುವೆಲ್ ಲೋಕಕ್ಕೆ ಇವು ಎಂಟ್ರಿ ನೀಡಿದವು. ಹೆರಿಟೇಜ್ ಜುವೆಲ್ ಲಿಸ್ಟ್‌ಗೆ ಸೇರುವ ಇವನ್ನು ಬರಬರುತ್ತಾ ಗ್ರ್ಯಾಂಡ್ ಟ್ರೆಡಿಷನಲ್ ಲುಕ್ ಬಯಸುವ ಮಹಿಳೆಯರು ಸ್ವಾಗತಿಸಿದರು. ನಂತರ ಮದುವೆಗಳಲ್ಲಿ ಮಾತ್ರವಲ್ಲ, ಸಮಾರಂಭಗಳಲ್ಲೂ ಗ್ರ್ಯಾಂಡ್‌ಲುಕ್ ನೀಡುವ ಸಲುವಾಗಿ ಮಾಂಗ್‌ಟೀಕಾ ಧರಿಸುವುದು ಕಾಮನ್ ಆಗತೊಡಗಿತು ಎಂದು ಮಾಂಗ್‌ಟೀಕಾದ ಹಿಸ್ಟರಿಯನ್ನು ತೆರೆದಿಡುತ್ತಾರೆ ಹೆರಿಟೇಜ್ ಜುವೆಲ್ ಡಿಸೈನರ್ ರಂಜಿತ್.
ಮಾಂಗ್‌ಟೀಕಾ ಆಯ್ಕೆ ಹೀಗಿರಲಿ
ಉದ್ದ ಮುಖದವರು ಆದಷ್ಟು ಮುಂಭಾಗದಲ್ಲಿಅಗಲ ವಿನ್ಯಾಸವಿರುವಂತಹ ಮಾಂಗ್‌ಟೀಕಾ ಆಯ್ಕೆ ಮಾಡಿಕೊಳ್ಳಬೇಕು. ಅಗಲ ಮುಖದವರು ತೆಳುವಾದ ಲೈನ್‌ನಂತಿರುವ ಹರಳಿನ ಮಾಂಗ್ ಟೀಕಾ ಧರಿಸಿದರೆ ಚೆನ್ನಾಗಿ ಕಾಣುತ್ತದೆ. ಟ್ರೆಂಡಿಯಾಗಿ ಕಾಣಿಸಲು ಕುಂದನ್‌ನದ್ದನ್ನು ಹಾಕಬಹುದು. ಫೋಟೋಶೂಟ್‌ಗಾದಲ್ಲಿ ಆದಷ್ಟೂ ಕಲರ್‌ಫುಲ್ ಇರುವಂತದ್ದನ್ನು ಧರಿಸಬಹುದು. ಮದುವೆಗೆ ಮ್ಯಾಚಿಂಗ್‌ನದ್ದು ಧರಿಸಬಹುದು. ಮಕ್ಕಳಿಗೆ ಸಿಂಪಲ್ ಡಿಸೈನ್‌ನದ್ದನ್ನು ಹಾಕಬಹುದು. ನವರಾತ್ರಿಯ ಸಂಭ್ರಮಕ್ಕೆ ಆದಲ್ಲಿ ಧರಿಸುವ ಗ್ರ್ಯಾಂಡ್ ಡಿಸೈನರ್‌ವೇರ್‌ಗೆ ಸೂಟ್ ಆಗುವಂತಹದ್ದನ್ನು ಸೆಲೆಕ್ಟ್ ಮಾಡಿ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಸುಕುಮಾರಿ.
ನವರಾತ್ರಿಯ ಮಾಂಗ್‌ಟೀಕಾ ಪ್ರಿಯರಿಗೆ ಒಂದಿಷ್ಟು ಸಲಹೆ
* ಕಂಪ್ಲೀಟ್ ಹೇರ್‌ಸ್ಟೈಲ್ ಆದ ನಂತರ ಮಾಂಗ್‌ಟೀಕಾ ಧರಿಸಿ.
* ಸರ್ವಾಲಂಕಾರ ಆದ ನಂತರ ಧರಿಸಿದರೇ ಉತ್ತಮ.
* ಹಣೆಯ ಮಧ್ಯಭಾಗದಲ್ಲಿ ಪಿನ್ ಮಾಡಿ ಬಳಸಿ.
* ನವರಾತ್ರಿಯ ಡ್ರೆಸ್‌ಕೋಡ್‌ಗೆ ಸೂಟ್ ಆಗುವಂತಿರಲಿ.
* ಟ್ರೆಡಿಷನಲ್ ಲುಕ್ ನೀಡುವಂತದ್ದನ್ನು ಖರೀದಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು