ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಣ್ಣಿಗೆ ಎದ್ದು ಕಾಣಿಸುವಂತಹ ಬಣ್ಣಬಣ್ಣದ ಡಿಸೈನರ್ ವೇರ್‌ಗಳು, ಬ್ರೈಟ್ ಡ್ರೆಸ್‌ಗಳು, ಈ ಕಲರ್‌ಗಳಲ್ಲೂ ಉಡುಗೆಗಳೂ ಇದ್ದವಾ! ಎಂದುಕೊಳ್ಳುವಷ್ಟರ ಮಟ್ಟಿಗೆ ಡಿಸೈನರ್ ವೇರ್‌ಗಳು ರ್ಯಾಂಪ್ ಮೇಲೆ ಅನಾವರಣಗೊಂಡವು. ನೋಡಲು (Dior Pre Fall Fashion Show) ಕಣ್ಮನ ಸೆಳೆಯುವಂತಹ ಡ್ರೆಸ್‌ಗಳು ನೆರೆದಿದ್ದ ಗಣ್ಯರನ್ನು ಸೆಳೆದವು.
ಭಾರತದಲ್ಲಿ ಡಿಯೋರ್‌ನ ಮೊದಲ ಫ್ಯಾಷನ್ ಶೋ
ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ಬಳಿ ನಡೆದ ಡಿಯೋರ್‌ನ ಮೊಟ್ಟ ಮೊದಲ ಫ್ಯಾಷನ್ ಶೋ ಕಲ್ಚರ್ ಹಾಗೂ ವಿನ್ಯಾಸದ ಸಮಾಗಮವಾಗಿತ್ತು. ಡಿಯೋರ್ ನಿರ್ದೇಶಕಿ ಮಾರಿಯಾ ಗ್ರಾಝಿಯಾ ಅವರ ಐಡಿಯಾದಂತೆ ಈ ಫ್ಯಾಷನ್ ಶೋವನ್ನು ಆಯೋಜಿಸಲಾಗಿತ್ತು.
ರ್ಯಾಂಪ್‌ನಲ್ಲಿ ಕ್ಲಾಸಿಕಲ್ ಮ್ಯೂಸಿಕ್
ಎಲ್ಲಾ ಫ್ಯಾಷನ್ ಶೋಗಳಲ್ಲಿ ಹಿಟ್ ರ್ಯಾಪ್ ಅಥವಾ ಶೋಗೆ ಸೂಟ್ ಆಗುವಂತಹ ಮ್ಯೂಸಿಕ್ ಹಾಕುವುದು ಕಾಮನ್. ಆದರೆ ಈ ಡಿಯೋರ್ ಶೋನಲ್ಲಿ ಮಾತ್ರ ಡೈರೆಕ್ಟರ್ ಮಾರಿಯಾ ಅವರ ಅಭಿಲಾಷೆಯಂತೆ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ರ್ಯಾಂಪ್ ವಾಕ್‌ನ ಹಿನ್ನೆಲೆ ಸಂಗೀತವಾಗಿ ಬಳಸಲಾಯಿತು. ಎಲ್ಲರಿಗೂ ಆಶ್ಚರ್ಯ ಮೂಡಿಸಿದ ವಿಷಯವೆಂದರೇ, ರ್ಯಾಂಪ್‌ನಲ್ಲಿ ಮೊದಲ ಮಹಿಳಾ ತಬಲಾ ವಾದಕಿ ಅನುರಾಧ ಪಾಲ್ ಅವರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಂಡಿಯನ್ ಮಾಡೆಲ್‌ಗಳಿಗಿಂತ ಹೊರಗಡೆಯವರೇ ಹೆಚ್ಚು
ಡಿಯೋರ್ ಫ್ಯಾನ್ ಶೋನಲ್ಲಿ ಕೇವಲ ಬೆರಳೆಣಿಕೆಯಷ್ಟರ ಮಟ್ಟಿಗೆ ಮಾತ್ರ ಭಾರತೀಯ ಮಾಡೆರಲ್‌ಗಳು ಕಣ್ಣಿಗೆ ಬಿದ್ದರು. ಇನ್ನುಳಿದಂತೆ ಎಲ್ಲರೂ ಹೊರಗಡೆಯವರಾಗಿದ್ದರು. ಈ ವಿಷಯ ಅಸಮಾಧಾನ ತರಿಸಿತು ಎನ್ನುತ್ತಾರೆ ಹೆಸರನ್ನು ಹೇಳಲು ಇಚ್ಛಿಸದ ಸ್ಟೈಲಿಸ್ಟ್. ಭಾರತೀಯ ಸಂಸ್ಕೃತಿಯನ್ನು ಪ್ರತಿಯೊಂದರಲ್ಲೂ ಎತ್ತಿ ಹಿಡಿದು ಕೊನೆಗೆ ರ್ಯಾಂಪ್ ಶೋನಲ್ಲಿ ಮಾತ್ರ ವಿದೇಶಿಯರಿಗೆ ಮಣೆ ಹಾಕಿದ್ದು ಸ್ಥಳಿಯರಲ್ಲಿ ಕೊಂಚ ಅಸಮಾಧಾನ ವ್ಯಕ್ತಪಡಿಸಿತು.
ಬಾಲಿವುಡ್ ಸೆಲೆಬ್ರೆಟಿಗಳ ದಂಡು
ಕ್ರಿಕೆಟಿಗ ವಿರಾಟ್ ಕೋಹ್ಲಿ, ನಟಿ ಅನುಷ್ಕಾ ಶರ್ಮಾ ಜೋಡಿ, ಅನನ್ಯಾ ಪಾಂಡೇ, ಸೋನಂ ಕಪೂರ್, ಅಭಿಷೇಕ್ ಬಚ್ಚನ್. ಅಥಿಯಾ ಶೆಟ್ಟಿ ಸೇರಿದಂತೆ ನಾನಾ ತಾರೆಯರು ಈ ಫ್ಯಾಷನ್ ಶೋನಲ್ಲಿ ಗೆಸ್ಟ್ ಲಿಸ್ಟ್‌ನಲ್ಲಿದ್ದರು. ಟ್ರೆಂಡಿ ವೈಬ್ರೆಂಟ್ ಶೇಡ್‌ಗಳಲ್ಲಿ ಕಾಣಿಸಿಕೊಂಡರು. ಬೇಸಿಗೆ ಬಂದರೂ ಇನ್ನೂ ಸಾಟೀನ್ ಫ್ಯಾಬ್ರಿಕ್‌ನ ಲೆಯರ್ ಔಟ್‌ಫಿಟ್‌ನಲ್ಲೆ ಕಾಣಿಸಿಕೊಂಡದ್ದು ಬಹುತೇಕರಲ್ಲಿ ಅಚ್ಚರಿ ಮೂಡಿಸಿತು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Photoshoot: ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ಕಪಲ್ ಎಂಗೇಜ್‌ಮೆಂಟ್ ಫ್ಯಾಷನ್ ಫೋಟೊಶೂಟ್